top of page
News Articles
Sathyapatha News Plus


20 ಲಕ್ಷ ದೋಚಿದ ಸಿಐಡಿ ಇನ್ಸ್ಪೆಕ್ಟರ್ ಸೇರಿ ಮೂವರ ಬಂಧನ
ಆನ್ಲೈನ್ ಟ್ರೇಡಿಂಗ್ನಲ್ಲಿ ಹೆಚ್ಚಿನ ಲಾಭದ ಆಮಿಷ ಒಡ್ಡಿ ಕೇರಳದ ಯುವಕರನ್ನು ಬೆಂಗಳೂರಿಗೆ ಕರೆಸಿ 20 ಲಕ್ಷ ರೂ. ದೋಚಿದ್ದ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಯುವಕರು 25 ಲಕ್ಷ ಹಣದೊಂದಿಗೆ ಮಡಿವಾಳದ ಹೋಟೆಲ್ಗೆ ಬಂದಾಗ, ಆರೋಪಿಗಳು ಪೊಲೀಸ್ ಜೀಪ್ನಲ್ಲಿ ಬಂದು ಬೆದರಿಕೆ ಹಾಕಿದ್ದಾರೆ. ನಂತರ ಯುವಕರ ಮೇಲೆ ಹಲ್ಲೆ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಧಿತ ಯುವಕರು ನೀಡಿದ ದೂರಿನನ್ವಯ ಡಕಾಯಿತಿ ಮತ್ತು ಒಳಸಂಚು ಪ್ರಕರಣ ದಾಖಲಾಗಿದ್ದು, ಮಡಿವಾಳ ಎಸಿಪಿ ವಾಸುದೇವ್ ನೇತೃತ್
Jun 201 min read


ಪ್ರಶ್ನೆಪತ್ರಿಕೆ ಸೋರಿಕೆ: ಇಂದು ನೀಟ್ ದೇಶವ್ಯಾಪಿ ಮಾಕ್ ಡ್ರಿಲ್, ನಾಳೆ ಮರುಪರೀಕ್ಷೆ
ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಾಳೆ ನೀಟ್-ಯುಜಿ ಮರುಪರೀಕ್ಷೆ ನಡೆಯಲಿದ್ದು, ಈ ದೆಸೆಯಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಇಂದು ದೇಶದ 551 ನಗರಗಳಲ್ಲಿ ಪೂರ್ಣ ಪ್ರಮಾಣದ ಮಾಕ್ ಡ್ರಿಲ್ ಹಮ್ಮಿಕೊಂಡಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಪ್ರಶ್ನೆಪತ್ರಿಕೆ ವಿತರಣೆ ಮತ್ತು ಸಂಗ್ರಹಣೆಯ ಅಣುಕು ಕಾರ್ಯಾಚರಣೆ ನಡೆಯಲಿದೆ. ನಾಳೆ ದೇಶಾದ್ಯಂತ 5,500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾಡಳಿತ, ರಾಜ್ಯ ಪೊಲೀಸ್ ಹಾಗೂ ಕೇಂದ್ರದ ವಿಶೇಷ ತಂಡಗಳನ್ನೊಳಗೊಂಡ ಮೂರು ಹಂತದ ಕಟ್ಟುನಿಟ್ಟಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಸುರಕ್ಷತೆಗಾಗಿ 2.5 ಲಕ್ಷ ಪೊಲೀಸರು ಹಾಗ
Jun 201 min read


ಬೆಂಗಳೂರು-ಮಂಗಳೂರು ವಂದೇ ಭಾರತ್: ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ
ಕರ್ನಾಟಕದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿಮೀ ಕಠಿಣ ಘಾಟ್ ವಿಭಾಗದಲ್ಲಿ ಜೂನ್ ಕೊನೆಯ ವಾರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ನ ಪ್ರಾಯೋಗಿಕ ಸಂಚಾರ ನಡೆಯುವ ಸಾಧ್ಯತೆಯಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಘಾಟಿ ಪ್ರದೇಶದಲ್ಲಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀಗೆ ಸೀಮಿತಗೊಳಿಸಲಾಗಿದೆ. ಇದಕ್ಕಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ರೈಲಿಗೆ ವಿಶೇಷ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ತಂತ್ರಜ್ಞಾನವನ್ನು ಅಳವಡಿ
Jun 191 min read


