top of page
News Articles
Sathyapatha News Plus


ಇಂದಿನಿಂದ ವಿಧಾನಸಭೆ ವಿಶೇಷ ಅಧಿವೇಶನ
ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿರುವುದರ ವಿರುದ್ಧ ನಿರ್ಣಯ ಕೈಗೊಳ್ಳಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಇದೀಗ ರಾಜ್ಯಪಾಲರು ನಿರಾಕರಿಸಿದ್ದಾರೆ. ಹೀಗಾಗಿ ಅಧಿವೇಶನಕ್ಕೆ ಗೈರಾಗುತ್ತಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಒಂದು ವೇಳೆ ಗೈರಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರ ಸಿದ್ಧತೆ ಮಾಡಿದೆ.ಅಧಿವೇಶನಕ್ಕೆ ಹಾಜರಾಗಿಯೇ ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಎಂಬ ಪ್ರಶ್ನೆಮೂಡಿದೆ.
13 hours ago1 min read


ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲು
ಪುತ್ತೂರು: ಖಾಸಗಿ ಕಾಲೇಜೊಂದರಲ್ಲಿ ಕೋಮು ಭಾವನೆ ಕೆರಳಿಸುವ ಹಾಗೂ ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿದ ಆರೋಪದಡಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಕಾರ್ಯಕ್ರಮ ಆಯೋಜಕರು ಮತ್ತು ಯುಟ್ಯೂಬ್ ಚಾನೆಲ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮಚಂದ್ರ ಕೆ. ನೀಡಿದ ದೂರಿನನ್ವಯ ಪೊಲೀಸರು ಬಿಎನ್ಎಸ್ ವಿವಿಧ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
13 hours ago1 min read


ಸಮವಸ್ತ್ರದ ಘನತೆ ಮರೆತ ಉನ್ನತ ಪೊಲೀಸ್ ಅಧಿಕಾರಿ: ಕಚೇರಿಯಲ್ಲೇ 'ಕಾಮಕಾಂಡ', ಸರ್ಕಾರಕ್ಕೆ ಭಾರೀ ಮುಜುಗರ
ಕರ್ನಾಟಕ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಅಸಭ್ಯ ವರ್ತನೆಯ ವಿಡಿಯೋಗಳು ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿವೆ. ಡಿಜಿಪಿ ಶ್ರೇಣಿಯ ಐಜಿಪಿ ಅಧಿಕಾರಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿರುವಾಗಲೇ ಮಹಿಳೆಯರೊಂದಿಗೆ ಸರಸವಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಚೇರಿಗೆ ಕೆಲಸದ ನಿಮಿತ್ತ ಬರುವ ಮಹಿಳೆಯರ ಜೊತೆಗೂ ಇವರು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಸರಣಿ ವಿಡಿಯೋಗಳು ಹೊರಬರುತ್ತಿರುವುದು ಇಡೀ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ. ಈ ಕೃತ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ
3 days ago1 min read


ಚಾರ್ಮಾಡಿ ಘಾಟಿಯ ಮಲಯ ಮಾರುತ ಅರಣ್ಯದಲ್ಲಿ ಭೀಕರ ಕಾಡ್ಗಿಚ್ಚು: ವನ್ಯಸಂಪತ್ತು ಭಸ್ಮ!
ಮೂಡಿಗೆರೆ: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಚಾರ್ಮಾಡಿ ಘಾಟ್ ವ್ಯಾಪ್ತಿಯ ಮಲಯ ಮಾರುತ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಹಸಿರು ಸಿರಿ ನಾಶವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 2 ಕಿಲೋಮೀಟರ್ ದೂರದ ಅರಣ್ಯದ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಕ್ಷಣಕ್ಕೂ ಭೀಕರವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ಮಲೆನಾಡಿನ ಜೀವವೈವಿಧ್ಯಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಬೆಂಕಿಯ ಕೆನ್ನಾಲಗೆ ದಟ್ಟವಾಗಿ ಆವರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸ
3 days ago1 min read


