top of page
News Articles
Sathyapatha News Plus


ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ
ಬೆಂಗಳೂರು: ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಹೊಸ ಬದಲಾವಣೆ ಕಂಡುಬಂದಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹1,53,170 ಆಗಿದ್ದು, 22 ಕ್ಯಾರೆಟ್ ಚಿನ್ನ ₹1,40,400 ತಲುಪಿದೆ. ಅದೇ ರೀತಿ 18 ಕ್ಯಾರೆಟ್ ಚಿನ್ನದ ಬೆಲೆ ₹1,14,880 ಆಗಿದೆ. ಇನ್ನು ಪ್ರತಿ 1 ಕೆಜಿ ಬೆಳ್ಳಿಯ ದರ ₹2,45,000 ದಾಖಲಾಗಿದೆ.
1 day ago1 min read


ಬೆಲೆ ಏರಿಕೆ ಬಿಸಿ: ಸಕ್ಕರೆ, ಬೆಲ್ಲದ ದರ ಏಕಾಏಕಿ ಜಿಗಿತ, ಜನಸಾಮಾನ್ಯರು ಕಂಗಾಲು!
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದ್ದು, ಸಕ್ಕರೆ ಮತ್ತು ಬೆಲ್ಲದ ದರ ಏಕಾಏಕಿ ಹೆಚ್ಚಾಗಿ ಗ್ರಾಹಕರಿಗೆ ಕಹಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆ.ಜಿಗೆ 66 ರೂಪಾಯಿ ಇದ್ದ ಸಕ್ಕರೆ ದರ ಈಗ 70 ರೂಪಾಯಿಗೆ ತಲುಪಿದೆ. ಇನ್ನು ಬೆಲ್ಲದ ಬೆಲೆಯಲ್ಲಿ ಭಾರಿ ಜಿಗಿತ ಕಂಡಿದ್ದು, ನಾಲ್ಕು ದಿನಗಳ ಹಿಂದೆ ಕೆ.ಜಿಗೆ 68 ರೂಪಾಯಿ ಇದ್ದದ್ದು ಈಗ ಬರೋಬ್ಬರಿ 12 ರೂಪಾಯಿ ಹೆಚ್ಚಳವಾಗಿ 80 ರೂಪಾಯಿಗೆ ಏರಿಕೆಯಾಗಿದೆ. ಈ ದಿಢೀರ್ ದರ ಏರಿಕೆ ಮಧ್ಯಮ ವರ್ಗ ಹಾಗೂ ಬಡಜನರ ಮಾಸಿಕ ಆಯವ್ಯಯದ ಮೇಲೆ ಗಂಭೀರ ಪರಿಣಾಮ ಬೀರಿದೆ.
Aug 291 min read


ಚಿನ್ನಪ್ರಿಯರಿಗೆ ಶಾಕ್; ಮತ್ತೆ ಗಗನಕ್ಕೇರಿದ ಬಂಗಾರದ ಬೆಲೆ!
ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, ಬಂಗಾರದ ದರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಮತ್ತು ಹೂಡಿಕೆದಾರರಿಂದ ಹೆಚ್ಚುತ್ತಿರುವ ಬೇಡಿಕೆಯು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿಢೀರ್ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ ಅಂದಾಜು ₹13,442 ತಲುಪಿದ್ದರೆ, 10 ಗ್ರಾಮ್ ಚಿನ್ನದ ಬೆಲೆ ₹1,34,420 ರ ಆಸುಪಾಸಿನಲ್ಲಿದೆ. ಅದೇ ರೀತಿ, ಅತ್ಯಂತ ಶುದ್ಧವಾದ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ ಅಂದಾಜು ₹14,674 ಕ್ಕ
Aug 61 min read


ಸಾಲಗಾರರಿಗೆ ಬಿಗ್ ರಿಲೀಫ್: RBI ರೆಪೋ ದರ 5.25%ರಲ್ಲೇ ಯಥಾಸ್ಥಿತಿ; EMIನಲ್ಲಿ ಸದ್ಯಕ್ಕೆ ಬದಲಾವಣೆ ಇಲ್ಲ
ನವದೆಹಲಿ, ಆ. 5: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರವನ್ನು 5.25%ರಲ್ಲೇ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಹಣದುಬ್ಬರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಿಲುವು ಅನುಸರಿಸಲಾಗಿದೆ. ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC) ಏಕಮತದಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿದೆ. ಜೊತೆಗೆ, ತನ್ನ "ತಟಸ್ಥ (Neutral)" ಹಣಕಾಸು ನೀತಿ ನಿಲುವನ್ನು ಸಹ ಮ
Aug 51 min read


