top of page
News Articles
Sathyapatha News Plus


ನ್ಯಾಯಾಲಯದ ಮೆಟ್ಟಿಲೇರದೆ ವಿವಾದಗಳಿಗೆ ಪರಿಹಾರ: ಲೋಕ್ ಅದಾಲತ್ ಹೇಗೆ ಕೆಲಸ ಮಾಡುತ್ತದೆ?
ನ್ಯಾಯಾಲಯದ ಮೆಟ್ಟಿಲೇರುವ ಮೊದಲು ಅಥವಾ ನಂತರ ಉಂಟಾಗುವ ಸಣ್ಣ ಪ್ರಮಾಣದ ನ್ಯಾಯಿಕ ವಿವಾದಗಳಿಗೆ ಪರಿಹಾರ ನೀಡುವ ಜನಸ್ನೇಹಿ ವ್ಯವಸ್ಥೆಯೇ ಲೋಕ್ ಅದಾಲತ್. ನ್ಯಾಯ ಎನ್ನುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಆದರೆ ನ್ಯಾಯಾಲಯದ ಪ್ರಕ್ರಿಯೆ ದೀರ್ಘವಾಗುವುದು, ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದು, ಸಮಯ ಮತ್ತು ಹಣದ ಖರ್ಚು ಹೆಚ್ಚಾಗುವುದು ಸಾಮಾನ್ಯ ಜನರಿಗೆ ನ್ಯಾಯ ಪಡೆಯುವುದನ್ನು ಕೆಲವೊಮ್ಮೆ ಕಷ್ಟಕರವಾಗಿಸುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಸರಳವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ವಿವಾದಗಳನ್ನು ಪರಿಹರಿಸಿಕೊಳ್ಳಲು ನೆರವಾಗುವ ಪ್ರಮುಖ ವ್ಯವಸ್ಥೆಯೇ ಲೋಕ್ ಅದಾಲತ್. ‘ಲೋಕ್ ಅದಾ
4 hours ago4 min read


ಐವರ್ನಾಡು ಎಸ್ಸಿ ಕಾಲನಿ ರಸ್ತೆ ಅಭಿವೃದ್ಧಿಗೆ ಬಿಜೆಪಿ ಶಕ್ತಿ ಕೇಂದ್ರದ ಮನವಿ: ಅನುದಾನಕ್ಕೆ ಅಧಿಕಾರಿಗಳ ಸ್ಪಂದನೆ
ಐವರ್ನಾಡು ಎಸ್ಸಿ ಕಾಲನಿ ರಸ್ತೆಗಳ ದುಸ್ಥಿತಿ: ದುರಸ್ತಿಗೆ ಅನುದಾನ ನೀಡಲು ಶಿಫಾರಸು ಸುಳ್ಯ: ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಐವರ್ನಾಡು–ನನ್ಯಡ್ಕ ಎಸ್ಸಿ ಕಾಲನಿ ರಸ್ತೆ ಹಾಗೂ ಐವರ್ನಾಡು–ಮುಚ್ಚಿನಡ್ಕ ಎಸ್ಸಿ ಕಾಲನಿ ರಸ್ತೆಗಳ ದುಸ್ಥಿತಿಯನ್ನು ಸರಿಪಡಿಸುವಂತೆ ಸುಳ್ಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎರಡೂ ರಸ್ತೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದರು. ರಸ್ತೆಗಳು ತೀರಾ ಹದಗೆಟ್ಟಿರುವುದನ್ನು ಗಮನಿಸಿದ ಅಧಿಕಾರಿಗಳು, ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸ
9 hours ago1 min read


ಪುತ್ತೂರು: ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ವರ್ಷದ ಮಗು ದಿಢೀರ್ ಸಾವು
ಪುತ್ತೂರು: ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ವರ್ಷದ ಮುದ್ದು ಮಗು ದಿಢೀರನೆ ಅಸ್ವಸ್ಥಗೊಂಡು ಮೃತಪಟ್ಟ ಹೃದಯವಿದ್ರಾವಕ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆಸ್ಟಿನ್ ಎಂಬ ಎರಡು ವರ್ಷದ ಕಂದಮ್ಮ ಅಕ್ಟೋಬರ್ 29ರಂದು ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಫದ ತೊಂದರೆಯಿಂದ ಬಳಲುತ್ತಿದ್ದ ಆಸ್ಟಿನ್ನನ್ನು ಅಕ್ಟೋಬರ್ 28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆಯ ನಂತರ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಪೋಷಕರು ಮನೆಗೆ ಕರೆತಂದಿದ್ದರು. ಆದರೆ, ಅಕ್ಟೋಬರ್ 29ರ ಮುಂಜಾನೆ ಎಂದಿನಂತೆ ಎದ್ದು ಅಣ್ಣ
10 hours ago1 min read