ನೀಟ್ ಮರುಪರೀಕ್ಷೆ: ಟೆಲಿಗ್ರಾಂ ನಿಷೇಧದ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಜೂನ್ 22ರವರೆಗೆ ದೇಶದಲ್ಲಿ ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ. ವಿಚಾರಣೆ ವೇಳೆ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು, ಕೇವಲ ನೀಟ್ ಆಕಾಂಕ್ಷಿಗಳಿಗಾಗಿ ದೇಶದ 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸಬಹುದೇ? ಹಾಗೂ ಸೋರಿಕೆ ತಡೆಗೆ ಟೆಲಿಗ್ರಾಂ ಸೂಕ್ತ ಕ್ರಮ ಕೈಗೊಂಡಿದೆಯೇ ಎಂದು ಕೇಂದ್ರವನ್ನು ಪ್ರಶ್ನಿಸಿದರು. ಟೆಲಿಗ್ರಾಂ ಪರ ವಾದಿಸಿದ ವಕೀಲ ಧ್ರುವ ಮೆಹ್ತಾ, ಆಕ್ಷೇಪಾರ್ಹ ಪೋಸ್ಟ್ಗಳನ್ನು ಮಾತ್ರ
Jun 191 min read


ಛತ್ತೀಸ್ಗಢದಲ್ಲಿ ಮರಳು ಗಣಿಗಾರಿಕೆ ವಿವಾದ: ಮಾಜಿ ಪಂಚಾಯತ್ ಅಧ್ಯಕ್ಷ ಸೇರಿ ಮೂವರ ಭೀಕರ ಹತ್ಯೆ
ಛತ್ತೀಸ್ಗಢದ ಕೊರಿಯಾ ಜಿಲ್ಲೆಯ ಸೋನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ ಗ್ರಾಮದಲ್ಲಿ ಮರಳು ಗಣಿಗಾರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಹತ್ಯಾಕಾಂಡ ನಡೆದಿದೆ. ಬಿಜೆಪಿ ನಾಯಕ ಹಾಗೂ ಜನಪದ್ ಪಂಚಾಯತ್ ಮಾಜಿ ಅಧ್ಯಕ್ಷ ಭರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್ ಸೇರಿದಂತೆ ಮೂವರು ಈ ಘಟನೆಯಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಈ ಘಟನೆಯಲ್ಲಿ ಭರತ್ ಸಿಂಗ್ ಅವರ ಫಾರ್ಚೂನರ್ ಎಸ್ಯುವಿ ಕಾರನ್ನು ಟ್ರಕ್ಗಳ ನಡುವೆ ಸಿಲುಕಿಸಿ, ತಪ್ಪಿಸಿಕೊಳ್ಳದಂತೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ
Jun 181 min read


ಪಾವತಿಸಿದರೆ ಸಿಗಲಿವೆ ಹೆಚ್ಚುವರಿ ಸೌಲಭ್ಯ - ದುಬಾರಿಯಾಗುತ್ತಾ ಇನ್ಸ್ಟಾ, ಫೇಸ್ಬುಕ್, ವಾಟ್ಸಾಪ್?!
ಸಾಮಾಜಿಕ ಜಾಲತಾಣ ದೈತ್ಯ ‘ಮೆಟಾ’ ಸಂಸ್ಥೆಯು ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ಗಳಿಗಾಗಿ ಜಾಗತಿಕವಾಗಿ ಹೊಸ ‘ಪ್ಲಸ್’ ಸಬ್ಸ್ಕ್ರಿಪ್ಷನ್ ಯೋಜನೆಗಳನ್ನು ಪ್ರಕಟಿಸಿದೆ. ಈ ಕುರಿತು ಸಂಸ್ಥೆಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥೆ ನವೋಮಿ ಗ್ಲೈಡ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪ್ಲಸ್ಗೆ ಮಾಸಿಕ ಸುಮಾರು ರೂ. 377 ಹಾಗೂ ವಾಟ್ಸಾಪ್ ಪ್ಲಸ್ಗೆ ರೂ. 282 ಶುಲ್ಕ ನಿಗದಿಪಡಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿನ ಹೂಡಿಕೆಗಾಗಿ ಹೊಸ ಆದಾಯ ಮೂಲ ಸೃಷ್ಟಿಸಲು ಮೆಟಾ ಈ ಚಂದಾದಾರಿಕೆ ಮಾದರಿ ಪರಿಚಯಿಸಿದೆ. ಈ ಪ್ರೀಮಿಯಂ ಯೋಜನೆಯಡಿ ಬಳಕೆದ
Jun 181 min read


