top of page
News Articles
Sathyapatha News Plus


ಇಂದು ಕಾಣಿಯೂರಿನಲ್ಲಿ ನ್ಯಾಯವಾದಿ ನಿಶಾಂತ್ ಎ. ಅವರ ನೂತನ ವಕೀಲರ ಕಛೇರಿ ಉದ್ಘಾಟನೆ: ಗಣ್ಯರಿಂದ ಶುಭಹಾರೈಕೆ
ಕಾಣಿಯೂರಿನಲ್ಲಿ ನ್ಯಾಯವಾದಿ ನಿಶಾಂತ್ ಅವರ ಮುಂದಾಳತ್ವದಲ್ಲಿ ಆರಂಭಗೊಂಡ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ನಿಶಾಂತ್ ಅವರ ತಂದೆ ಭಾಸ್ಕರ ಪೂಜಾರಿ ಹಾಗೂ ತಾಯಿ ವನಿತಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಹಾಗೂ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ ಮಳಿ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆ, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಕಾಣಿಯೂರು ಪ್ರಗತಿ ವಿದ್ಯಾಸಂಸ
Apr 301 min read


ಕೈಲಾಸ ಯಾತ್ರೆ 2026: ಇಂದಿನಿಂದ ನೋಂದಣಿ ಆರಂಭ, 'ಅಗ್ನಿ ಕುದುರೆ ವರ್ಷ'ದ ವಿಶೇಷ ದರ್ಶನಕ್ಕೆ ಅವಕಾಶ
2026ರ ಸಾಲಿನ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ಇಂದಿನಿಂದ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ವಿಶೇಷವೆಂದರೆ, ಈ ಬಾರಿಯ ಯಾತ್ರೆಯು 60 ವರ್ಷಗಳಿಗೊಮ್ಮೆ ಸಂಭವಿಸುವ 'ಅಗ್ನಿ ಕುದುರೆ ವರ್ಷ' ಎಂಬ ಅಪರೂಪದ ಟಿಬೆಟಿಯನ್-ಹಿಮಾಲಯನ್ ಜ್ಯೋತಿಷ್ಯ ಸಂಯೋಜನೆಯಲ್ಲಿ ನಡೆಯುತ್ತಿದೆ. ಈ ಪುಣ್ಯ ಕಾಲದಲ್ಲಿ ಕೈಲಾಸ ದರ್ಶನ ಮಾಡುವುದರಿಂದ ಹಿಂದೂ, ಜೈನ ಮತ್ತು ಬೌದ್ಧ ಧರ್ಮದ ಅನುಯಾಯಿಗಳಿಗೆ 'ಮೋಕ್ಷ' ಪ್ರಾಪ್ತಿಯಾಗುತ್ತದೆ ಎಂಬ ಗಾಢವಾದ ಧಾರ್ಮಿಕ ನಂಬಿಕೆ ಇರುವುದರಿಂದ ಯಾತ್ರಾರ್ಥಿಗಳಲ್ಲಿ ಈ ಬಾರಿ ಹೆಚ್ಚಿನ ಕುತೂಹಲ ಮೂಡಿದೆ. ಯಾತ್ರೆಯ ಮೊದಲ ತಂಡವು ಜೂನ್ ಮೊದಲ ವಾರದಲ್ಲಿ ಪ್ರಯಾಣ ಬೆಳೆಸಲ
Apr 301 min read


