top of page
News Articles
Sathyapatha News Plus


ಬೆಳ್ತಂಗಡಿ: ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ಆರೋಪ - ಜುವೆಲ್ಲರಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಪಟ್ಟಣದ ಜುವೆಲ್ಲರಿಯೊಂದರ ಹಿಂಭಾಗದಲ್ಲಿ ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸೆಂಬರ್ 15, 2025 ರಂದು ಸಂಜೆ ಈ ಘಟನೆ ಸಂಭವಿಸಿದೆ. ದೂರಿನ ಪ್ರಕಾರ, ಅಪ್ರಾಪ್ತ ವಯಸ್ಸಿನ ಪಿರ್ಯಾದಿದಾರರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಬೆಳ್ತಂಗಡಿ ಪಟ್ಟಣದ ಜುವೆಲ್ಲರಿಯೊಂದರ ಹಿಂಭಾಗದ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಜುವೆಲ್ಲರಿ ಸಿಬ್ಬಂದಿ, "ನೀವು ವಿಡಿಯೋ ಮಾಡುತ್ತಿದ್ದೀರಿ" ಎಂದು ಆರೋಪಿಸಿ ಮೂವರು ಬಾಲಕರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂ
1 day ago1 min read


ಬಿಸಿರೋಡು: ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ!
ಬಂಟ್ವಾಳ: ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆತಂಕದ ಛಾಯೆ ಆವರಿಸಿದೆ. ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಮದುಮಗಳು ಮನೆಯಿಂದ ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ಸಂಭವಿಸಿದೆ. ಡಿ.14 ರಂದು ಅಶ್ಪಿಯಳನ್ನು . ಬಿ ಮೂಡ ಗ್ರಾಮದ ಬಂಟ್ವಾಳದ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ಮಾಡಿ ಯುನಿಟಿ ಹಾಲ್ ಅಲ್ಲಿ ಮದುವೆ ನಿಶ್ಷಯಿಸಿರುತ್ತಾರೆ. ಡಿ. 14 ರಂದು ಬೆಳಗ್ಗೆ ಸುಮಾರು 03:30 ಗಂಟೆ ತನಕ ಮನೆಯಲ್ಲೇ ಮಲಗಿದ್ದು ಆ ಬಳಿಕ ಬೆಳಿಗ್ಗೆ ಸುಮಾರು 04:30 ಗಂಟೆಗೆ ಬೆಳಗಿನ ಜಾವ ನೋಡಿದಾಗ ಅಕ್ಕನ ಮನೆಯಲ್ಲಿ ಇಲ್ಲದೇ ಇರುವುದು ತಿಳಿದು ಬಂದಿದೆ. ಬಳಿಕ
3 days ago1 min read


ಕಾಸರಗೋಡು: ತೆಯ್ಯಂ ಉತ್ಸವದಲ್ಲಿ ಅವಘಡ; ಗುರಾಣಿ ತಗುಲಿ ಯುವಕ ಪ್ರಜ್ಞೆ ತಪ್ಪಿ ಸಾವು ಬಚಾವ್!
ಕಾಸರಗೋಡು: ಜಿಲ್ಲೆಯ ನೀಲೇಶ್ವರದಲ್ಲಿ ನಡೆಯುತ್ತಿದ್ದ ತೆಯ್ಯಂ ಉತ್ಸವದ ವೇಳೆ ಆಕಸ್ಮಿಕವಾಗಿ ದೈವನರ್ತಕನ ಕೈಯಲ್ಲಿದ್ದ ಗುರಾಣಿ ತಗುಲಿ ಯುವಕನೊಬ್ಬ ಕುಸಿದು ಬಿದ್ದ ಘಟನೆ ಸಂಭವಿಸಿದೆ. ನೀಲೇಶ್ವರದ ರೈಲ್ವೆ ಮೇಲ್ಸೇತುವೆ ಸಮೀಪವಿರುವ ಪಲ್ಲಿಕ್ಕರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಈ ಅವಘಡ ನಡೆದಿದೆ. ದೇವಸ್ಥಾನದ ಉತ್ಸವದ ಅಂಗವಾಗಿ ಪೂಮಾರುತನ್ ದೈವದ ‘ವೆಲ್ಲಟ್ಟಂ’ ಆಚರಣೆ ನಡೆಯುತ್ತಿತ್ತು. ಈ ವೇಳೆ ದೈವನರ್ತಕರು ಸಾಂಪ್ರದಾಯಿಕ ವೇಗದಲ್ಲಿ ಮರದ ಗುರಾಣಿಯನ್ನು ತಿರುಗಿಸುತ್ತಿದ್ದಾಗ, ಹತ್ತಿರದಲ್ಲಿದ್ದ ಪ್ರೇಕ್ಷಕ ಯುವಕನ ತಲೆಗೆ ಗುರಾಣಿ ಬಲವಾಗಿ ತಾಕಿದೆ. ಗುರಾಣಿ ತಲೆಗೆ ತಗುಲಿದ ತಕ್ಷಣ ಯುವಕ ಪ್ರಜ
3 days ago1 min read