ಅಕ್ರಮ ಜಾನುವಾರು ಸಾಗಾಟ: ಉಪ್ಪಿನಂಗಡಿಯಲ್ಲಿ ಇಬ್ಬರ ಬಂಧನ
ಹಾಸನದಿಂದ ಕೇರಳಕ್ಕೆ ದಾಖಲೆಗಳಿಲ್ಲದೆ ಅಕ್ರಮ ಹಾಗೂ ಹಿಂಸಾತ್ಮಕವಾಗಿ ಈಚರ್ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಜೂನ್ 17ರ ನಸುಕಿನ ಜಾವ 34 ನೆಕ್ಕಿಲಾಡಿಯ ಆನೆಬೈಲ್ ಎಂಬಲ್ಲಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತರನ್ನು ಲಾರಿ ಚಾಲಕ ಕಡೂರು ನಿವಾಸಿ ಪರ್ದಿನ್ ಖಾನ್ ಹಾಗೂ ಹೊಳೆನರಸೀಪುರದ ಜಾವೀದ್ ಪಾಷಾ ಎಂದು ಗುರುತಿಸಲಾಗಿದೆ. ರೆಹಮಾನ್ ಹೊಸೂರು ಪರಾರಿಯಾದ ಆರೋಪಿ. ಉಪ್ಪಿನಂಗಡಿ ಉಪನಿರೀಕ್ಷಕ ಸುತೇಶ್ ಕೆ.ಪಿ. ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಈ ಕಾರ್ಯಾಚರಣೆ ನಡೆಸಿದ್ದಾರೆ. ಲಾರಿ
Jun 181 min read


ಚಲಿಸುವ ರೈಲಿನಲ್ಲೇ ಗರ್ಭಿಣಿಗೆ ಹೆರಿಗೆ: ತಾಯಿ-ಮಗು ಸುರಕ್ಷಿತ
ಅಸ್ಸಾಂನಲ್ಲಿ ಚಲಿಸುತ್ತಿದ್ದ ಅವಧ್ ಅಸ್ಸಾಂ ಎಕ್ಸ್ಪ್ರೆಸ್ ರೈಲಿನಲ್ಲಿ ಜೂನ್ 14ರಂದು ಗರ್ಭಿಣಿಯೊಬ್ಬರಿಗೆ ಏಕಾಏಕಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ರೈಲಿನಲ್ಲಿದ್ದ ಸಹ ಪ್ರಯಾಣಿಕ ನರ್ಸ್ ಹಾಗೂ ರೈಲ್ವೆ ಸಿಬ್ಬಂದಿಯ ಸಮಯೋಚಿತ ನೆರವು ಮತ್ತು ಧೈರ್ಯದಿಂದ ಮಹಿಳೆ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ರಂಗಿಯಾ ನಿಲ್ದಾಣದಲ್ಲಿ ವೈದ್ಯಕೀಯ ತಂಡವನ್ನು ಸಜ್ಜುಗೊಳಿಸಿದರು. ರೈಲು ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಡಾ. ಶರತ್ ಚಂದ್ರ ನೇತೃತ್ವದ ತಂಡವು ತಾಯಿ ಮತ್ತು ಅಕಾಲಿಕವಾಗಿ ಜನಿಸಿದ ಮಗುವನ
Jun 181 min read