ಮಳೆ ಕೊರತೆ ಬಿಸಿ: ರಾಜ್ಯದಲ್ಲಿ ಅಕ್ಕಿ ದರ ಶೇ.35ರಷ್ಟು ಭಾರೀ ಏರಿಕೆ, ಗ್ರಾಹಕರು ಕಂಗಾಲು!
ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆಯು ಜನರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಿದೆ. ಭತ್ತದ ಬಿತ್ತನೆ ಗಣನೀಯವಾಗಿ ಕುಂಠಿತಗೊಂಡ ಹಿನ್ನೆಲೆಯಲ್ಲಿ ಅಕ್ಕಿ ಬೆಲೆ ಕಳೆದ ಒಂದು ದಶಕದಲ್ಲೇ ಕಾಣದಷ್ಟು ಹೆಚ್ಚಳವಾಗಿದೆ. ಸ್ಟೀಮ್ ಹಾಗೂ ಸೋನಾ ಮಸೂರಿ ಸೇರಿದಂತೆ ಪ್ರಮುಖ ವಿಧದ ಅಕ್ಕಿ ದರಗಳು ಕಳೆದ ಎರಡು ತಿಂಗಳಲ್ಲಿ ಶೇ.35ರಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಭಾರೀ ಆಘಾತ ತಂದಿದೆ. ಶೇ.50ರಷ್ಟು ಮಳೆ ಕೊರತೆಯಿಂದಾಗಿ ರೈತರು ಬಿತ್ತನೆ ಮುಂದೂಡಿದ್ದು, ಉತ್ಪಾದನೆ ಕುಸಿಯುವ ಆತಂಕ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿದೆ. ಪೂರೈಕೆಯಲ್ಲೂ ತೀವ್ರ ವ್ಯತ್ಯಯ ಉಂಟಾಗಿದ್ದು, ಬೆಂಗಳೂರಿನ ಯಶವಂತಪುರ ಎಪಿ
Aug 21 min read


E20 ಎಂಜಿನ್ ಹಾಳು ಮಾಡಿದೆ ಎನ್ನುವ ಒಂದು ಕಾರಿನ ಹೆಸರನ್ನಾದರೂ ಹೇಳಿ' – ಗಡ್ಕರಿ ಸವಾಲು
E20 ಇಂಧನದಿಂದ ಮೈಲೇಜ್ ಕಡಿಮೆಯಾಗುತ್ತಿದೆಯೇ? ಗಡ್ಕರಿ ಸ್ಪಷ್ಟನೆ ನವದೆಹಲಿ, ಜುಲೈ 14: E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಎಂಬ ಟೀಕೆಗಳ ನಡುವೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಪತ್ರಕರ್ತರೊಬ್ಬರು, ತಮ್ಮ ಕಾರಿನ ನಗರ ಪ್ರದೇಶದ ಮೈಲೇಜ್ 11 ಕಿ.ಮೀ./ಲೀಟರ್ನಿಂದ 7 ಕಿ.ಮೀ./ಲೀಟರ್ಗೆ ಇಳಿದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಡ್ಕರಿ, ಸಾಮಾನ್ಯ ಚಾಲಕರು ಅಥವಾ ಬಳಕೆದಾರರು ಮೈಲೇಜ್ ಅನ್ನು ವೈಜ್ಞಾನಿಕವಾಗಿ ಅಳೆಯಲು ಸಾಧ್
Jul 141 min read