ಮಂಗಳೂರು: ವೃದ್ಧೆ ಮನೆಯಲ್ಲಿ ದರೋಡೆ ಪ್ರಕರಣ- ಮೂವರು ಬಂಧನ
ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕ ಪ್ರದೇಶದಲ್ಲಿ 85 ವರ್ಷದ ವೃದ್ಧೆ ಜಲಜಾ ಅವರ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದೋಚಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಡಿಸೆಂಬರ್ 3 ರಂದು ಕುಡಿಯುವ ನೀರು ಕೇಳುವ ನೆಪದಲ್ಲಿ ಬಂದ ಅಪರಿಚಿತರು, ವೃದ್ಧೆಯ ಮನೆ ಹಂಚು ತೆಗೆದು ಒಳನುಗ್ಗಿ, ಬೆದರಿಸಿ ಅವರ ಕುತ್ತಿಗೆಗೆ ಬೈರಾಸು ಬಿಗಿದು ಸುಮಾರು 50 ಗ್ರಾಂ ಚಿನ್ನಾಭರಣ ಮತ್ತು ₹14,000 ನಗದು ದೋಚಿ ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು, ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಎಂಬಾತನನ್ನು ಮೊದಲು ಬಂಧಿಸಿದ
3 days ago1 min read


ದೇವಚಳ್ಳದಲ್ಲಿ ಕೋಟಿ ಮೌಲ್ಯದ ಮರದ ದಿಮ್ಮಿಗಳು ವಶ: ಇಬ್ಬರ ಬಂಧನ, ಅಕ್ರಮ ಮರ ಕಡಿತಕ್ಕೆ ಅರಣ್ಯ ಇಲಾಖೆಯಿಂದ ಬ್ರೇಕ್
ದೇವಚಳ್ಳ ಗ್ರಾಮದ ಮುಂಡೋಡಿ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದ್ದ ಅಂದಾಜು ರೂ. 10 ಲಕ್ಷ ಮೌಲ್ಯದ ಮರದ ದಿಮ್ಮಿಗಳನ್ನು ಮತ್ತು ಅವುಗಳ ಸಾಗಾಟಕ್ಕೆ ಬಳಸಿದ ವಾಹನಗಳನ್ನು ಡಿಸೆಂಬರ್ 13 ರಂದು ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಮುಂಡೋಡಿಯ ನಾಗೇಶ್ ಎಂಬುವವರಿಗೆ ಸೇರಿದ ಜಾಗದಿಂದ ಒಂದು ಹೆಬ್ಬಲಸಿನ ಮರ ಮತ್ತು ಒಂದು ಮಾವಿನ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಸೌಮ್ಯಾ ಪಿ. ಎನ್. ಅವರ ನೇತೃತ್ವದಲ್ಲಿ ನೆಲ್ಲೂರು-ಕೆಮ್ರಾಜೆ ವಲಯದ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ
4 days ago1 min read


