ಮೂರು ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾ ಸರ್ಕಾರವು ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಪ್ರಧಾನಿ ಮೋದಿಯವರಿಗೆ ಈ ಪದಕವನ್ನು ಪ್ರದಾನ ಮಾಡಿದರು. ಭಾರತ ಮತ್ತು ಇಥಿಯೋಪಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮೋದಿಯವರ ಶ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾ
ಅಮೆರಿಕಾದ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಕೂಡ ಏಷ್ಯಾದ ದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಅವರು ಸ್ಥಳೀಯ ಉದ್ಯಮಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. 2026ರ ಜನವರಿಯಿಂದ ಜಾರಿಗೆ ಬರಲಿರುವ ಈ ಸುಂಕ ವಿಧಿಸುವ ಮಸೂದೆಗೆ ಮೆಕ್ಸಿಕನ್ ಸೆನೆಟ್ (ಮೇಲ್ಮನೆ) ಅಂತಿಮ ಅನುಮೋದನೆ ನೀಡಿದೆ. ಈ ನಿರ್ಣಯದ ಪರವಾಗಿ 76 ಮತ್ತು ವಿರುದ್ಧವಾಗಿ ಕೇವಲ 5 ಸದಸ್ಯರು ಮತ ಚಲಾಯಿಸಿದ್ದು, ಮಸೂದೆಗೆ ಸುಲಭವಾಗಿ ಅಂಗೀಕಾರ ದೊರೆತಿದೆ. ಈ ಹೊಸ ನಿಯಮವು ಮುಖ್ಯವಾಗಿ ಮೆಕ್ಸಿಕೋದೊಂದಿಗೆ ವ್ಯ
ನ್ಯೂಜಿಲೆಂಡ್ ತನ್ನ ಅತಿಸೂಕ್ಷ್ಮ ಹಾಗೂ ಅಪರೂಪದ ಜೀವವೈವಿಧ್ಯವನ್ನು ರಕ್ಷಿಸಲು 2050ರೊಳಗೆ ದೇಶದಾದ್ಯಂತ ಕಾಡು ಬೆಕ್ಕುಗಳನ್ನು (Feral Cats) ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ರಾಷ್ಟ್ರೀಯ ಯೋಜನೆಗೆ ಕೈ ಹಾಕಿದೆ. ಸಂರಕ್ಷಣಾ ಸಚಿವ ತಮಾ ಪೊಟಾಕಾ ಅವರು ಕಾಡು ಬೆಕ್ಕುಗಳನ್ನು “stone cold killers” ಎಂದು ವರ್ಣಿಸಿದ್ದು, ಅವುಗಳನ್ನು ಅಧಿಕೃತವಾಗಿ Predator Free 2050 ಯೋಜನೆಯ ಪಟ್ಟಿಗೆ ಸೇರಿಸುವುದಾಗಿ ಘೋಷಿಸಿದ್ದಾರೆ. 2016ರಲ್ಲಿ ಪ್ರಾರಂಭವಾದ ಈ ಯೋಜನೆ ದೇಶದ ಸ್ಥಳೀಯ ಪಕ್ಷಿಗಳು, ಬಾವಲುಗಳು, ಹಲ್ಲಿಗಳು, ಕೀಟಗಳು ಮತ್ತು ಇನ್ನಿತರ ಅಪರೂಪದ ಜೀವಿಗಳಿಗೆ ಅಪಾಯಕಾರಿಯಾಗಿದೆ ಎಂದು ಗುರುತಿಸಲ
"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.