ಕರ್ನಾಟಕದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮತ್ತೆ ಮೊಳಗಲಿದೆ ವಿದ್ಯಾರ್ಥಿ ಚುನಾವಣೆಯ ರಣಕಹಳೆ!
ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮತ್ತೆ ಆರಂಭಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಸರ್ಕಾರ, ಮೊದಲ ಹಂತದ ಉನ್ನತ ಮಟ್ಟದ ಸಭೆಯನ್ನು ಪೂರ್ಣಗೊಳಿಸಿದೆ. ಉನ್ನತ ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಚುನಾವಣೆ ನಡೆಸುವ ಪ್ರಸ್ತಾವನೆಗೆ ಈಗಾಗಲೇ ಪ್ರಾಥಮಿಕ ಹಸಿರು ನಿಶಾನೆ ತೋರಿಸಿವೆ. ಇದರಿಂದಾಗಿ ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ಯಾಂಪಸ್ ರಾಜಕೀಯಕ್ಕೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ದಟ್ಟವಾಗಿದೆ. ವಿದ್ಯಾರ್ಥಿ ಚುನಾವಣೆಗಳನ್ನು ನಡೆಸುವ ಸಾಧಕ-ಬಾಧಕಗಳನ್
5 days ago1 min read


ಬೀದಿನಾಯಿ ದಾಳಿಗೆ ಬಲಿಯಾದ 10 ವರ್ಷದ ಬಾಲಕಿ: ಚಿಕಿತ್ಸೆ ಫಲಿಸದೇ ಹುಬ್ಬಳ್ಳಿ ಕಿಮ್ಸ್ನಲ್ಲಿ ಸಾವು
ಬಾಗಲಕೋಟೆ: ಜಿಲ್ಲೆಯ ನವನಗರದಲ್ಲಿ ಬೀದಿನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ಅಲೈನಾ ಲೋಕಾಪುರ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಕಳೆದ ಕೆಲವು ದಿನಗಳಿಂದ ಸಾವಿನೊಂದಿಗೆ ಹೋರಾಡುತ್ತಿದ್ದ ಬಾಲಕಿ, ಅಂತಿಮವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಘಟನೆಯಿಂದ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರಲ್ಲಿ ಶೋಕ ಮಡುಗಟ್ಟಿದೆ. ಕಳೆದ ಡಿಸೆಂಬರ್ 27 ರಂದು ನವನಗರದ ಸೆಕ್ಟರ್ ನಂಬರ್ 15 ರಲ್ಲಿ ಅಲೈನಾ ಮೇಲೆ ಬೀದಿನಾಯಿಗಳು ಭೀಕರವಾಗಿ ದಾಳಿ ನಡೆಸಿದ್ದವು. ಈ ವೇಳೆ ನಾಯಿಗಳು ಬಾಲಕಿಯ ಕಣ್ಣು
Jan 151 min read


ಜ.22ರಿಂದ ವಿಧಾನಮಂಡಲ ಜಂಟಿ ಅಧಿವೇಶನ: 'ವಿಬಿ-ಜಿ ರಾಮ್ ಜಿ' ಕಾಯ್ದೆ ವಿರುದ್ಧ ಗುಡುಗಲು ರಾಜ್ಯ ಸರ್ಕಾರ ಸನ್ನದ್ಧ
ಬೆಂಗಳೂರು: ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ರದ್ದತಿ ಮತ್ತು ಅದರ ಬದಲಿಗೆ ಜಾರಿಗೆ ತಂದಿರುವ 'ವಿಕಸಿತ ಭಾರತ್ ಜಿರಾಮಜಿ' (VB-G RAM G) ಕಾಯ್ದೆಯನ್ನು ವಿರೋಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜನವರಿ 22ರಿಂದ 31ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲು ಬುಧವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಧಿವೇಶನದ ಮೊದಲ ದಿನ ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ರಜಾ ದಿನಗಳನ್ನು ಹೊರತುಪಡಿಸಿ ಅಧಿವೇಶನದ ಒಟ್ಟು ದಿನಗಳ ಬಗ್ಗೆ ಸ್ಪೀಕರ್ ಅಂತಿಮ ನಿರ್ಧಾರ ತೆಗೆ
Jan 151 min read


ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ ಸಾಧ್ಯತೆ: ಸಿಎಂ ಸಿದ್ದರಾಮಯ್ಯ ಅವರಿಂದ 17ನೇ ದಾಖಲೆಯ ಬಜೆಟ್
ಬೆಂಗಳೂರು: ಕರ್ನಾಟಕ ರಾಜ್ಯದ 2025-26ನೇ ಸಾಲಿನ ಆಯವ್ಯಯ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗುತ್ತಿದ್ದಾರೆ. ಆಪ್ತ ಮೂಲಗಳ ಮಾಹಿತಿ ಪ್ರಕಾರ, ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಈ ಕುರಿತು ಈಗಾಗಲೇ ಅವರು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಫೆಬ್ರವರಿ ತಿಂಗಳಿನಿಂದ ಇಲಾಖಾವಾರು ಪೂರ್ವಭಾವಿ ಸಭೆಗಳನ್ನು ನಡೆಸಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 5ರಿಂದ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗುವ ಸಾಧ್ಯತೆಯಿದ್ದು, ಅಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿ
Jan 121 min read


ಪ್ರೀತಿ ಹೆಸರಲ್ಲಿ ಜೆಡಿಎಸ್ ಮುಖಂಡೆ ಪುತ್ರನ ಕಿರುಕುಳ: ಯುವತಿ ಆತ್ಮಹತ್ಯೆ
ಕಾರವಾರ: ಪ್ರೀತಿಯ ಹೆಸರಿನಲ್ಲಿ ಜೆಡಿಎಸ್ ಮುಖಂಡೆಯೋರ್ವರ ಪುತ್ರ ನೀಡಿದ ಮಾನಸಿಕ ಕಿರುಕುಳ ತಾಳಲಾರದೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕದ್ರಾ ಕೆಪಿಸಿ ಕಾಲೋನಿಯ ನಿವಾಸಿಯಾದ 20 ವರ್ಷದ ರಿಶೇಲ್ ಡಿಸೋಜಾ ಮೃತಪಟ್ಟ ದುರ್ದೈವಿ. ಜೆಡಿಎಸ್ ಮುಖಂಡೆಯ ಪುತ್ರ ಚಿರಾಗ್ ಎಂಬಾತನೇ ಈಕೆಗೆ ಸಾವಿನ ದಾರಿ ತೋರಿಸಿದ ಆರೋಪಿ ಎಂದು ಹೇಳಲಾಗುತ್ತಿದೆ. ಮೃತ ಯುವತಿಯ ತಂದೆ ಕ್ರಿಸ್ತೋದ್ ಡಿಸೋಜಾ ಅವರು ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚಿರಾಗ್ ಮತ್ತು ರಿಶೇಲ್ ಪರಿಚಯಸ್ಥರಾಗಿದ್ದರು ಎಂದು ತಿಳಿಸಿದ್ದಾರೆ. ಚಿರಾಗ್ ಪದೇ ಪದೇ ಮನ
Jan 111 min read


ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ; ಮಹದೇವಪುರದಲ್ಲಿ ನಡು ರಸ್ತೆಯಲ್ಲಿ ಗಲಾಟೆ
ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ಗೆ ಬೈಕ್ ಸವಾರರು ಥಳಿಸಿರುವ ಘಟನೆ ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡೆಲಿವರಿ ಬಾಯ್ ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಸವಾರರು ಡೆಲಿವರಿ ಬಾಯ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಯುತ್ತಿದ್ದುದನ್ನು ಕಂಡ ಸ್ಥಳೀಯರು ಡೆಲಿವರಿ ಬಾಯ್ ಸಹಾಯಕ್ಕೆ ಧಾವಿಸಿದ್ದು, ಸಮಾಧಾನಪಡಿಸಲು ಪ್ರಯತ್ನಿಸಿದರೂ ಸವಾರರು ಶಾಂತಗೊಳ್ಳದ ಹಿನ್ನೆಲೆ ಸ್ಥಳೀಯರು ಬೈಕ್ ಸವಾರರಿಗೆ ಧರ್ಮದೇಟು ನೀಡಿದ್ದಾರೆ. ಸ್ಥಳೀಯರ ಗೂಸಾ ಬೀಳುತ್ತಿದ್ದಂತೆಯೇ ಬೈಕ್ ಸ
Jan 91 min read