ಬೆಳ್ತಂಗಡಿ: ಅರ್ಚಕನಿಂದ ವಾಮಾಚಾರದ ಹೆಸರಿನಲ್ಲಿ ವಂಚನೆ, ಯುವತಿಗೆ ಕಿರುಕುಳ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ತುರ್ಕಜೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ದೇವಾಲಯದ ಅರ್ಚಕನೋರ್ವ ಯುವತಿಯ ಅನಾರೋಗ್ಯಕ್ಕೆ ವಾಮಾಚಾರವೇ ಕಾರಣ ಎಂದು ನಂಬಿಸಿ, ಪರಿಹಾರದ ನೆಪದಲ್ಲಿ ಆಕೆಯ ಕುಟುಂಬದ ವಿಶ್ವಾಸಗಳಿಸಿ, ಬಳಿಕ ಆಕೆಯನ್ನು ತನಗೆ ಕೊಟ್ಟು ಮದುವೆ ಮಾಡಿಕೊಡುವಂತೆ ಪೀಡಿಸಿದ್ದಾನೆ ಎನ್ನಲಾಗಿದೆ. ಮೂಲತಃ ಶಿರಸಿ ಮೂಲದ ಶಿವಗಿರಿ ಎಂಬಾತ ಸ್ಥಳೀಯ ದೇವಾಲಯವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ನರ್ಸಿಂಗ್ ಕಲಿಯುತ್ತಿರುವ ಯುವತಿಯೊಬ್ಬಳು ತನ್ನ ಮನೆಯವರೊಂದಿಗೆ ಹಾಲು ಪಾಯಸದ ಸೇವೆ ಸಲ್ಲಿಸಲು ದೇವಸ್ಥಾನಕ್ಕೆ ಬಂ
6 days ago1 min read


ಮಂಗಳೂರಿನ ನೆಹರೂ ಮೈದಾನದಲ್ಲಿ ನೂತನ ಆಸ್ಟ್ರೋ ಟರ್ಫ್ ಫುಟ್ಬಾಲ್ ಕ್ರೀಡಾಂಗಣ ಉದ್ಘಾಟನೆ
ಮಂಗಳೂರು ನಗರದ ಹೃದಯಭಾಗದಲ್ಲಿರುವ ನೆಹರೂ ಮೈದಾನದಲ್ಲಿ ಸುಸಜ್ಜಿತ ಆಸ್ಟ್ರೋ ಟರ್ಫ್ ಫುಟ್ಬಾಲ್ ಕ್ರೀಡಾಂಗಣವು ಬುಧವಾರದಂದು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕ್ರೀಡಾಭಿಮಾನಿಗಳ ಬಹುಕಾಲದ ಕನಸಾಗಿದ್ದ ಈ ಕ್ರೀಡಾಂಗಣವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಗೊಂಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ಕ್ರೀಡಾಂಗಣಕ್ಕೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಇದನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನ
Dec 31 min read


ಪುತ್ತೂರಿನಲ್ಲಿ ಮುಂದುವರಿದ ಬಿಜೆಪಿ-ಪುತ್ತಿಲ ಪರಿವಾರ ಜಟಾಪಟಿ: ಕಾರ್ಯಕ್ರಮದಿಂದ ಬಿಜೆಪಿ ಉಪಾಧ್ಯಕ್ಷ ಹೊರಕ್ಕೆ!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಮುಸುಕಿನ ಜಟಾಪಟಿ ತಾರಕಕ್ಕೇರಿದೆ. ಇತ್ತೀಚೆಗೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಈ ಭಿನ್ನಮತ ಸ್ಫೋಟಗೊಂಡಿದ್ದು, ಪುತ್ತಿಲ ಪರಿವಾರದ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಕಾರ್ಯಕ್ರಮದಿಂದ ಹೊರದಬ್ಬಿದ ಘಟನೆ ವರದಿಯಾಗಿದೆ. ರಾಜಕೀಯ ಕೆಸರೆರೆಚಾಟ ಈಗ ದೇವರ ಕಾರ್ಯಕ್ರಮಕ್ಕೂ ಹಬ್ಬಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಪುತ್ತೂರಿನಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ತಿಕ್ಕಾಟವನ್ನು ಮತ
Dec 11 min read


