;
top of page

ಪಾವತಿಸಿದರೆ ಸಿಗಲಿವೆ ಹೆಚ್ಚುವರಿ ಸೌಲಭ್ಯ - ದುಬಾರಿಯಾಗುತ್ತಾ ಇನ್‌ಸ್ಟಾ, ಫೇಸ್‌ಬುಕ್, ವಾಟ್ಸಾಪ್?!

  • Jun 18
  • 1 min read

ಸಾಮಾಜಿಕ ಜಾಲತಾಣ ದೈತ್ಯ ‘ಮೆಟಾ’ ಸಂಸ್ಥೆಯು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ಗಳಿಗಾಗಿ ಜಾಗತಿಕವಾಗಿ ಹೊಸ ‘ಪ್ಲಸ್’ ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಪ್ರಕಟಿಸಿದೆ. ಈ ಕುರಿತು ಸಂಸ್ಥೆಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥೆ ನವೋಮಿ ಗ್ಲೈಡ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ಲಸ್‌ಗೆ ಮಾಸಿಕ ಸುಮಾರು ರೂ. 377 ಹಾಗೂ ವಾಟ್ಸಾಪ್ ಪ್ಲಸ್‌ಗೆ ರೂ. 282 ಶುಲ್ಕ ನಿಗದಿಪಡಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿನ ಹೂಡಿಕೆಗಾಗಿ ಹೊಸ ಆದಾಯ ಮೂಲ ಸೃಷ್ಟಿಸಲು ಮೆಟಾ ಈ ಚಂದಾದಾರಿಕೆ ಮಾದರಿ ಪರಿಚಯಿಸಿದೆ.

ಈ ಪ್ರೀಮಿಯಂ ಯೋಜನೆಯಡಿ ಬಳಕೆದಾರರಿಗೆ ಸ್ಟೋರಿ ರಹಸ್ಯ ವೀಕ್ಷಣೆ, ಕಸ್ಟಮ್ ಥೀಮ್‌ಗಳು ಹಾಗೂ ವಿಶೇಷ ಸ್ಟಿಕ್ಕರ್‌ಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳು ಲಭ್ಯವಾಗಲಿವೆ. ಆದರೆ, ಸಾಮಾನ್ಯ ಬಳಕೆದಾರರಿಗೆ ಎಂದಿನಂತೆ ಉಚಿತ ಸೇವೆಗಳು ಮುಂದುವರಿಯಲಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page