ಪಂಜಿಮೊಗರು ರಾಕೇಶ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು ಬಳಿಯ ನಿವಾಸಿ ರಾಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನಗರದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸುನೀಲ್ ಕುಮಾರ್, ಪ್ರವೀಣ್ ಪೂಜಾರಿ, ಪ್ರೀತಮ್ ಹಾಗೂ ರೋಹಿತ್ ಕುಮಾರ್ ಶಿಕ್ಷೆಗೆ ಒಳಗಾದ ಆರೋಪಿಗಳು. 2019ರ ಜನವರಿ 3ರಂದು ಸುನೀಲ್ ಕುಮಾರ್ ತಂಗಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ರಾಕೇಶ್ ಅವರನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಕಾವೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ
12 hours ago1 min read


ಠಾಣೆಯಲ್ಲಿ ಹೆತ್ತವರ ಕಣ್ಣೀರಿಗೂ ಕರಗದ ಮಗಳು! 40ರ ಧರ್ಮಗುರುವಿನ ಜೊತೆ ಹೋಗುವುದಾಗಿ ಯುವತಿ ಪಟ್ಟು…
ಠಾಣೆಯಲ್ಲೇ ಹೆತ್ತವರ ಕಣ್ಣೀರು… ಕುಮಟಾ–ಮಂಗಳೂರು ಪ್ರಕರಣ ಭಾರೀ ಚರ್ಚೆ ಮಂಗಳೂರು/ಕುಮಟಾ: ಧರ್ಮ ಶಿಕ್ಷಣ ನೀಡುವ ಮದರಸಾದಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ವ್ಯಕ್ತಿಯೊಬ್ಬರು, ತನಗಿಂತ ಕಿರಿಯ ಯುವತಿಯೊಂದಿಗೆ ತೆರಳಿರುವ ಆರೋಪದ ಪ್ರಕರಣ ಇದೀಗ ಉತ್ತರ ಕನ್ನಡದ ಕುಮಟಾ ಹಾಗೂ ಮಂಗಳೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಅವರ 22 ವರ್ಷದ ಪುತ್ರಿ ಸ್ಥಳೀಯ ಮದರಸಾದಲ್ಲಿ ಧರ್ಮ ಶಿಕ್ಷಣ ಪಡೆಯುತ್ತಿದ್ದರು. ಇದೇ ಮದರಸಾದಲ್ಲಿ ಮಂಗಳೂರಿನ ಅಸೈಗೋಳಿ ನಿವಾಸಿ, 40 ವರ್ಷದ ಅಶ್ರಫ್ ಸಅದಿ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದರು ಎ
1 day ago1 min read


ದೇರಳಕಟ್ಟೆ ಕಾಲೇಜಿನಲ್ಲಿ ರ್ಯಾಗಿಂಗ್ ಆರೋಪ: 7 ವಿದ್ಯಾರ್ಥಿಗಳಿಗೆ ಬೆದರಿಕೆ, ಹಿರಿಯರ ವಿರುದ್ಧ ಕೇಸ್!
ಉಳ್ಳಾಲ: ದೇರಳಕಟ್ಟೆಯ ಖಾಸಗಿ ಪದವಿ ಕಾಲೇಜೊಂದರಲ್ಲಿ ಏಳು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ, ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಹಾಡು ಹಾಡಿಸಿ ವಿಡಿಯೋ ರೆಕಾರ್ಡ್? ದೂರಿನ ಪ್ರಕಾರ, ಅಕ್ಟೋಬರ್ 2ರಂದು ಕಾಲೇಜಿನ ಹೊರಗೆ ತೆರಳಿದ್ದ ವೇಳೆ ದೂರುದಾರ ವಿದ್ಯಾರ್ಥಿ ಹಾಗೂ ಸ್ನೇಹಿತರಿಗೆ ಹಿರಿಯ ವಿದ್ಯಾರ್ಥಿಗಳಾದ ಅಶಬ್ ಮತ್ತು ಅಸ್ಪಾಕ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 15ರಂದು ದೂರುದಾರ ಹಾಗೂ
2 days ago1 min read