ವಾಣಿಜ್ಯ ಇಂಧನ ಪೂರೈಕೆ ನಿರ್ಬಂಧ ತೆರವು: ಕೇಂದ್ರ ಸರ್ಕಾರದ ದೊಡ್ಡ ಕೊಡುಗೆ
ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ದೊಡ್ಡ ಸಿಹಿಸುದ್ದಿ ನೀಡಿದೆ. ಗೃಹೇತರ ಪ್ಯಾಕೇಜ್ಡ್ ಎಲ್ಪಿಜಿ ಪೂರೈಕೆಗೆ ವಿಧಿಸಲಾಗಿದ್ದ ಎಲ್ಲಾ ವಲಯವಾರು ಮಿತಿಗಳು ಮತ್ತು ನಿರ್ಬಂಧಗಳನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಯಿಂದಾಗಿ ಈ ಹಿಂದೆ ಎಲ್ಪಿಜಿ ಪೂರೈಕೆ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು. ಪ್ರಸ್ತುತ ಅಂತರರಾಷ್ಟ್ರೀಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವುದರಿಂದ, ಬಿಕ್ಕಟ್ಟಿನ ಮುಂಚಿನಂತೆಯೇ ಇಂಧನ ಸರಬರಾಜನ್ನು ಪುನಃ ಆರಂಭಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಸಡಿಲಿಕೆಯಿಂದಾಗ
Jun 261 min read


ಬೆಲೆ ಏರಿಕೆ ಬಿಸಿ: ಪೆಟ್ರೋಲ್, ತರಕಾರಿ ಬೆನ್ನಲ್ಲೇ ಈಗ ಅಕ್ಕಿ ದರವೂ ದುಬಾರಿ!
ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಈಗ ಅಕ್ಕಿ ಬೆಲೆಯೂ ಶಾಕ್ ನೀಡಿದೆ. ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಮತ್ತು ಕೇಂದ್ರ ಸರ್ಕಾರ ವಿದೇಶಗಳಿಗೆ ಅಕ್ಕಿ ರಫ್ತು ಮಾಡಲು ಅನುಮತಿ ನೀಡಿರುವುದರಿಂದ ಸ್ಥಳೀಯವಾಗಿ ಅಕ್ಕಿಯ ಲಭ್ಯತೆ ಕಡಿಮೆಯಾಗಿದೆ. ಪರಿಣಾಮವಾಗಿ ವಿವಿಧ ತಳಿಯ ಅಕ್ಕಿ ದರ ಕೆ.ಜಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಾಗಿದೆ. ನವೆಂಬರ್ನಲ್ಲಿ ಹೊಸ ಬೆಳೆ ಬರುವವರೆಗೂ ಈ ಕೊರತೆ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
Jun 81 min read


ಎಲ್ಪಿಜಿ ಸಿಲಿಂಡರ್ ದರ ಏರಿಕೆ: ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಬರೆ
ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ದರ ಏರಿಕೆಯ ಬೆನ್ನಲ್ಲೇ ದೇಶದ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್ಗೆ 29 ರೂಪಾಯಿ ಹೆಚ್ಚಳ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ಎರಡನೇ ಬಾರಿ ದರ ಏರಿಕೆಯಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ (ಜೂನ್ 7) ಜಾರಿಗೆ ಬಂದಿವೆ. ಹೊಸ ದರ ಪರಿಷ್ಕರಣೆಯ ನಂತರ, ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ಏರಿಕೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆಯ ಮೇಲಿನ ಒತ್ತಡ
Jun 71 min read


ಗ್ರಾಹಕರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ತಲಾ ₹3 ಏರಿಕೆ
ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ₹3 ಹೆಚ್ಚಳವಾಗಿರುವುದಾಗಿ ವರದಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಈ ದರ ಪರಿಷ್ಕರಣೆ ಮಾಡಲಾಗಿದೆ ಎನ್ನಲಾಗಿದೆ. ಹೊಸ ದರ ಅನ್ವಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹100ರ ಗಡಿಯತ್ತ ಸಾಗಿದ್ದು, ಡೀಸೆಲ್ ದರವೂ ಗಣನೀಯ ಏರಿಕೆ ಕಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಸ್ಥಿರವಾಗಿದ್ದ ಇಂಧನ ದರದಲ್ಲಿ ಏಕಾಏಕಿ ಏರಿಕೆಯಾಗಿರುವುದು ವಾಹನ ಸವಾರರು ಹಾಗೂ ಸಾಮಾನ್ಯ ಜನರಿಗೆ ದೊಡ್ಡ ಹೊರೆ ತಂದಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ, ಜೊತೆಗೆ ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ
May 151 min read