ನೀಟ್ ಮರುಪರೀಕ್ಷೆ: ಮಿಲಿಟರಿ ಶೈಲಿಯ ಭದ್ರತೆ ವಿರುದ್ಧ ಕೆ. ಅಣ್ಣಾಮಲೈ ತೀವ್ರ ಆಕ್ರೋಶ
ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ನೀಟ್ ಪರೀಕ್ಷೆಯ ಅಕ್ರಮಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮರುಪರೀಕ್ಷೆಯ ಭದ್ರತಾ ವ್ಯವಸ್ಥೆಯ ವಿರುದ್ಧ ತಮಿಳುನಾಡು ಮಾಜಿ ಬಿಜೆಪಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರ ಧ್ವನಿ ಎತ್ತಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಜಾರಿಗೆ ತರಲಾದ ಮಿಲಿಟರಿ ಶೈಲಿಯ ಕಠಿಣ ಭದ್ರತೆಯು ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನೋಡುವ ವಾತಾವರಣವನ್ನು ನಿರ್ಮಿಸುತ್ತಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಅತಿರೇಕದ ತಪಾಸಣಾ ಕ್ರಮಗಳು ಮತ್ತು ಪರೀಕ್ಷಾ ಕೇಂದ್ರಗಳ ಕಟ್ಟುನಿಟ್ಟಿನ ವಾತಾವರಣವು ವಿದ್ಯಾರ್ಥಿಗಳಲ್ಲಿ ಅನಗತ್ಯ ಭಯ ಹಾಗೂ
Jun 171 min read


ತಿರುಪತಿ ಲಡ್ಡು ಗುಣಮಟ್ಟ ಕಾಯ್ದುಕೊಳ್ಳಲು ಮೈಸೂರಿನ ಸಿಎಫ್ಟಿಆರ್ಐ ಜೊತೆ ಒಪ್ಪಂದ
ತಿರುಪತಿ ಲಡ್ಡು ಪ್ರಸಾದದ ಪವಿತ್ರತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನ (TTD) ಮೈಸೂರಿನ ಸಿಎಫ್ಟಿಆರ್ಐ (CFTRI) ಸಂಸ್ಥೆಯೊಂದಿಗೆ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ. ಇತ್ತೀಚಿನ ತುಪ್ಪದ ಕಲಬೆರಕೆ ವಿವಾದಗಳ ಹಿನ್ನೆಲೆಯಲ್ಲಿ ಭಕ್ತರ ವಿಶ್ವಾಸವನ್ನು ಮರುಗಳಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಡೆದ ರೈಸ್ (RISE) ಕಾನ್ಕ್ಲೇವ್ 2026ರಲ್ಲಿ ಈ ಒಪ್ಪಂದ ನಡೆದಿದ್ದು, ಇನ್ಮುಂದೆ ಲಡ್ಡು ತಯಾರಿಕೆಗೆ ಬಳಸುವ ತುಪ್ಪ ಸೇರಿದಂತೆ ಎಲ್ಲಾ ಕಚ್ಚಾ ವಸ್ತುಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಫ್ರಾನ್ಸ್ನ
Jun 161 min read


ಜೈಪುರದಲ್ಲಿ ಪ್ರತಿಭಟನೆ ವೇಳೆ ಅಭಿಜಿತ್ ದಿಪ್ಕೆ ಮೇಲೆ ಹಲ್ಲೆ
ರಾಜಸ್ಥಾನದ ಜೈಪುರದ ಶಹೀದ್ ಸ್ಮಾರಕದ ಬಳಿ ಸೋಮವಾರ ನಡೆದ ಶಾಂತಿಯುತ ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರ ಮೇಲೆ ಕೆಲ ಕಿಡಿಗೇಡಿಗಳು ದೈಹಿಕ ಹಲ್ಲೆ ನಡೆಸಿದ್ದಾರೆ. ಬೆಂಬಲಿಗರ ಹೆಗಲ ಮೇಲೆ ನಿಂತು ಮಾತನಾಡಲು ತೆರಳುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅವರ ಸ್ಕಾರ್ಫ್ ಎಳೆದು ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಿಬಿಎಸ್ಇ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಅಭಿಜಿತ್ ಈ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದು ಯುವಕ
Jun 161 min read