ಕರ್ನಾಟಕ ಎಸ್ಐಆರ್ ಪ್ರಕ್ರಿಯೆ ಪೂರ್ಣ: 99.32 ಲಕ್ಷ ಹೆಸರುಗಳು ಡಿಲೀಟ್!
ಬೆಂಗಳೂರು: ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪರಿಷ್ಕರಣೆಯ ನಂತರ ರಾಜ್ಯದಲ್ಲಿ ಬರೋಬ್ಬರಿ 99.32 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜೂನ್ 30ರಿಂದ ಆರಂಭಗೊಂಡ ಈ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗೈರುಹಾಜರಿ, ಸ್ಥಳಾಂತರ, ಮರಣ ಹಾಗೂ ನಕಲಿ ದಾಖಲಾತಿಗಳ ಆಧಾರದ ಮೇಲೆ ಒಂದು ಕೋಟಿಗೂ ಹೆಚ್ಚು ಮತದಾರರನ್ನು ಗುರುತಿಸಲಾಗಿದ್ದು, 43.82 ಲಕ್ಷ ಜನರಿಗೆ ನೋಟಿಸ್ ನೀಡಲಾ
3 days ago1 min read


ಧರ್ಮಸ್ಥಳ ಸೌಜನ್ಯ ಪ್ರಕರಣ: ಮರುತನಿಖೆ ಚುರುಕುಗೊಳಿಸಿದ ಎಸ್ಐಟಿ, 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ನೋಟಿಸ್!
ಧರ್ಮಸ್ಥಳದಲ್ಲಿ ಸಂಭವಿಸಿದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭಿಕ ತನಿಖೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಸ್ಐಟಿ ಸದ್ಯ ನೋಟಿಸ್ ನೀಡಿದೆ. 2012ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಘಟನೆ ನಡೆದಿತ್ತು. ಈ ಹಿಂದೆ ನಡೆದಿರುವ ಆರಂಭಿಕ ಪೊಲೀಸ್ ತನಿಖೆಯಿಂದ ಹಿಡಿದು, ನಂತರದ ಸಿಐಡಿ ಹಾಗೂ ಸಿಬಿಐ ತನಿಖೆಯ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗ
3 days ago1 min read


ಇಂದಿನ (ಅ. 27) ಚಿನ್ನದ ದರ ಹೇಗಿದೆ ಚೆಕ್ ಮಾಡಿ
ಇಂದಿನ (ಅಕ್ಟೋಬರ್ 27, 2026) ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ): • 24 ಕ್ಯಾರೆಟ್ ಚಿನ್ನ (ಅಪರಂಜಿ): ₹1,42,580 • 22 ಕ್ಯಾರೆಟ್ ಚಿನ್ನ (ಆಭರಣದ ಚಿನ್ನ): ₹1,30,700 • 18 ಕ್ಯಾರೆಟ್ ಚಿನ್ನ: ₹1,06,940 • ಚಿನ್ನದ ಬೆಲೆಯಲ್ಲಿ ಇಂದು ಸುಮಾರು ₹540 ರಷ್ಟು ಏರಿಕೆಯಾಗಿದೆ. • ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಚೇತರಿಕೆ ಕಂಡುಬಂದಿದೆ. • ಇಂದಿನ 1 ಗ್ರಾಂ ಬೆಳ್ಳಿ ಬೆಲೆ ₹220 ಹಾಗೂ ಪ್ರತಿ ಕೆಜಿ ಬೆಳ್ಳಿಗೆ ₹2,20,000 ಆಗಿದೆ.
3 days ago1 min read


