top of page
News Articles
Sathyapatha News Plus


ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಚೌತಿ ತಂಬಿಲ ಮತ್ತು ಕದಿರು ಪ್ರಸಾದ ವಿತರಣೆ
ಇತಿಹಾಸ ಪ್ರಸಿದ್ಧ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯರ ಆದಿ ಬೈದೇರುಗಳ ಗರಡಿಯಲ್ಲಿ ಪೂರ್ವ ಸಂಪ್ರದಾಯದಂತೆ ಪತ್ತನಾಜೆಯಂದು ಮುಚ್ಚಿದ್ದ ಗರ್ಭಗುಡಿಯ ಬಾಗಿಲನ್ನು ಚೌತಿಯಂದು ತೆರೆದು ವಿಶೇಷ ತಂಬಿಲ ಸೇವೆ ನೆರವೇರಿಸಲಾಯಿತು. ಬೈದೇರುಗಳ ತಂಬಿಲ, ದರ್ಶನ ಬಲಿ ಹಾಗೂ ದೇಯಿ ಬೈದೇತಿಯವರ ಗರ್ಭಗುಡಿಯಲ್ಲಿ ವಿಶೇಷ ತಂಬಿಲ ನಡೆದು ಭಕ್ತರಿಗೆ ಕದಿರು ಪ್ರಸಾದ ವಿತರಿಸಲಾಯಿತು. ಕಂಚುಕಲ್ಲಿಗೆ ತೆಂಗಿನಕಾಯಿ ಒಡೆದು ಊರಿನ ಕ್ಷೇಮಕ್ಕಾಗಿ ಪ್ರಾರ್ಥಿಸಲಾಯಿತು. ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಭಕ್ತರಿಗೆ ಗಂಧ ಪ್ರಸಾದ ನೀಡಲಾಯಿತು. ನಂತರ ಸಾರ್ವಜನಿಕ ಅನ್ನಸಂತರ
1 day ago1 min read


ಕೋಲ್ಚಾರು: ಶ್ರೀ ಭಗವತಿ ಸೇವಾ ಸಮಿತಿ ಇದರ ವತಿಯಿಂದ 24ನೇ ವರ್ಷದ ಅದ್ದೂರಿ ಓಣಂ ಆಚರಣೆ
ಕೋಲ್ಚಾರಿನಲ್ಲಿ 24ನೇ ವರ್ಷದ ಅದ್ದೂರಿ ಓಣಂ ಆಚರಣೆ ಕೋಲ್ಚಾರು: ಶ್ರೀ ಭಗವತಿ ಸೇವಾ ಸಮಿತಿ, ಕೋಲ್ಚಾರು ಇದರ ವತಿಯಿಂದ ಇಂದು, ಆಗಸ್ಟ್ 23ರಂದು 24ನೇ ವರ್ಷದ ಓಣಂ ಆಚರಣೆಯನ್ನು ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ತಿರುವಾದಿರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಹಿಳೆಯರು ಹಾಗೂ ಮಕ್ಕಳಿಗಾಗಿ ಹಲವು ಬಗೆಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದವರು ಉತ್ಸಾಹದಿಂದ ಪಾಲ್ಗೊಂಡರು. ಆಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಅದ್ಭುತ ಓಣಂ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾಂಪ್ರದಾಯಿ
Aug 231 min read