ಅಮೆರಿಕ-ಇರಾನ್ ನಡುವೆ ಶಾಂತಿ ಒಪ್ಪಂದ: 108 ದಿನಗಳ ಸಂಘರ್ಷಕ್ಕೆ ಮುಕ್ತಿ
ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯಲ್ಲಿ ತೀವ್ರ ಆತಂಕ ಮೂಡಿಸಿದ್ದ ಅಮೆರಿಕ ಹಾಗೂ ಇರಾನ್ ನಡುವಿನ 108 ದಿನಗಳ ಸುದೀರ್ಘ ಸಂಘರ್ಷ ಕೊನೆಗೂ ಅಂತ್ಯಗೊಂಡಿದೆ. ಉಭಯ ರಾಷ್ಟ್ರಗಳು ಒಟ್ಟು 14 ಪ್ರಮುಖ ಅಂಶಗಳ ಆಧಾರದ ಮೇಲೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಜೂನ್ 19ರಂದು ಸ್ವಿಟ್ಚರ್ಲೆಂಡ್ನಲ್ಲಿ ಈ ಒಪ್ಪಂದದ ಅಧಿಕೃತ ಸಹಿ ಸಮಾರಂಭ ನಡೆಯಲಿದ್ದು, ಜಗತ್ತಿಗೆ ತೈಲ ಬಿಕ್ಕಟ್ಟಿನ ಭೀತಿಯಿಂದ ಮುಕ್ತಿ ಸಿಕ್ಕಂತಾಗಿದೆ. ಈ ಮಹತ್ವದ ಬೆಳವಣಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಇರಾನ್ ಜೊತೆಗಿನ ಒಪ್ಪಂದ ಪೂ
Jun 151 min read


ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಕೆ: ವದಂತಿ ನಂಬದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ, ಸಾರ್ವಜನಿಕರು ಹಾಗೂ ಫಲಾನುಭವಿಗಳು ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಚರ್ಚೆಗಳು ಆರಂಭವಾದ ಬೆನ್ನಲ್ಲೇ, "ಗ್ಯಾರಂಟಿ ಇದೆ, ಗ್ಯಾರಂಟಿ ಇರುತ್ತದೆ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ" ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬ ವಿರೋಧ ಪಕ್ಷ
Jun 141 min read


ಕೊಲ್ಲೂರು ಮೂಕಾಂಬಿಕೆಗೆ ತಮಿಳುನಾಡು ರಾಜಕಾರಣಿಗಳ ವಿಶೇಷ ನಂಟು
ಕೊಲ್ಲೂರು ಮೂಕಾಂಬಿಕೆ ದೇವಿಗೂ ತಮಿಳುನಾಡಿನ ರಾಜಕಾರಣಿಗಳಿಗೂ ವಿಶೇಷ ನಂಟಿದೆ. ಇತ್ತೀಚೆಗೆ ನಟ, ರಾಜಕಾರಣಿ ವಿಜಯ್ ಅವರು ಕೊಲ್ಲೂರಿಗೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸುಮಾರು 500 ಗ್ರಾಂ ತೂಕದ ಬೆಳ್ಳಿಯ ಖಡ್ಗ ಹಾಗೂ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ವಿಜಯ್ಗಿಂತ ಮುನ್ನ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ. ಜಿ. ರಾಮಚಂದ್ರನ್, ಜಾನಕಿ ಮತ್ತು ಜಯಲಲಿತಾ ಅವರು ದೇವಿಯ ದರ್ಶನ ಪಡೆದಿದ್ದರು. 1980ರಲ್ಲಿ ಎಂಜಿಆರ್ ಅವರು ದೇವಿಗೆ 1 ಕೆಜಿ ತೂಕದ ಚಿನ್ನದ ಖಡ್ಗವನ್ನು ಅರ್ಪಿಸಿದ್ದು, ಅದನ್ನು ಇಂದಿಗೂ ದೇವಿಯ ಸೇವೆಯಲ್ಲಿ ಬಳಸಲಾಗುತ್ತದೆ. ಅದೇ ರೀತಿ 2004ರಲ
Jun 141 min read