ಗುವಾಹಟಿಯಲ್ಲಿ ಭೀಕರ ಗುಂಡಿನ ದಾಳಿ: ಐವರ ದಾರುಣ ಸಾವು, ಪ್ರಮುಖ ಆರೋಪಿ ಬಂಧನ
ಗುವಾಹಟಿ: ಗುವಾಹಟಿಯ ಉಲುಬಾರಿ ಪ್ರದೇಶದ ಬೋರಾ ಸರ್ವಿಸ್ ಸಮೀಪವಿರುವ ಹೋಟೆಲ್ ಒಂದರ ಬಳಿ ಸೋಮವಾರ ರಾತ್ರಿ ಭೀಕರ ಗುಂಡಿನ ದಾಳಿ ನಡೆದಿದ್ದು, ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಹೋಟೆಲ್ ಮಾಲೀಕರು ಮತ್ತು ಅವರ ಮಗ ಸೇರಿದಂತೆ ನಾಲ್ಕೇ ಕುಟುಂಬದವರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ 9 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಹೋಟೆಲ್ ಲೀಸ್ ಒಪ್ಪಂದ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಲೀಕರು ಮತ್ತು ಗುತ್ತಿಗೆದಾರರ ನಡುವೆ ನಡೆದ ತೀವ್ರ ವಾಗ್ವಾದವೇ ಈ ಮಾರಣಾಂತಿಕ ದಾಳಿ
3 days ago1 min read


ಐವರ್ನಾಡು ಗ್ರಾಮದಲ್ಲಿ ನಿರಂತರ ಪವರ್ ಕಟ್ ಗ್ಯಾಂಗ್ ಮ್ಯಾನ್ ಮತ್ತು 20 GOS ಅಳವಡಿಕೆಗೆ ಕೃಷಿಕರ ಹಿತರಕ್ಷಣಾ ಸಮಿತಿಯಿಂದ ಆಗ್ರಹ
ಐವರ್ನಾಡಿನಲ್ಲಿ ನಿರಂತರ ವಿದ್ಯುತ್ ವ್ಯತ್ಯಯ: 2–3 ಗ್ಯಾಂಗ್ಮ್ಯಾನ್, 20 GOS ಅಳವಡಿಕೆಗೆ ಆಗ್ರಹ ಸುಳ್ಯ: ಐವರ್ನಾಡು ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ವಿದ್ಯುತ್ ವ್ಯತ್ಯಯ ಸಮಸ್ಯೆ ತೀವ್ರಗೊಂಡಿದ್ದು, ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನವಿಡೀ ಹಲವು ಬಾರಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಅಡಚಣೆಯಾಗುತ್ತಿದೆ. ಅದರಲ್ಲೂ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಇಲ್ಲದ ಕಾರಣ ನೀರಾವರಿ ಪಂಪ್ಸೆಟ್ಗಳನ್ನು ಕಾರ್ಯಾಚರಿಸಲು ಸಾಧ್ಯವಾಗದೆ ರೈತರು ಆತಂಕಗೊಂಡಿದ್ದಾರೆ. ಮಳೆ ಹಾಗೂ ಗಾಳಿಗೆ ಮರಗಳು ವಿದ
4 days ago1 min read


ಗೋರಕ್ಷಣೆ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು: ಮಂಗಳೂರು ನಗರ ಪೊಲೀಸ್ ಆಯುಕ್ತರ ಎಚ್ಚರಿಕೆ
ಮಂಗಳೂರು: ಗೋಹತ್ಯೆ ಹಾಗೂ ಕಾನೂನುಬಾಹಿರ ಜಾನುವಾರು ಸಾಗಾಟ ತಡೆಯಲು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು, ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ತಲಪಾಡಿಯಿಂದ ಜೋಕಟ್ಟೆಗೆ ಅಕ್ರಮ ಗೋ ಸಾಗಾಟ ವಾಹನದ ಮಾಹಿತ ನೀಡಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂಬ ಬಜರಂಗದಳದ ಆರೋಪಕ್ಕೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. "ಇದು ನಿಯಮಾನುಸಾರ ಕೇರಳದಿಂದ ನಗರದ ಪರವಾನಗಿ ಹೊಂದಿರುವ ಅಂಗಡಿಗೆ ತರಲಾಗುತ್ತಿದ್ದ ಕಾನೂನುಬದ್ಧ ಮಾಂಸ ಸಾಗಾಟ ಪ್ರಕರಣವಾಗಿದೆ. ಕರ್ನಾಟಕದಲ್ಲಿ ಗೋಹತ್ಯೆ ನಿಷ
4 days ago1 min read