ರಾಜ್ಯಾದ್ಯಂತ ಇಂಧನ ಮಾರಾಟಕ್ಕೆ ಹೊಸ ಮಾರ್ಗಸೂಚಿ: ಕ್ಯಾನ್, ಬಾಟಲಿಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ
ರಾಜ್ಯದಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪೆಟ್ರೋಲಿಯಂ ನಿಯಮಗಳು 2002ರ ಅನ್ವಯ, ಇಂಧನ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೊಸ ನಿಯಮದಂತೆ, ಪೆಟ್ರೋಲ್ ಬಂಕ್ಗಳಲ್ಲಿ ಇಂಧನವನ್ನು ಕೇವಲ ವಾಹನಗಳ ಟ್ಯಾಂಕ್ಗಳಿಗೆ ಮಾತ್ರ ತುಂಬಿಸಬೇಕು. ಬಾಟಲಿ, ಕ್ಯಾನ್ ಅಥವಾ ಇತರ ಕಂಟೇನರ್ಗಳಲ್ಲಿ ಪೆಟ್ರೋಲ್-ಡೀಸೆಲ್ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಾಹನಗಳಿಗೆ ಅಥವಾ ಅಧಿಕೃತ ಕ
May 131 min read


ರಸಗೊಬ್ಬರ ಖರೀದಿಗೆ ‘FID’ ಕಡ್ಡಾಯ – ವಿತರಣೆಯ ಮೇಲೆ ಸರ್ಕಾರದ ಕಣ್ಣಿಟ್ಟ ನಿಗಾ
ಕೆ-ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ; ಕಾಳಸಂತೆ ತಡೆಗೆ ಕಟ್ಟುನಿಟ್ಟಿನ ಕ್ರಮ ರಾಜ್ಯದಲ್ಲಿ ರಸಗೊಬ್ಬರ ವಿತರಣೆಯನ್ನು ಸುಸೂತ್ರಗೊಳಿಸಲು ಹಾಗೂ ಕಾಳಸಂತೆ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ರೈತರು ರಸಗೊಬ್ಬರ ಖರೀದಿಸಲು ‘FID’ (ಫಾರ್ಮರ್ ಐಡಿ) ಕಡ್ಡಾಯವಾಗಿದ್ದು, ತಮ್ಮ ಭೂಮಿಯನ್ನು ಕೂಡ ಅದಕ್ಕೆ ಲಿಂಕ್ ಮಾಡಿರಬೇಕು ಎಂದು ಕೃಷಿ ಇಲಾಖೆ ಸೂಚಿಸಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ರಸಗೊಬ್ಬರ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ರಸಗೊಬ್ಬರದ ಸರಿಯಾದ ಬಳಕೆ ಮತ್ತು
Apr 291 min read


ಮೇ 1 ರಿಂದ LPG ಬುಕಿಂಗ್ ಗೆ ಹೊಸ ನಿಯಮ ಜಾರಿ
ಮೇ 1ರಿಂದ LPG ಬುಕಿಂಗ್ ನಿಯಮಗಳಲ್ಲಿ ಬದಲಾವಣೆ ಸಾಧ್ಯ; ಸರಬರಾಜು ವ್ಯತ್ಯಯವಿಲ್ಲವೆಂದ ಸರ್ಕಾರ ನವದೆಹಲಿ, ಏಪ್ರಿಲ್ 28, 2026: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಇರಾನ್ ‘ಹಾರ್ಮುಜ್ ಜಲಸಂಧಿ’ ಮುಚ್ಚಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದ್ದರೂ, ದೇಶದಲ್ಲಿ LPG ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿರುವಂತೆ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಅನಿಲದ ನಿರಂತರ ಸರಬರಾಜು ಖಚಿತಪಡಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು
Apr 281 min read


ಆರ್ಬಿಐ ಬಿಗ್ ಅಪ್ಡೇಟ್: ಇನ್ಮುಂದೆ ₹15,000 ವರೆಗಿನ ಆಟೋ-ಡೆಬಿಟ್ ಪಾವತಿಗೆ OTP ಬೇಕಿಲ್ಲ!
ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಟೋ-ಡೆಬಿಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಇನ್ಮುಂದೆ ₹15,000 ವರೆಗಿನ ಹಣ ವರ್ಗಾವಣೆಗೆ ಯಾವುದೇ OTP ಅಗತ್ಯವಿರುವುದಿಲ್ಲ. ಈ ಮೊದಲು ಈ ಮಿತಿ ₹5,000 ಇತ್ತು. ಈಗ ಹೆಚ್ಚಳಗೊಂಡ ಮಿತಿಯಿಂದಾಗಿ ವಿದ್ಯುತ್ ಬಿಲ್, ವಿಮಾ ಪ್ರೀಮಿಯಂ ಹಾಗೂ ವಿವಿಧ ಚಂದಾದಾರಿಕೆ ಶುಲ್ಕಗಳನ್ನು ಗ್ರಾಹಕರು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಮತ್ತು ವೇಗವಾಗಿ ಪಾವತಿಸಬಹುದಾಗಿದೆ.
Apr 221 min read


