;
top of page

ಅಲಂಗಾರ್: ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ವಿಟ್ಲದ ಅಬ್ದುಲ್ ನಿಹಾದ್‌ಗೆ ಪ್ರಥಮ ಸ್ಥಾನ

5 days ago
1 min read

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಗಾರ್‌ನಲ್ಲಿ ನಡೆದ 'ಐರನ್ ಟೆಂಪಲ್ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ'ಯ ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ವಿಟ್ಲದ ಅಬ್ದುಲ್ ನಿಹಾದ್ ಪೊನ್ನೋಟ್ಟು ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆ ಮೆರೆದಿದ್ದಾರೆ.

ಐರನ್ ಟೆಂಪಲ್ ಸೇವಾ ಟ್ರಸ್ಟ್ (ರಿ.) ವತಿಯಿಂದ ಅಕ್ಟೋಬರ್ 25ರಂದು ಅಲಂಗಾರ್‌ನ ದೀನದಯಾಳು ರೈತ ಸಭಾಭವನದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೃಢಸಂಕಲ್ಪ ಮತ್ತು ಪರಿಶ್ರಮದಿಂದ ಕಣಕ್ಕಿಳಿದ ನಿಹಾದ್, ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನದೊಂದಿಗೆ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.

ವಿಟ್ಲದ ಪೊನ್ನೂಟ್ಟು ನಿವಾಸಿಗಳಾದ ಆಯಿಷಾ ಪೊನ್ನೋಟ್ ಮತ್ತು ಮೊಹಮ್ಮದ್ ಪೊನ್ನೋಟ್ ದಂಪತಿಯ ಪುತ್ರರಾಗಿರುವ ಇವರ ಈ ಸ್ಪೂರ್ತಿದಾಯಕ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page