ಆಟವಾಡುತ್ತಿದ್ದಾಗ ಕುತ್ತಿಗೆಗೆ ಸಿಲುಕಿದ ಹಗ್ಗ; 9 ವರ್ಷದ ಬಾಲಕ ದಾರುಣ ಸಾವು
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪದ ಕೇಂತಲೆ ಮನೆಯಲ್ಲಿ ನಡೆದ ದುರ್ಘಟನೆಯೊಂದರಲ್ಲಿ 9 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಕೇಂತಲೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ. ಅ.25ರ ರಾತ್ರಿ ಮನೆಯ ಎದುರಿನ ಹಾಲ್ನಲ್ಲಿ ಅಮೃತ್ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಕಿಟಕಿಯಲ್ಲಿ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗವೊಂದು ಆಕಸ್ಮಿಕವಾಗಿ ಬಾಲಕನ ಕುತ್ತಿಗೆಗೆ ಸಿಲುಕಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಬಾಲಕ ಅಸ್ವಸ್ಥಗೊಂಡಿದ್ದಾನೆ. ಅಮೃತ್ ಮಾತನಾಡದೆ ಇರುವುದನ್ನು ಗಮನಿಸಿದ ಆತನ ಸಹೋದರಿ ಪ್ರಾರ್ಥನಾ, ಆತಂಕದಿಂದ ಜೋರಾಗಿ ಕೂಗ
4 days ago1 min read


ಕೇವಲ 50 ರೂ. ಮೊಸರು ರಿಫಂಡ್ ಆಸೆಗೆ ಬಿದ್ದು 98 ಸಾವಿರ ಕಳೆದುಕೊಂಡ ಬೆಂಗಳೂರು ಮಹಿಳೆ!
ದೈನಂದಿನ ಜೀವನದಲ್ಲಿ ಇನ್ಸ್ಟಂಟ್ ಡೆಲಿವರಿ ಆ್ಯಪ್ಗಳ ಬಳಕೆ ಹೆಚ್ಚುತ್ತಿರುವಂತೆ, ಸೈಬರ್ ವಂಚಕರ ಕೃತ್ಯಗಳೂ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಬೆಂಗಳೂರಿನ ಮಹಿಳೆಯೊಬ್ಬರು ಬ್ಲಿಂಕಿಟ್ನಲ್ಲಿ ಮೊಸರಿನ ಪ್ಯಾಕೆಟ್ ಆರ್ಡರ್ ಮಾಡಿ, ಅದರ ಹಣವನ್ನು ರಿಫಂಡ್ (ಮರುಪಾವತಿ) ಪಡೆಯಲು ಹೋಗಿ ಬರೋಬ್ಬರಿ 98,000 ರೂ.ಗಳನ್ನು ಕಳೆದುಕೊಂಡಿದ್ದಾರೆ. ಅಕ್ಟೋಬರ್ 17ರಂದು ಹಾನಿಗೊಳಗಾದ ಮೊಸರಿನ ಪ್ಯಾಕೆಟ್ಗಾಗಿ ಕಸ್ಟಮರ್ ಕೇರ್ ಸಂಪರ್ಕಿಸಿದ ಮಹಿಳೆಗೆ, ನಕಲಿ ಗ್ರಾಹಕ ಸೇವಾ ಪ್ರತಿನಿಧಿಗಳೆಂದು ನಂಬಿಸಿದ ವಂಚಕರು ವಂಚನೆ ಎಸಗಿದ್ದಾರೆ. ಇಂಟರ್ನೆಟ್ನಲ್ಲಿ ಸಿಕ್ಕ ನಕ
4 days ago1 min read