ಇಂದಿನಿಂದ ಪವಿತ್ರ ಆಷಾಢ ಮಾಸ ಆರಂಭ: ಈ ತಿಂಗಳಲ್ಲಿ ಮದುವೆ, ಗೃಹಪ್ರವೇಶದಂತಹ ಶುಭಕಾರ್ಯಗಳನ್ನು ಏಕೆ ಮುಂದೂಡುತ್ತಾರೆ? ತಿಳಿಯಿರಿ ಕಾರಣ
ಆಷಾಢ ಮಾಸ ಆರಂಭ: ಆಗಸ್ಟ್ 12ರವರೆಗೆ ಭಕ್ತಿ, ಉಪವಾಸ, ದಾನಧರ್ಮಕ್ಕೆ ವಿಶೇಷ ಮಹತ್ವ ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಪವಿತ್ರ ಆಷಾಢ ಮಾಸ ಆರಂಭವಾಗಿದ್ದು, ಈ ವರ್ಷ ಅದು ಜುಲೈ 15ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಭಕ್ತಿ, ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಆಚರಣೆಗಳಿಗೆ ಮೀಸಲಾದ ಈ ತಿಂಗಳು ದೇವರ ಆರಾಧನೆ, ಉಪವಾಸ, ಜಪ-ತಪ ಹಾಗೂ ದಾನಧರ್ಮಕ್ಕೆ ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಆಷಾಢ ಮಾಸದಲ್ಲಿ ಶ್ರೀ ಮಹಾವಿಷ್ಣು, ಪರಮಶಿವ ಹಾಗೂ ಆದಿಶಕ್ತಿಯ ಆರಾಧನೆಗೆ ವಿಶೇಷ ಪ್ರಾಮುಖ್ಯತೆ ಇದೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ
Jul 151 min read


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ದಾಖಲೆ: ಸತತ 15ನೇ ವರ್ಷವೂ ರಾಜ್ಯದ ನಂ.1
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ದಾಖಲೆ ಮೊತ್ತದ ಆದಾಯ ಗಳಿಸಿದೆ. ಈ ವರ್ಷ ದೇವಸ್ಥಾನಕ್ಕೆ ಒಟ್ಟು 167.89 ಕೋಟಿ ರೂಪಾಯಿ ಆದಾಯ ಬಂದಿದ್ದು, ಕಳೆದ ವರ್ಷಕ್ಕಿಂತ 12 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ರಾಜ್ಯದ ಮುಜರಾಯಿ ಇಲಾಖೆಯ ಅಡಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ದೇಗುಲವಾಗಿ ಸತತ 15ನೇ ಬಾರಿಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ದೇವಸ್ಥಾನದ ಒಟ್ಟು ಆದಾಯದಲ್ಲಿ ಹರಕೆ ಸೇವೆಗಳಿಂದ 64.08 ಕೋಟಿ ರೂ. ಮತ್ತು ಸ್ಥಿರ ಠೇವಣಿ ಬಡ್ಡಿಯಿಂದ 49.11 ಕೋಟಿ ರೂ. ಸಂಗ್ರಹವಾಗ
May 111 min read


ಕೆಲಂಬೀರಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆ
ಪುತ್ತೂರು: ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ 51ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಕೊಡಮಂತಾಯ ದೈವದ ಹಾಗೂ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಮಾರ್ಚ್ 2 ರಿಂದ 5ರವರೆಗೆ ಸಂಭ್ರಮದಿಂದ ನಡೆಯಲಿದೆ. ಫೆಬ್ರವರಿ 15ರಂದು ಆಟೋಟ ಸ್ಪರ್ಧೆಗಳು ಹಾಗೂ ಫೆಬ್ರವರಿ 25ರಂದು ಗೊನೆ ಮುಹೂರ್ತ ನೆರವೇರಲಿದೆ. ಮಾರ್ಚ್ 2ರಂದು ಸ್ಥಳ ಶುದ್ಧಿ ಹೋಮ, ನಾಗಬ್ರಹ್ಮ ತಂಬಿಲ ಹಾಗೂ ಸಾಯಂಕಾಲ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಾರ್ಚ್ 4ರಂದು ಬೆಳಿಗ್ಗೆ ಕೊಡಮಂತಾಯ ದೈವದ ನೇಮೋತ್ಸವ ಹಾಗೂ ಸಂಜೆ ಬ್ರಹ್ಮ ಬೈದೆರುಗಳ ಭಂಡಾರ ತೆಗೆಯಲಾಗುವುದು. ಈ ವೇಳೆ ಕುಣಿತ ಭಜನೆ,
Mar 11 min read
Archive
bottom of page