ಜಟ್ಕಾ ಸ್ಟ್ಯಾಂಡ್ ಬಳಿ ಮರ ಉರುಳಿ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು
ಖಾಸಗಿ ಜಟ್ಕಾ ಸ್ಟ್ಯಾಂಡ್ ಬಳಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಬೃಹತ್ ಮರವೊಂದು ಹಠಾತ್ತನೆ ಧರೆಗುರುಳಿದೆ. ಕೂದಲೆಳೆ ಅಂತರದಲ್ಲಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಗರದಾದ್ಯಂತ ಒಣಗಿದ ಮತ್ತು ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕೆಂಬ ಸಾರ್ವಜನಿಕರ ಆಗ್ರಹದ ನಡುವೆಯೇ ಈ ದುರ್ಘಟನೆ ಸಂಭವಿಸಿರುವುದು ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಘಟನೆಯ ನಂತರ ಸಂಚಾರಕ್ಕೆ ಅಡ್ಡಿಯಾಗಿದ್ದ ಮರದ ಕೊಂಬೆಗಳನ್ನು ಸ್ಥಳೀಯ ನಿವಾಸಿಗಳೇ ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪುರಸಭೆ
Apr 301 min read


ವಿನಯ್ ಕುಲಕರ್ಣಿ ಶಾಸಕ ಸ್ಥಾನ ತಾಂತ್ರಿಕವಾಗಿ ರದ್ದು: ಯು.ಟಿ. ಖಾದರ್ ಸ್ಪಷ್ಟನೆ
ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರ ಸದಸ್ಯತ್ವ ತಾಂತ್ರಿಕವಾಗಿ ರದ್ದಾಗಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ನ್ಯಾಯಾಲಯದಿಂದ ಶಿಕ್ಷೆಯಾದ ತಕ್ಷಣ ಜನಪ್ರತಿನಿಧಿಗಳ ಸ್ಥಾನಮಾನ ನಿಯಮಾನುಸಾರ ತಾನಾಗಿಯೇ ಅನರ್ಹಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಸಭಾಧ್ಯಕ್ಷರಿಗೆ ಯಾವುದೇ ವಿಶೇಷ ಹಸ್ತಕ್ಷೇಪದ ಅಧಿಕಾರವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅನರ್ಹತೆ ವಿಚಾರದಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಖಾದರ್, ಕಾನೂನು ಎಲ್ಲರಿಗೂ ಒಂದೇ ಎಂದು ಪ್ರತಿಪಾದಿಸಿದರ
Apr 291 min read


ದಶಮ ವಾರ್ಷಿಕೋತ್ಸವದ ಅಂಗವಾಗಿ ಮೇ 10ರಂದು ಸ್ನೇಹಿತರ ಬಳಗ (ರಿ.) ಕಲ್ಪಡ, ಕೊಡಿಯಾಲ ಬೃಹತ್ ಆಧಾರ್ ಹಾಗೂ ವಿಮಾ ಶಿಬಿರ
ಕಲ್ಪಡ–ಕೊಡಿಯಾಲ ಭಾಗದ ಜನತೆಗೆ ಆಧಾರ್ ಸಂಬಂಧಿತ ಸೇವೆಗಳು ಹಾಗೂ ವಿಮಾ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಸ್ನೇಹಿತರ ಬಳಗ (ರಿ.) ಕಲ್ಪಡ, ಕೊಡಿಯಾಲ ತನ್ನ ದಶಮ ವಾರ್ಷಿಕೋತ್ಸವದ ಅಂಗವಾಗಿ ಬೃಹತ್ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರಕ್ಕೆ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದೊಂದಿಗೆ . ಮೇ 10, 2026 ರಂದು ಕೊಡಿಯಾಲದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂವಪ್ಪೆ ನಡೆಯಲಿರುವ ಈ ಶಿಬಿರದಲ್ಲಿ ಬೆಳಿಗ್ಗೆ 9:00ರಿಂದ ಸಂಜೆ 4:30ರವರೆಗೆ ವಿವಿಧ ಸೇವೆಗಳು ಲಭ್ಯವಿರಲಿವೆ ಶಿಬಿರದಲ್ಲಿ ಹೊಸ ಆಧಾರ್ ನೋಂದಣಿ, ಹೆಸರು, ವಿಳಾಸ ಹಾಗೂ ಜನ್ಮ ದಿನಾಂಕ ತಿದ್ದುಪಡಿ ಸೇರಿದಂತೆ ವಿವಿಧ ಆಧಾರ್ ಸ
Apr 291 min read