ವಾಯುವ್ಯ ಸಾರಿಗೆ ಸಂಸ್ಥೆಗೆ ‘ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ: ಡಿ.ಕೆ. ಶಿವಕುಮಾರ್ ಘೋಷಣೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು (NWKRTC) ‘ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ನಡೆದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಈ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದರು. ವೀರರಾಣಿ ಕಿತ್ತೂರು ಚೆನ್ನಮ್ಮನ ಪರಂಪರೆ ಮತ್ತು ಇತಿಹಾಸವನ್ನು ಉಳಿಸಲು ಸರ್ಕಾರ ಬದ್ಧವಾಗಿದೆ ಎಂದ ಡಿ.ಕೆ. ಶಿವಕುಮಾರ್, ಸ್ಥಳೀಯ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ಮನವಿಗೆ ಸ್ಪಂದಿಸಿ ಕಿತ್ತೂರು ಕೋಟೆಯ ಮರುಸೃಷ್ಟಿ ಹಾಗೂ ಅಭಿವೃದ್ಧಿಗೆ ಮುಂಬರುವ ಬಜೆಟ
4 days ago1 min read


ಅಲಂಗಾರ್: ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ವಿಟ್ಲದ ಅಬ್ದುಲ್ ನಿಹಾದ್ಗೆ ಪ್ರಥಮ ಸ್ಥಾನ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಗಾರ್ನಲ್ಲಿ ನಡೆದ 'ಐರನ್ ಟೆಂಪಲ್ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ'ಯ ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ವಿಟ್ಲದ ಅಬ್ದುಲ್ ನಿಹಾದ್ ಪೊನ್ನೋಟ್ಟು ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆ ಮೆರೆದಿದ್ದಾರೆ. ಐರನ್ ಟೆಂಪಲ್ ಸೇವಾ ಟ್ರಸ್ಟ್ (ರಿ.) ವತಿಯಿಂದ ಅಕ್ಟೋಬರ್ 25ರಂದು ಅಲಂಗಾರ್ನ ದೀನದಯಾಳು ರೈತ ಸಭಾಭವನದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೃಢಸಂಕಲ್ಪ ಮತ್ತು ಪರಿಶ್ರಮದಿಂದ ಕಣಕ್ಕಿಳಿದ ನಿಹಾದ್, ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನದೊಂದಿಗೆ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ವಿಟ್ಲದ
4 days ago1 min read


ಗೂನಡ್ಕ ಬಳಿ ಭೀಕರ ರಸ್ತೆ ಅಪಘಾತ: ಕಾರಿನಲ್ಲಿದ್ದ ಮಗು ಸಾವು
ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೂನಡ್ಕ ಎಂಬಲ್ಲಿ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಕಾರಿನಲ್ಲಿದ್ದ ಪುಟ್ಟ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಗಾಯಾಳುಗಳನ್ನು ತಕ್ಷಣವೇ ಸುಳ್ಯದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೀಡಾದ ಕಾರು ಬಂಟ್ವಾಳ ತಾಲೂಕಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಸ್ತೆ ಸಂಚಾರವನ್ನು
5 days ago1 min read


ಕೊಂಬೆಟ್ಟು ಕಾಲೇಜು ವಿದ್ಯಾರ್ಥಿ ಶ್ರೀವತ್ಸ ನಾಪತ್ತೆ: ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಪುತ್ತೂರು: ಕೊಂಬೆಟ್ಟು ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶ್ರೀವತ್ಸ (17) ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದ ಯುವಕ ಎಡಮಂಗಲ ಪೊಯ್ಯತ್ತೂರು ನಿವಾಸಿ ಹಾಗೂ ಬೆಳ್ಳಾರೆಯಲ್ಲಿ 'ವಿನಾಯಕ ಸ್ಪೋರ್ಟ್ಸ್' ಅಂಗಡಿ ನಡೆಸುತ್ತಿರುವ ನಾರಾಯಣ ಪೂಜಾರಿ ಅವರ ಮಗನಾಗಿದ್ದಾನೆ. ಅಕ್ಟೋಬರ್ 22ರಂದು ಬೆಳಿಗ್ಗೆ 6.50ರ ಬಸ್ಸಿಗೆ ಕಾಲೇಜಿಗೆ ತೆರಳುವುದಾಗಿ ಹೇಳಿ ಕಾಲೇಜು ಸಮವಸ್ತ್ರ ಧರಿಸಿ ಮನೆಯಿಂದ ಹೊರಟಿದ್ದ ಶ್ರೀವತ್ಸ, ಸಂಜೆಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಸಂಬಂಧಿಕರ ಹಾಗೂ ಸ್ನೇಹಿತರ ಮನೆ
5 days ago1 min read
Archive
bottom of page