ಇಂದಿನ ಚಿನ್ನದ ದರ
ಇಂದಿನ (ನವೆಂಬರ್ 20, 2025) ಚಿನ್ನದ ದರಗಳು ಇಲ್ಲಿವೆ. ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ): 24 ಕ್ಯಾರೆಟ್ ಚಿನ್ನ: ₹1,24,690 (ನಿನ್ನೆಗೆ ಹೋಲಿಸಿದರೆ ₹170 ಇಳಿಕೆ) 22 ಕ್ಯಾರೆಟ್ ಚಿನ್ನ: ₹1,14,300 (ನಿನ್ನೆಗೆ ಹೋಲಿಸಿದರೆ ₹150 ಇಳಿಕೆ)
Dec 11 min read


ಅಕ್ರಮ ಗೋ ಸಾಗಾಟ: ನರಿಮೊಗರು ಬಳಿ ವಾಹನ ಕೆಟ್ಟು ನಿಂತು ಗೋವುಗಳನ್ನು ಬಿಟ್ಟು ಪರಾರಿ
ಪುತ್ತೂರು: ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ ಇಂದು ಶನಿವಾರ ಮುಂಜಾನೆ ಅಕ್ರಮ ಗೋ ಸಾಗಾಟಕ್ಕೆ ಯತ್ನಿಸಿದ ಘಟನೆಯೊಂದು ನಡೆದಿದೆ. ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಗೋವುಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನವು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ ಎಂದು ತಿಳಿದುಬಂದಿದೆ. ವಾಹನ ಕೆಟ್ಟು ನಿಂತದ್ದನ್ನು ಅರಿತ ಗೋ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳು ವಾಹನದಲ್ಲಿದ್ದ ಗೋವುಗಳನ್ನು ನಡುರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪರಿಶೀಲನೆ
Nov 291 min read


ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ ಮದ್ಯದಂಗಡಿ ಮುಚ್ಚಲು ಡಿಸಿ ಆದೇಶ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪ್ರಸಿದ್ಧ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಡಿಸೆಂಬರ್ 2 ರವರೆಗೆ ನಡೆಯಲಿದ್ದು, ಜಾತ್ರೆಯ ಮುಖ್ಯ ಕಾರ್ಯಕ್ರಮಗಳ ಅಂಗವಾಗಿ ನವೆಂಬರ್ 25 ರಂದು ಪಂಚಮಿ ರಥೋತ್ಸವ ಹಾಗೂ ತೈಲಾಭ್ಯಂಜನ, 26 ರಂದು ಚಂಪಾಷಷ್ಠಿ ಮಹಾರಥೋತ್ಸವ ಆಯೋಜಿಸಲಾಗಿದೆ. ಈ ಎರಡು ದಿನಗಳಲ್ಲಿ ಸುಮಾರು 50 ರಿಂದ 60 ಸಾವಿರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಭಕ್ತರ ಭದ್ರತೆ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನವೆಂಬರ್ 25 ಬೆಳಿಗ್ಗೆ 6 ಗಂಟೆಯಿಂದ 26ರ ರಾತ್ರಿ 12 ಗಂಟೆಯವರೆಗೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ
Nov 251 min read


ಪಡೀಲ್-ಕಣ್ಣೂರು ಮುಖ್ಯ ಪೈಪ್ಲೈನ್ ಹಾನಿ: ಮಂಗಳೂರು ನಗರಕ್ಕೆ ಎರಡು ದಿನದಿಂದ ನೀರು ಪೂರೈಕೆ ಸ್ಥಗಿತ
ಮಂಗಳೂರು: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಪಡೀಲ್-ಕಣ್ಣೂರು ಬಳಿ ಕಾಮಗಾರಿಯ ವೇಳೆ ಹಾನಿಗೊಳಗಾದ ಕಾರಣ ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ಮಂಗಳೂರು ನಗರದಾದ್ಯಂತ ತೀವ್ರ ನೀರಿನ ಸಮಸ್ಯೆ ತಲೆದೋರಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿದೆ. ತುಂಬೆ ಡ್ಯಾಂನಿಂದ ಪಡೀಲ್ ಟ್ಯಾಂಕ್ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ 18 ಅಡಿ ಆಳದಲ್ಲಿ ಹಾದುಹೋಗಿದ್ದು, ಈ ಪೈಪ್ಲೈನ್ಗೆ ಹಾನಿಯಾಗಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಪಡೀಲ್ ಪಂಪೌಸ್ನಿಂದ ನೀರು ಪಡೆಯ
Nov 191 min read