GT ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ RCB ಸಜ್ಜು: ಗೆಲುವಿಗಾಗಿ ವಿಶೇಷ '6+2+4' ತಂತ್ರ!
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 42ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲು ಆರ್ಸಿಬಿ ಸಜ್ಜಾಗಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಬೆಂಗಳೂರು ತಂಡವು ಬಲಿಷ್ಠ 6+2+4 ಸಂಯೋಜನೆಯನ್ನು ರೂಪಿಸಿದ್ದು, ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ಕಳೆದ ಪಂದ್ಯದ ಯಶಸ್ವಿ ತಂತ್ರವನ್ನೇ ಈ ಬಾರಿಯೂ ಅನುಸರಿಸಲು ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್ ಮತ್ತು ಟಿಮ್ ಡೇವಿಡ್ ಅವರಂತಹ ಆಟಗಾರರು ತಂಡಕ್ಕೆ ಆಸರೆಯಾಗಲಿದ್ದಾರೆ. ಆಲ್ರೌಂಡರ್ಗಳಾಗಿ ಕೃನಾಲ್ ಪಾಂಡ
Apr 291 min read


ರಸಗೊಬ್ಬರ ಖರೀದಿಗೆ ‘FID’ ಕಡ್ಡಾಯ – ವಿತರಣೆಯ ಮೇಲೆ ಸರ್ಕಾರದ ಕಣ್ಣಿಟ್ಟ ನಿಗಾ
ಕೆ-ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ; ಕಾಳಸಂತೆ ತಡೆಗೆ ಕಟ್ಟುನಿಟ್ಟಿನ ಕ್ರಮ ರಾಜ್ಯದಲ್ಲಿ ರಸಗೊಬ್ಬರ ವಿತರಣೆಯನ್ನು ಸುಸೂತ್ರಗೊಳಿಸಲು ಹಾಗೂ ಕಾಳಸಂತೆ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ರೈತರು ರಸಗೊಬ್ಬರ ಖರೀದಿಸಲು ‘FID’ (ಫಾರ್ಮರ್ ಐಡಿ) ಕಡ್ಡಾಯವಾಗಿದ್ದು, ತಮ್ಮ ಭೂಮಿಯನ್ನು ಕೂಡ ಅದಕ್ಕೆ ಲಿಂಕ್ ಮಾಡಿರಬೇಕು ಎಂದು ಕೃಷಿ ಇಲಾಖೆ ಸೂಚಿಸಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ರಸಗೊಬ್ಬರ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ರಸಗೊಬ್ಬರದ ಸರಿಯಾದ ಬಳಕೆ ಮತ್ತು
Apr 291 min read


ಟ್ರಂಪ್ ಹತ್ಯೆ ಯತ್ನ: ಕ್ಯಾಲಿಫೋರ್ನಿಯಾದ ವ್ಯಕ್ತಿಯ ಮೇಲೆ ಗಂಭೀರ ಆರೋಪ
ಶ್ವೇತಭವನದ ಪತ್ರಿಕಾ ಭೋಜನಕೂಟದ ವೇಳೆ ಗುಂಡಿನ ದಾಳಿ ನಡೆಸಿದ್ದ ಕ್ಯಾಲಿಫೋರ್ನಿಯಾದ ಕೋಲ್ ತೋಮಸ್ ಅಲೆನ್ ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು 'ಅಧ್ಯಕ್ಷರ ಹತ್ಯೆ ಯತ್ನ' ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಿದೆ. ದಾಳಿಗೂ ಮುನ್ನ ಅಲೆನ್ ತನ್ನನ್ನು 'ಫ್ರೆಂಡ್ಲಿ ಫೆಡರಲ್ ಅಸಾಸಿನ್' ಎಂದು ಕರೆದುಕೊಂಡು ಪ್ರಣಾಳಿಕೆಯೊಂದನ್ನು ಸಿದ್ಧಪಡಿಸಿದ್ದ ಎನ್ನಲಾಗಿದೆ. ಈ ಗಂಭೀರ ಆರೋಪಗಳು ಸಾಬೀತಾದಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ. ಆರೋಪಿಯು ಕ್ಯಾಲಿಫೋರ್ನಿಯಾದಿಂದ ವಾಷಿಂಗ್ಟನ್ಗೆ ವ್ಯವಸ್ಥಿತವಾಗಿ ಪ್ರಯಾಣಿಸಿ, ಹೋಟೆಲ್ನಲ್ಲಿ ಅತಿಥಿಯಾಗಿ ವಾಸ್ತವ್ಯ ಹೂಡಿದ್ದನು. ಭದ
Apr 291 min read