ಸರ್ಕಾರಿ ಕಾಲೇಜುಗಳಲ್ಲಿ 50 ಎಐ ಲ್ಯಾಬ್ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ
ಗ್ರಾಮೀಣ ಹಾಗೂ ಹಂತ-2 ಮತ್ತು ಹಂತ-3 ನಗರಗಳ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಚಯ ಮಾಡಿಸಲು ಮತ್ತು ಅವರ ಉದ್ಯೋಗಾವಕಾಶ ಹೆಚ್ಚಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 50 ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳ ಸ್ಥಾಪನೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಅತ್ಯಾಧುನಿಕ ಪ್ರಯೋಗಾಲಯಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಹೊಸ ಪ್ರಯೋಗಗಳು ಮತ್ತು ಕೌಶಲ್ಯಾಭಿವೃದ್ಧಿಗೆ ಭದ್ರವಾದ ಮೂಲಸೌಕರ್ಯ ಒದಗಿಸಲಿವೆ. 2026-27ನೇ ಸಾಲಿನ ಬಜೆಟ್ನಲ್ಲಿ ಘೋಷಿತವಾದ ಈ ಯೋಜನೆಯನ್ನು ಕೇಂದ್ರ ಸರ್ಕಾರದ ‘ಎಐ ಮಿಷನ್’ ಸ
Jun 141 min read


ದಕ್ಷಿಣ ಕನ್ನಡದಲ್ಲಿ ಲಕ್ಕಿ ಸ್ಕೀಮ್ ದಂಧೆ: ಕೋಟ್ಯಂತರ ರೂ. ವಂಚಿಸಿ ಕಚೇರಿ ಬಂದ್!
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದೂವರೆ ವರ್ಷದಿಂದ 'ಲಕ್ಕಿ ಸ್ಕೀಮ್' ಹೆಸರಿನಲ್ಲಿ ನಡೆಯುತ್ತಿದ್ದ ಬೃಹತ್ ವಂಚನೆ ಜಾಲ ಈಗ ಬಯಲಿಗೆ ಬಂದಿದೆ. ಮಂಗಳೂರು, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಹಲವೆಡೆ ತಿಂಗಳಿಗೆ 1,000 ರೂ. ಕಂತಿನಂತೆ ಕಾರು, ಬೈಕ್ ಹಾಗೂ ಚಿನ್ನದ ಆಮಿಷವೊಡ್ಡಿ ಸಾವಿರಾರು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗಿತ್ತು. ಸದ್ಯ ಈ ಸಂಸ್ಥೆಗಳು ಕಚೇರಿಗಳನ್ನು ಮುಚ್ಚಿ ಜನರಿಗೆ ಪಂಗನಾಮ ಹಾಕಲು ಸಜ್ಜಾಗಿವೆ. ತುಳು ಚಿತ್ರರಂಗದ ಸೆಲೆಬ್ರಿಟಿಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನೀಡಲಾಗಿತ್ತು. ಆದರೆ ಸ್ಕೀಮ್ ಅವಧಿ ಮುಗಿದು 5 ತಿಂಗಳು ಕಳೆದರೂ ಗ್ರಾ
Jun 131 min read


ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ*
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಜೂನ್ 12ರಂದು ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದು, ಸಾರ್ವಜನಿಕರಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ವಿಶೇಷ ಬಂದೋಬಸ್ತ್ ಇರುವ ಕಾರಣ ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೆ ಭಕ್ತರು ದರ್ಶನ ತಪ್ಪಿಸುವುದು ಸೂಕ್ತ ಎಂದು ಪೊಲೀಸರು ತಿಳಿಸಿದ್ದಾರೆ. ಭಕ್ತರಿಗೆ ಪ್ರವೇಶ ನಿಷೇಧವಿಲ್ಲದಿದ್ದರೂ, ಭದ್ರತೆಯ ದೃಷ್ಟಿಯಿಂದ ದರ್ಶನದ ವೇಳೆ ಅನಾನುಕೂಲವಾಗಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ. ಈ ಹಿಂದೆ ತಮ
Jun 121 min read