ಈರುಳ್ಳಿ, ಬೆಳ್ಳುಳ್ಳಿ ದರ ಭಾರೀ ಕುಸಿತ: ರೈತರಿಗೆ ಸಂಕಷ್ಟ, ಗ್ರಾಹಕರಿಗೆ ಸಂತಸ
ದೇಶಾದ್ಯಂತ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಲೂಗಡ್ಡೆಯ ಆವಕ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆಗಳು ಗಣನೀಯವಾಗಿ ಕುಸಿದಿವೆ. ಇದರಿಂದ ಗ್ರಾಹಕರಿಗೆ ಸಂತೋಷ ಉಂಟಾಗಿದ್ದರೆ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳಿಂದ ಉತ್ತಮ ಲಾಭ ಕಂಡಿದ್ದ ರೈತರು, ಇದೇ ನಿರೀಕ್ಷೆಯಲ್ಲಿ ಈ ಬಾರಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆದರೆ ಒಮ್ಮೆಲೇ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಬೆಳೆ ಬಂದಿರುವುದರಿಂದ ಬೆಲೆಗಳು ಕುಸಿದಿವೆ. ಬೆಲೆ ಎಷ್ಟಿದೆ? ಯಶವಂತಪುರ ಎಪಿಎಂಸಿಯಲ್ಲಿ ಸಗಟು ಮಾರುಕಟ್ಟೆಯಲ್ಲಿ ಕಡಿಮೆ ಗುಣಮಟ್ಟದ
Apr 221 min read


ರಾಜ್ಯದಲ್ಲಿ ಮದ್ಯದ ದರ ಏರಿಕೆ?
ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಇನ್ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲು ಕರಡು ಅಧಿಸೂಚನೆ ಹೊರಡಿಸಿದೆ. ಈ ಹೊಸ 'ಆಲ್ಕೋಹಾಲ್-ಇನ್-ಬ್ರೇವರೇಜ್' (AIB) ನೀತಿಯಿಂದಾಗಿ ವಿಸ್ಕಿ, ರಮ್, ಜಿನ್ ಮತ್ತು ಬ್ರಾಂದಿಗಳ ಎಂಆರ್ಪಿ ಬೆಲೆಯಲ್ಲಿ ಕನಿಷ್ಠ ಶೇ. 20 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದು ಮದ್ಯಪ್ರಿಯರ ಜೇಬಿಗೆ ಭಾರಿ ಹೊರೆಯಾಗಲಿದೆ. ಪ್ರಸ್ತುತ ಮದ್ಯದ ಬಾಟಲಿಯ ಬೆಲೆ ಅಥವಾ ಸ್ಲ್ಯಾಬ್ಗಳ ಆಧಾರದ ಮೇಲೆ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ, ಅಬಕಾರಿ ಇಲಾಖೆಯ ಹೊಸ ತಿದ್ದುಪಡಿಯ ಅನ್
Apr 201 min read


ಡಾಲರ್ ಎದುರು ರೂಪಾಯಿ ಭಾರೀ ಕುಸಿತ: 94.15 ತಲುಪಿ ಐತಿಹಾಸಿಕ ಕನಿಷ್ಠ!
ಭಾರತೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಶುಕ್ರವಾರ ಮಹತ್ವದ ಕುಸಿತ ದಾಖಲಾಗಿದ್ದು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ₹94.1575 ರಷ್ಟು ಕುಸಿದು ಹೊಸ ಐತಿಹಾಸಿಕ ಕನಿಷ್ಠ ಮಟ್ಟ ತಲುಪಿದೆ. ಈ ಬೆಳವಣಿಗೆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಆತಂಕ ಮೂಡಿಸಿದೆ. ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡ ಯುದ್ಧ ಪರಿಸ್ಥಿತಿ ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟುಮಾಡಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳಾದ ಡಾಲರ್ ಕಡೆ ಮುಖ ಮಾಡಿದ್ದಾರೆ. ಇದರ ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಯುದ್ಧ ಆರಂಭವಾದ ನಂತರ ರೂಪಾಯಿ ಸುಮಾರು 3.5% ರಷ್ಟು ದುರ್ಬಲಗೊಂಡಿದೆ. ಇದೇ ವೇಳೆ, ಅಂತರಾಷ್ಟ್ರೀಯ ಮ
Mar 271 min read