ಪೆಟ್ರೋಲ್ ಡೀಸೆಲ್ ಗಳಿಗೆ ಭವಿಷ್ಯವಿಲ್ಲ: ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ದೀರ್ಘಾವಧಿಯಲ್ಲಿ ಭವಿಷ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪೆಟ್ರೋಲ್ ಅವಲಂಬನೆಯು ಪರಿಸರ ಮಾಲಿನ್ಯ ಮತ್ತು ಆಮದು ವೆಚ್ಚವನ್ನು ಹೆಚ್ಚಿಸುತ್ತಿದ್ದು, ಆಟೋಮೊಬೈಲ್ ಉದ್ಯಮವು ತಕ್ಷಣವೇ ವಿದ್ಯುತ್, ಸಿಎನ್ಜಿ ಮತ್ತು ಜೈವಿಕ ಇಂಧನಗಳಂತಹ ಶುದ್ಧ ಇಂಧನಗಳತ್ತ ಪರಿವರ್ತನೆಗೊಳ್ಳುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೈಡ್ರೋಜನ್ ಅನ್ನು ಭವಿಷ್ಯದ ಇಂಧನ ಎಂದು ಕರೆದ ಸಚಿವರು, ಈಗಾಗಲೇ ದೇಶದ 10 ಮಾರ್ಗಗಳಲ್ಲಿ ಹೈಡ್ರೋಜನ್ ಬಸ್ಗಳ ಸಂಚಾರ ಆರಂಭವಾಗಿದೆ ಎಂದರು. ಟಾಟಾ ಮತ್ತು ಮಹೀಂದ್ರಾ ಅಂತಹ ಕಂಪನಿಗಳು ಈ ತಂತ್ರಜ್ಞಾನದ
Apr 281 min read


ಗಾಂಜಾ ಕೇಸ್ ಆರೋಪಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಬಿಎಸ್ ಸಿ ವಿದ್ಯಾರ್ಥಿ
ಧಾರವಾಡ: ಗಾಂಜಾ ಸೇವನೆ ಆರೋಪ ಹಾಗೂ ಪೊಲೀಸರ ಕಿರುಕುಳದ ಭೀತಿಯಿಂದ ಬಿಎಸ್ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಆದಿತ್ಯ ಎಂದು ಗುರುತಿಸಲಾಗಿದೆ. ಆತ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದನು. ಗಾಂಜಾ ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಒಟ್ಟು 10 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆದಿತ್ಯನಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಆಗಿತ್ತು. ನಂತರ ವಿಚಾರಣೆ ಪೂರ್ಣಗೊಳಿಸಿ ಪೊಲೀಸರು ಅವನನ್ನು ಬಿಡುಗಡೆ ಮಾಡಿದ್ದರು. ಆದರೆ ಮನೆಗ
Apr 281 min read