ಕಡಬ: ಪೊಲೀಸ್ ಉಪನಿರೀಕ್ಷಕರ ವರ್ಗಾವಣೆ
ಕಡಬ: ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ (ಐಜಿಪಿ) ಅಮಿತ್ ಸಿಂಗ್ ಐಪಿಎಸ್ ಅವರು ನವೆಂಬರ್ 14 ರಂದು ಆದೇಶ ಹೊರಡಿಸಿದ್ದು, ಕಡಬ ಪೊಲೀಸ್ ಠಾಣೆಯ ಎಸ್.ಐ. ಅಭಿನಂದನ್ ಎ.ಎಸ್. ಸೇರಿದಂತೆ ಮೂವರು ಪೊಲೀಸ್ ಉಪನಿರೀಕ್ಷಕರನ್ನು (ಪಿಎಸ್ಐ) ವರ್ಗಾವಣೆಗೊಳಿಸಿದ್ದಾರೆ. ಈ ವರ್ಗಾವಣೆಯು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಬಂಟ್ವಾಳ ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಗುಣಪಾಲ ಜೆ. ಅವರನ್ನು ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿದ್ದ ಎಸ್.ಐ. ಜ
Nov 141 min read


ಕುದ್ಮಾರು ಗ್ರಾಮದ ಶಾಂತಿಮೊಗೇರು ಅಣೆಕಟ್ಟಿನ ಹಲಗೆಗಳ ನಿರ್ವಹಣೆಗೆ ಸ್ಥಳೀಯರ ಆಕ್ರೋಶ
ಕುದ್ಮಾರು ಗ್ರಾಮದ ಶಾಂತಿಮೊಗೇರು ಹೊಳೆಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಿನ ನಿರ್ವಹಣೆಯ ಬಗ್ಗೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಣೆಕಟ್ಟಿನ ಪ್ರಮುಖ ಭಾಗವಾಗಿರುವ, ನೀರನ್ನು ನಿಯಂತ್ರಿಸಲು ಬಳಸುವ ಮರದ ಅಡ್ಡ ಹಲಗೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಿಲ್ಲ ಮತ್ತು ಅವುಗಳ ಜೋಪಾನದ ವ್ಯವಸ್ಥೆಯು ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲಗೆಗಳು ತುಕ್ಕು ಹಿಡಿದು ಹಾಳಾಗುತ್ತಿದ್ದು, ಇದರಿಂದ ಅಣೆಕಟ್ಟಿನ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಗ್ರಾಮಸ್ಥರ ಪ್ರಮುಖ ಅಳಲಾಗಿದೆ. ಅಣೆಕಟ್ಟಿಗೆ ಅಳವಡಿಸಬೇಕಾದ ಹಲಗೆಗಳ ಪೈಕಿ ಬಹುತೇಕ ಹಲಗೆಗ
Nov 141 min read


ಮಂಗಳೂರು ನಂತೂರ್ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಅಪಾಯ ತಪ್ಪಿಸಿದ ಸ್ಥಳೀಯರು
ಮಂಗಳೂರು ನಗರದ ನಂತೂರ್ ಜಂಕ್ಷನ್ ಸಮೀಪ ಚಲಿಸುತ್ತಿದ್ದ ಬೆಂಗಳೂರು ಆರ್ಟಿಒ ನೋಂದಣಿಯ ಬಿಳಿ ಬಣ್ಣದ ಹುಂಡೈ ವೆರ್ನಾ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಇಂದು (ಶುಕ್ರವಾರ) ಮಧ್ಯಾಹ್ನ ಸಂಭವಿಸಿದೆ. ಕಾರು ರಸ್ತೆಯಲ್ಲಿ ಸಾಗುತ್ತಿದ್ದಾಗ ಅದರ ಎಂಜಿನ್ನಿಂದ ದಟ್ಟವಾದ ಹೊಗೆ ಆವರಿಸಲು ಪ್ರಾರಂಭಿಸಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಧಗಧಗನೆ ಹೊತ್ತಿಕೊಂಡಿದೆ. ತಕ್ಷಣವೇ ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದು ವಾಹನದಿಂದ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಈ ದಿಢೀರ್ ಬೆಂಕಿ ಅವಘಡದಿಂದ ರಸ್
Nov 141 min read