ಧರ್ಮಸ್ಥಳ ಪ್ರಕರಣ: ಸುಳ್ಳು ಸುದ್ದಿ ನಂಬಬೇಡಿ ಎಂದ ನಟ ಪ್ರಕಾಶ್ ರಾಜ್
ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ನಟ ಪ್ರಕಾಶ್ ರಾಜ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ನನ್ನ ಬಗ್ಗೆ ಹರಡುತ್ತಿರುವುದೆಲ್ಲವೂ ಸಂಪೂರ್ಣ ಸುಳ್ಳು ಸುದ್ದಿ ಎಂದು ಅವರು ಕಿಡಿಕಾರಿದ್ದಾರೆ. ಇದು ಕೋಟ್ಯಂತರ ಭಕ್ತರ ನಂಬಿಕೆಯ ಸೂಕ್ಷ್ಮ ವಿಷಯವಾಗಿದೆ. ನಾನು ಸದ್ಯ ಊರಿನಲ್ಲಿಲ್ಲ, ಇನ್ನೆರಡು ದಿನಗಳಲ್ಲಿ ಖುದ್ದಾಗಿ ಬಂದು ಮಾಧ್ಯಮಗಳ ಮುಂದೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇನೆ. ಅಲ್ಲಿಯವರೆಗೆ ಯಾರೂ ಗಾಳಿ ಸುದ್ದಿ ನಂಬಬೇಡಿ ಎಂದು ವಿನಂತಿಸಿದ್ದಾರೆ. ಪ್ರಕರಣದ ಆರೋಪಿ ಚಿನ್ನಯ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು,
Jun 121 min read


26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ: ಧರ್ಮಸ್ಥಳದಲ್ಲಿ ನಡೆದ ಅಪರೂಪದ ಪುನರ್ಮಿಲನ!
ಹೆತ್ತ ಕರುಳಿನ ತೀವ್ರ ಹಂಬಲ ಹಾಗೂ ಪ್ರಾರ್ಥನೆಗೆ ಕೊನೆಗೂ ಜಯ ಸಿಕ್ಕಿದೆ. "ಕಣ್ಣು ಮುಚ್ಚುವ ಮುನ್ನ ಹಿರಿಯ ಮಗನನ್ನು ಒಮ್ಮೆಯಾದರೂ ನೋಡಬೇಕು" ಎಂಬ ವೃದ್ಧ ತಾಯಿಯ ಕಣ್ಣೀರಿನ ಕರೆಗೆ ಭಗವಂತ ಓಗೊಟ್ಟಿದ್ದಾನೆ. ಬರೋಬ್ಬರಿ 26 ವರ್ಷಗಳ ಹಿಂದೆ, ಕೇವಲ 12 ವರ್ಷದ ಬಾಲಕನಾಗಿದ್ದಾಗ ನಾಪತ್ತೆಯಾಗಿದ್ದ ಮಗ, ಇದೀಗ ಮಹಾರಾಷ್ಟ್ರದ ‘ಸಲೀಂ’ ಆಗಿ ಸ್ವಂತ ಮನೆಗೆ ಮರಳಿ ಬಂದಿರುವ ವಿಸ್ಮಯಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಇಷ್ಟು ವರ್ಷಗಳ ಬಳಿಕ ಮರಳಿ ಬಂದು ಹೆತ್ತ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ತರ
Jun 121 min read


ಫಿಫಾ ವಿಶ್ವಕಪ್ಗೆ ಇಂದು ಚಾಲನೆ: ಚಾಂಪಿಯನ್ ತಂಡಕ್ಕೆ ಸಿಗಲಿದೆ ₹476 ಕೋಟಿ ಬಹುಮಾನ!
ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾಕೂಟ 23ನೇ ಆವೃತ್ತಿಯ ಫಿಫಾ ಪುರುಷರ ಫುಟ್ಬಾಲ್ ವಿಶ್ವಕಪ್ಗೆ ಇಂದು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ಜಂಟಿಯಾಗಿ ಚಾಲನೆ ದೊರೆಯಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ 48 ತಂಡಗಳು ಭಾಗವಹಿಸುತ್ತಿರುವ ಈ ಬೃಹತ್ ಟೂರ್ನಿಯಲ್ಲಿ ಫೈನಲ್ ಒಳಗೊಂಡಂತೆ ಒಟ್ಟು 140 ಪಂದ್ಯಗಳು ನಡೆಯಲಿವೆ. ಮೆಕ್ಸಿಕೋ ಸಿಟಿಯ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿಯ ವಿಶ್ವಕಪ್ನಲ್ಲಿ ನಿಖರ ನಿರ್ಧಾರಗಳಿಗಾಗಿ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ
Jun 111 min read
Archive
bottom of page