ಸುಳ್ಯ: ಕ್ಷುಲ್ಲಕ ಕಾರಣಕ್ಕೆ ಮಗನ ಮೇಲೆ ತಾಯಿಯಿಂದ ಕತ್ತಿ ಇರಿತ
ಸುಳ್ಯ ತಾಲೂಕಿನ ಎಮರ್ಕಂಜ ಗ್ರಾಮದ ಹೈದಂಗೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ತಾಯಿ ಯಶೋದಾ ಎಂಬುವವರು ಮಗ ರಾಮಚಂದ್ರನಿಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಏಪ್ರಿಲ್ 26ರಂದು ರಾತ್ರಿ ಮಗ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದಾಗ ತಾಯಿ-ಮಗನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ತಾಯಿ ಈ ಕೃತ್ಯ ಎಸಗಿದ್ದಾರೆ. ಕತ್ತಿ ಏಟಿನಿಂದ ತೀವ್ರ ರಕ್ತಸ್ರಾವಕ್ಕೊಳಗಾದ ರಾಮಚಂದ್ರ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ
Apr 281 min read


ಕುಮಾರಧಾರ ನದಿಯಲ್ಲಿ, ನಾಪತ್ತೆಯಾಗಿದ 26 ವರ್ಷದ ಯುವಕನ ಮೃತದೇಹ ಪತ್ತೆ
ಕಡಬ: ಕುಮಾರಧಾರ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಸೋಮವಾರ ಸಂಜೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಮೃತರನ್ನು ಮಂಜು ಅವರ ಪುತ್ರ ರಕ್ಷಿತ್ (26) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಐತ್ತೂರು ಗ್ರಾಮದ ಅರಬ್ಬಿ ತೋಡು ಪ್ರದೇಶದಲ್ಲಿ ರಕ್ಷಿತ್ ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರಕ್ಷಿತ್ಗೆ ಈಜು ತಿಳಿದಿದ್ದರೂ ನದಿಯ ಬಲವಾದ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಡಬ ಪೊಲೀಸರು ಮತ್ತು ಪುತ್ತೂರಿನ ಅ
Apr 281 min read


ದಕ್ಷಿಣ ಮುಂಬೈನಲ್ಲಿ ದುರ್ಘಟನೆ: ಕಲ್ಲಂಗಡಿ ಸೇವನೆ ಬಳಿಕ ಒಂದೇ ಕುಟುಂಬದ ನಾಲ್ವರು ಮೃತ್ಯು
ದಕ್ಷಿಣ ಮುಂಬೈನಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಊಟದ ನಂತರ ಕಲ್ಲಂಗಡಿ ಸೇವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 25ರಂದು ಜೆಜೆ ಮಾರ್ಗ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಭೋಜನ ನಡೆದಿತ್ತು. ಈ ಸಂದರ್ಭದಲ್ಲಿ ಅಬ್ದುಲ್ಲಾ (40), ಅವರ ಪತ್ನಿ ನಸ್ರೀನ್ (35), ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಸೇರಿದಂತೆ ಒಟ್ಟು ಒಂಬತ್ತು ಮಂದಿ ಚಿಕನ್ ಪುಲಾವ್ ಸೇವಿಸಿದ್ದರು. ಭೋಜನದ ಬಳಿಕ ಅಬ್ದುಲ್ಲಾ ಕುಟುಂಬ ಮನೆಗೆ ಮರಳಿ ಕಲ್ಲಂಗಡಿ ಸೇವಿಸಿದೆ. ಕೆಲವು ಸಮಯದ ನಂತರ ನಾಲ್ವರಿಗೆ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡ
Apr 281 min read


ಏಳು ವರ್ಷಗಳ ಬಳಿಕ ಸಿಕ್ಕ ದರೋಡೆ ಪ್ರಕರಣದ ಆರೋಪಿ – ಧರ್ಮಸ್ಥಳ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ
ಧರ್ಮಸ್ಥಳ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯಾ ಗ್ರಾಮದ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರೆದು ಓಡಾಡುತ್ತಿದ್ದ ಪ್ರಮುಖ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2017ರಲ್ಲಿ ನಡೆದ ಈ ಪ್ರಕರಣದಲ್ಲಿ ದುಷ್ಕರ್ಮಿಗಳ ತಂಡ ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಬನಶಂಕರಿ ನಿವಾಸಿ ಮಣಿ ಅಲಿಯಾಸ್ ಮಣಿಕಂಠ (32) ಎರಡನೇ ಆರೋಪಿಯಾಗಿದ್ದ. ಕೃತ್ಯದ ನಂತರ ಜಾಮೀನು ಪಡೆದು ಹೊರಬಂದ ಆತ, ನ್ಯಾಯಾಲಯದ ವಿಚಾರಣೆಗೆ ಹಾಜ
Apr 281 min read