ಕಡಬ: ಕಾಡಾನೆ ಭೀತಿಯಲ್ಲಿ ಗ್ರಾಮಸ್ಥರು
ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪಟ್ಟೆ ಸಮೀಪ ಎರಡು ದಿನಗಳ ಹಿಂದೆ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಕೋನಡ್ಕ ಅಂಗನವಾಡಿಯ ಹಿಂಭಾಗದ ಮೂಲಕ ಆನೆ ಸಂಚಾರ ಮಾಡಿದ್ದು, ಈ ಬಗ್ಗೆ ತಡವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಅರಣ್ಯಾಧಿಕಾರಿಗಳು ಈಗಾಗಲೇ ಈ ಪ್ರದೇಶದ ಮೇಲೆ ನಿಗಾ ವಹಿಸಿದ್ದು, ಕಾಡಾನೆಗಳ ಸಂಚಾರದ ಕುರಿತು ಕಾಲಕಾಲಕ್ಕೆ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮುಂದುವರಿಸಿದ್ದಾರೆ. ಆದರೂ, ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ನಿರಂತರ ಓಡಾಟದಿಂದಾಗಿ ಗ್ರಾಮದ ನಿವಾಸಿಗಳು ಜೀವ ಭಯದಲ್ಲೇ ತಮ್ಮ ದೈನಂದಿನ ಚಟುವಟಿಕೆಗಳನ್ನು ನ
Nov 121 min read


ಕಡಬ: ನೇಣಿಗೆ ಕೊರಳೊಡ್ಡಿದ 14ರ ಬಾಲಕ
ಶಾಲಾ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದಲ್ಲಿ ನ.6 ರಂದು ನಡೆದಿದೆ. ನೂಜಿಬಾಳ್ತಿಲ ಗ್ರಾಮದ ಖಂಡಿಗದ ಲೋಕೇಶ್ ಎಂಬವರ ಪುತ್ರ ಗಗನ್(14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಗಗನ್ ಗುರುವಾರ ದಿನ ಎಂದಿನಂತೆ ಶಾಲೆಗೆ ತೆರಳಿದ್ದ . ಸಂಜೆ ಮನೆಗೆ ಬಂದು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ
Nov 61 min read


ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಭವ್ಯ ಸ್ವಾಗತ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಭವ್ಯ ಬೆಳ್ಳಿರಥವು ಇಂದು (ನ. 5) ಕುಕ್ಕೆ ಕ್ಷೇತ್ರಕ್ಕೆ ಪುರಪ್ರವೇಶ ಮಾಡಲಿದೆ. ಕುರುಂಜಿಯ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಕುಟುಂಬದವರಿಂದ ಸಮರ್ಪಣೆಯಾಗಲಿರುವ ಈ ರಥವು ಕೋಟೇಶ್ವರದಿಂದ ಹೊರಟು ಮಂಗಳವಾರ ರಾತ್ರಿ ಸುಳ್ಯ ತಲುಪಿದ್ದು, ಅಲ್ಲಿ ರಥಕ್ಕೆ ಭಕ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ. ಸುಳ್ಯದಲ್ಲಿ ರಾತ್ರಿ ವಾಸ್ತವ್ಯ ಹೂಡಿದ ರಥವು ಇಂದು ಬೆಳಗ್ಗೆ ಸುಳ್ಯದಿಂದ ಸುಬ್ರಹ್ಮಣ್ಯದತ್ತ ಪ್ರಯಾಣ ಮುಂದುವರಿಸಲಿದೆ. ಬೆಳ್ಳಿರಥವು ಇಂದು ಸುಳ್ಯದ ಕಾಂತಮಂಗಲದಿಂದ ಹೊರಟು ಸುಳ್ಯ, ಪೈಚಾರು, ಸೋಣಂಗೇರಿ, ದುಗ್ಗಲಡ್ಕ, ಎಲ
Nov 51 min read
Archive
bottom of page