ಡೀಸೆಲ್ ದರ ₹22 ಏರಿಕೆ!
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಕೈಗಾರಿಕಾ ಡೀಸೆಲ್ ಬೆಲೆಯನ್ನು ಲೀಟರ್ಗೆ ₹87.57 ರಿಂದ ₹109.59 ಕ್ಕೆ ಏರಿಸಿದೆ. ಹಾರ್ಮುಜ್ ಜಲಸಂಧಿ ಮುಚ್ಚುವಿಕೆ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಹಠಾತ್ ₹22 ರಷ್ಟು ಭಾರಿ ಬೆಲೆ ಏರಿಕೆ ಮಾಡಲಾಗಿದ್ದು, ಇದು ಕೈಗಾರಿಕಾ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ. ಕೈಗಾರಿಕಾ ಅಥವಾ ಬೃಹತ್ ಡೀಸೆಲ್ ಅನ್ನು ಸಾಮಾನ್ಯ ಪೆಟ್ರೋಲ್ ಬಂಕ್ಗಳಲ್ಲಿ ಮಾರಾಟ ಮಾಡದೆ, ನೇರವಾಗಿ ಕಾರ್ಖಾನೆಗಳು ಮತ್ತು ದೊಡ್ಡ ಕೈ
Mar 201 min read


ಚಿನ್ನ, ಬೆಳ್ಳಿ ದರ ಭಾರಿ ಇಳಿಕೆ!
ದೇಶೀಯ ಮತ್ತು MCX ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. MCX ನಲ್ಲಿ ಗೋಲ್ಡ್ ಫ್ಯೂಚರ್ಸ್ ಬೆಲೆ ₹500 ರಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ. ಇದು ಆಭರಣ ಪ್ರಿಯರಿಗೆ ಮತ್ತು ದೀರ್ಘಕಾಲೀನ ಹೂಡಿಕೆದಾರರಿಗೆ ಖರೀದಿಸಲು ಉತ್ತಮ ಸಮಯವಾಗಿದೆ. ಬೆಳ್ಳಿ ಬೆಲೆ ಕೂಡ ಇಳಿಕೆ: ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ ಕಂಡುಬಂದಿದೆ. MCX ನಲ್ಲಿ ಬೆಳ್ಳಿ ದರ ₹2,300 ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಇದು ಸಿಹಿ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಕಿಲೋ ಬೆಳ್ಳಿ ದರ ₹2,650 ಕ್ಕೆ ತಲುಪಿದೆ.
Mar 181 min read


ಎಲ್ಪಿಜಿ ಸಿಲಿಂಡರ್ ಕೊರತೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ
ದೇಶದ ಹಲವೆಡೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಎದುರಾಗಿದ್ದು, ಜನಸಾಮಾನ್ಯರು ಆತಂಕಗೊಂಡಿದ್ದಾರೆ. ಗಲ್ಫ್ ರಾಷ್ಟ್ರಗಳಿಂದ ಪೂರೈಕೆ ವ್ಯತ್ಯಯವಾಗಿರುವುದರಿಂದ ಕಾಳಸಂತೆಯಲ್ಲಿ ಸಿಲಿಂಡರ್ ಬೆಲೆ 1,500 ರೂಪಾಯಿವರೆಗೆ ಏರಿಕೆಯಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ತಕ್ಷಣವೇ ಉತ್ಪಾದನೆ ಹೆಚ್ಚಿಸುವಂತೆ ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ದಾಸ್ತಾನು ಮತ್ತು ಕಾಳಸಂತೆ ಮಾರಾಟ ತಡೆಯಲು ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಏರಿಸಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆಯ ಮೇಲೆ ಅನಿಲ ಪೂರೈಸಲು ಪೆಟ್ರೋಲಿ
Mar 101 min read
Archive
bottom of page