ಮೇ 1 ರಿಂದ LPG ಬುಕಿಂಗ್ ಗೆ ಹೊಸ ನಿಯಮ ಜಾರಿ
ಮೇ 1ರಿಂದ LPG ಬುಕಿಂಗ್ ನಿಯಮಗಳಲ್ಲಿ ಬದಲಾವಣೆ ಸಾಧ್ಯ; ಸರಬರಾಜು ವ್ಯತ್ಯಯವಿಲ್ಲವೆಂದ ಸರ್ಕಾರ ನವದೆಹಲಿ, ಏಪ್ರಿಲ್ 28, 2026: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಇರಾನ್ ‘ಹಾರ್ಮುಜ್ ಜಲಸಂಧಿ’ ಮುಚ್ಚಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದ್ದರೂ, ದೇಶದಲ್ಲಿ LPG ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿರುವಂತೆ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಅನಿಲದ ನಿರಂತರ ಸರಬರಾಜು ಖಚಿತಪಡಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು
Apr 281 min read


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಶಾಸಕ ಅಶೋಕ್ ರೈ ಪಣ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ರಥಬೀದಿ ವಿಸ್ತರಣೆಗಾಗಿ ಉಳ್ಳಾಲ್ತಿ ಕಟ್ಟೆಯ ಬಳಿಯಿರುವ ಖಾಸಗಿ ಜಾಗವನ್ನು ಕಾನೂನುಬದ್ಧವಾಗಿ ವಶಪಡಿಸಿಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಮಾಲೀಕರು ಸಹಕರಿಸದಿದ್ದರೆ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹಣ ನೀಡಿ ಸರ್ಕಾರದ ಮೂಲಕ ಜಾಗ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೆ, ಮಹಾಲಿಂಗೇಶ್ವರ ದೇವರ ತೀರ್ಥಸ್ನಾನ ನಡೆಯುವ ವೀರಮಂಗಲ ಕ್ಷೇತ್ರವನ್ನು ಉತ್ತರ ಭಾರತದ ಪ್ರಯಾಗ್ ರಾಜ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ. ನದಿಯ ಎರಡೂ ಬದಿಯ ಜಾಗವನ್ನು ವಶಕ್ಕೆ ಪಡೆದು ಸುಂದರಗೊಳಿಸುವ
Apr 281 min read


ದ.ಕನ್ನಡ: ಎಸ್ಎಸ್ಐ ಕೊಲೆ ಯತ್ನ ಪ್ರಕರಣ – ಅಪರಾಧಿಗೆ 7 ವರ್ಷಗಳ ಕಠಿಣ ಶಿಕ್ಷೆ
ಮಂಗಳೂರು: ಉರ್ವ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿದ್ದ ಐತ್ತಪ್ಪ ಅವರ ಮೇಲೆ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಅಪರಾಧಿಗೆ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್ಟಿಎಸ್ಸಿ-1 (ತ್ವರಿತಗತಿ ನ್ಯಾಯಾಲಯ)ವು, ಸುರತ್ಕಲ್ ನಿವಾಸಿ ಮಹಮ್ಮದ್ ನಿಯಾಜ್ (29) ಅಪರಾಧಿ ಎಂದು ತೀರ್ಮಾನಿಸಿ, 7 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹50,000 ದಂಡ ವಿಧಿಸಿ ಸೋಮವಾರ (ಏ.27) ತೀರ್ಪು ನೀಡಿದೆ. ನ್ಯಾಯಾಧೀಶ ಮೋಹನ ಜೆ.ಎಸ್. ಅವರು ಪ್ರಕರಣದ ಸಾಕ್ಷ್ಯಾಧಾರಗಳು, ದಾಖಲೆಗಳು ಮತ್ತು ವಾದಗಳನ್ನು ಪರಿಶೀಲಿಸಿದ
Apr 281 min read


RCB ಬೌಲರ್ಗಳ ಬಿರುಗಾಳಿ: 8 ರನ್ಗೆ 6 ವಿಕೆಟ್ ಕುಸಿದ ಡೆಲ್ಲಿ!
ನವದೆಹಲಿ: Indian Premier League 2026ರ 39ನೇ ಪಂದ್ಯದಲ್ಲಿ Royal Challengers Bengaluru ತಂಡದ ಬೌಲರ್ಗಳು ಭಾರೀ ದಾಳಿ ನಡೆಸಿ Delhi Capitals ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ತಳ್ಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಡೆಲ್ಲಿ ತಂಡ ಕೇವಲ 8 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರೀ ಒತ್ತಡಕ್ಕೆ ಸಿಲುಕಿತು. RCB ಪರ Bhuvneshwar Kumar ಮತ್ತು Josh Hazlewood ತಲಾ 3 ವಿಕೆಟ್ ಪಡೆದು ಡೆಲ್ಲಿ ಡೆಲ್ಲಿ ಪರ ಪ್ರಮುಖ ಆಟಗಾರರು ಸಂಪೂರ್ಣ ವೈಫಲ್ಯ ಅನುಭವಿಸಿದರು. ಸಾಹಿಲ್, ಸಮೀರ್ ರಿಜ್ಜಿ ಹಾಗೂ ಅಕ್ಸರ್ ಪಟೇಲ್ ಶೂನ್ಯಕ್ಕೆ ಔಟ್ ಆಗಿದ್ದು, ಕೆ.ಎಲ್. ರಾಹುಲ್ ಮತ್ತು ನ
Apr 271 min read


ಕಡಬ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆ
ಕಡಬದ ಐತ್ತೂರು ಗ್ರಾಮದ ಅರಬ್ಬಿ ತೋಡಿನಲ್ಲಿ ಸ್ನಾನಕ್ಕೆಂದು ಇಳಿದಿದ್ದ ಯುವಕ ರಕ್ಷಿತ್ (26) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಮೂಲತಃ ಮರ್ದಾಳದ ನಿವಾಸಿಯಾಗಿರುವ ಇವರು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯುವಕ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಸದ್ಯ ನಾಪತ್ತೆಯಾದ ರಕ್ಷಿತ್ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಹೆಚ್ಚಿನ ಮಾ
Apr 271 min read


ಹೆಚ್ಚುತ್ತಿರುವ ಬಿಸಿಲ ಬೇಗೆ: ದೇಶಾದ್ಯಂತ ಹವಾಮಾನ ಇಲಾಖೆ ಎಚ್ಚರಿಕೆ
ಭಾರತದಾದ್ಯಂತ ಬೇಸಿಗೆಯ ತಾಪಮಾನವು ತೀವ್ರವಾಗಿ ಏರುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯ (IMD) ವರದಿಯಂತೆ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವು 40°C ನಿಂದ 44°C ವರೆಗೆ ತಲುಪಿದೆ. ವಾಯುವ್ಯ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಉಷ್ಣ ಅಲೆಯ ತೀವ್ರತೆ ಹೆಚ್ಚಿದ್ದು, ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶ್ವ ಹವಾಮಾನ ಸಂಸ್ಥೆಯು (WMO) ಮೇ ನಿಂದ ಜುಲೈ ಅವಧಿಯಲ್ಲಿ ಜಾಗತಿಕ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಮುನ್ಸೂಚನೆ ನೀಡಿದ
Apr 271 min read
Archive
bottom of page