ಆಭರಣ ಅಂಗಡಿಗಳಲ್ಲಿ ಬುರ್ಖಾ, ಹೆಲ್ಮೆಟ್ ಧರಿಸಿದವರಿಗೆ ಪ್ರವೇಶ ನಿರಾಕರಣೆ: ಬಿಹಾರದ ಜುವೆಲ್ಲರ್ಸ್ ಸಂಘದ ಹೊಸ ನಿಯಮ
ಪಾಟ್ನಾ: ಇತ್ತೀಚಿನ ದಿನಗಳಲ್ಲಿ ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಿಹಾರದಾದ್ಯಂತ ಇರುವ ಜುವೆಲ್ಲರಿ ಮಳಿಗೆಗಳಲ್ಲಿ ಮುಖ ಮುಚ್ಚುವ ಯಾವುದೇ ರೀತಿಯ ವಸ್ತ್ರ ಅಥವಾ ಸಾಧನಗಳನ್ನು ಧರಿಸಿದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಜನವರಿ 8ರಿಂದ ಜಾರಿಗೆ ಬಂದಿರುವ ಈ ಹೊಸ ನಿಯಮದ ಅನ್ವಯ, ಗ್ರಾಹಕರು ಹಿಜಾಬ್, ನಿಖಾಬ್, ಬುರ್ಖಾ, ಮಾಸ್ಕ್ ಅಥವಾ ಹೆಲ್ಮೆಟ್ ಧರಿಸಿ ಅಂಗಡಿಯೊಳಗೆ ಬರುವಂತಿಲ್ಲ. ಅಖಿಲ ಭಾರತ ಜುವೆಲ್ಲರ್ಸ್ ಮತ್ತು ಗೋಲ್ಡ್ ಫೆಡರೇಷನ್ ನೀಡಿದ ನಿರ್ದೇಶನದ ಮೇರೆಗೆ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ. ದರೋಡೆಕೋರರು ಗ್ರಾಹಕರ ಸೋಗಿನಲ
Jan 91 min read


ಗೃಹಲಕ್ಷ್ಮಿ ಯೋಜನೆ: ಬಾಕಿ ಇರುವ ಎರಡು ತಿಂಗಳ ಹಣ ಶೀಘ್ರವೇ ಜಮಾ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
ಬೆಂಗಳೂರು: ರಾಜ್ಯದ ಮಹಿಳೆಯರ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಹಣಕಾಸು ಇಲಾಖೆಯಿಂದ ಅನುಮತಿ ಸಿಕ್ಕ ತಕ್ಷಣವೇ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಬಿಡುಗಡೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಅನರ್ಹ ಪಡಿತರ ಚೀಟಿಗಳ ರದ್ದತಿಯಿಂದಾಗಿ ಕೆಲವು ಫಲಾನುಭವಿಗಳಿಗೆ ಹಣ ಸಂದಾಯವಾಗುವುದು ವಿಳಂಬವಾಗಿದೆ. ಆಹಾರ ಇಲಾಖೆಯಿಂದ ಪರಿಷ
Jan 91 min read


ಗಾಂಜಾ ಮತ್ತಿನಲ್ಲಿ ಕೈ ಕತ್ತರಿಸಿದರೂ ಅರಿವೇ ಇಲ್ಲ! ದೇವನಹಳ್ಳಿಯಲ್ಲಿ ಮಾದಕ ವ್ಯಸನದ ಭೀಕರ ಮುಖ ಬಯಲು
ದೇವನಹಳ್ಳಿ | ಬೆಂಗಳೂರು ಗ್ರಾಮಾಂತರ: ಮಾದಕ ವ್ಯಸನ ಮಾನವನ ವಿವೇಚನೆ, ನೋವಿನ ಅರಿವು ಮತ್ತು ಬದುಕಿನ ಮೂಲಭೂತ ಪ್ರವೃತ್ತಿಗಳನ್ನೇ ಹೇಗೆ ನಾಶಮಾಡಬಲ್ಲದು ಎಂಬುದಕ್ಕೆ ದೇವನಹಳ್ಳಿಯಲ್ಲಿ ನಡೆದ ಘಟನೆ ಕಠೋರ ಉದಾಹರಣೆಯಾಗಿದೆ. ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನ ಎಡಗೈ ರೈಲು ಹರಿದು ಸಂಪೂರ್ಣವಾಗಿ ಕತ್ತರಿಸಿದರೂ, ಆತನಿಗೆ ನೋವಿನ ಅರಿವೇ ಇರಲಿಲ್ಲ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಉತ್ತರ ಭಾರತ ಮೂಲದ ದಿಲೀಪ್ ಎಂಬ ವ್ಯಕ್ತಿ ದೇವನಹಳ್ಳಿಯ ರೈಲ್ವೆ ಹಳಿಯ ಮೇಲೆ ಮಲಗಿದ್ದ ವೇಳೆ, ಹಾದು ಹೋಗುತ್ತಿದ್ದ ರೈಲು ಆತನ ಎಡಗೈ ಮೇಲೆ ಹರಿದಿದೆ. ಪರಿಣಾಮ, ಕೈ ಸಂಪೂರ್ಣವಾಗಿ ತುಂಡಾಗಿದೆ. ಆದರೆ ಗಾಂ
Jan 81 min read


ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿಯ ಮೊದಲ ಹಂತ ಆರಂಭ; ದೇಶದಲ್ಲಿ ಮೊದಲ ಬಾರಿಗೆ ನಡೆಯಲಿದೆ ಡಿಜಿಟಲ್ ಗಣತಿ
ಭಾರತದ ಬಹುನಿರೀಕ್ಷಿತ 2027ರ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದ್ದು, ಏಪ್ರಿಲ್ 1, 2026 ರಿಂದ ಸೆಪ್ಟೆಂಬರ್ 30, 2026 ರ ನಡುವೆ ಮೊದಲ ಹಂತದ 'ಮನೆ ಪಟ್ಟಿ' (House Listing) ಅಭಿಯಾನ ನಡೆಯಲಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಗದಿಪಡಿಸಿದ 30 ದಿನಗಳ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ಹಂತದಲ್ಲಿ ಪ್ರಮುಖವಾಗಿ ಮನೆಗಳು ಮತ್ತು ಲಭ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ವಿವರಗಳನ್ನು ದಾಖಲಿಸಲಾಗುತ್
Jan 81 min read


ಬಸ್ ನಿಲ್ಲಿಸದ ವಿಚಾರಕ್ಕೆ ಗಲಾಟೆ: ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ — ಇಬ್ಬರ ಬಂಧನ
ಬಸ್ ನಿಲ್ಲಿಸದಿದ್ದಕ್ಕೆ ಸಿಟ್ಟುಗೊಂಡ ಗ್ರಾಮಸ್ಥರು ಬಸ್ನ್ನು ಅಡ್ಡಗಟ್ಟಿ ಗಲಾಟೆ ನಡೆಸಿ, ಕರ್ತವ್ಯದಲ್ಲಿದ್ದ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಶಾಲಾ ಮಕ್ಕಳು ಬಸ್ಗಾಗಿ ಕಾಯುತ್ತಿದ್ದರು. ಆದರೆ ಬಸ್ ನಿಲ್ಲಿಸದೇ ಮುಂದೆ ಸಾಗಿದ ಕಾರಣ, ಮಕ್ಕಳಿಗೆ ಪರೀಕ್ಷೆ ತಪ್ಪುತ್ತದೆ ಎಂಬ ಆತಂಕದಲ್ಲಿ ಬಾಲಕಿಯ ಪೋಷಕರು ಬೈಕ್ನಲ್ಲಿ ಬಸ್ನ್ನು ಬೆನ್ನಟ್ಟಿ ಟೋಲ್ ನಾಕಾ ಬಳಿ ಅಡ್ಡಗಟ್ಟಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಬಸ್ ಹತ್ತಲು ಮುಂದಾದಾಗ, ಪರಿಶೀಲನೆ ವೇಳೆ ಸಮಸ್ಯೆಯಾಗಬಹುದು ಎಂಬ ಕಾರಣ ನೀಡಿ ಕಂಡಕ್ಟರ್ ನೇತ್ರಾವತಿ
Jan 71 min read


ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ 'ಮುಟ್ಟಿನ ಕಪ್' ವಿತರಣೆ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು: ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದ 'ಮುಟ್ಟಿನ ಕಪ್' ವಿತರಣಾ ಯೋಜನೆಯು ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈಗ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಅಧಿಕೃತವಾಗಿ ನಿರ್ಧರಿಸಿದೆ. ಈ ಹೊಸ ಕ್ರಮವು ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ಪರಿಸರ ಸ್ನೇಹಿ ನೈರ್ಮಲ್ಯ ವ್ಯವಸ್ಥೆಯನ್ನು ಉತ
Jan 71 min read


ಹೊಸಕೋಟೆ: ಚೀಟಿ ವಿವಾದ – ಸಹೋದರನ ಮನೆಗೆ ಬೆಂಕಿ ಹಚ್ಚಲು ಹೋಗಿ ತಾನೇ ಸುಟ್ಟ ಆರೋಪಿ
ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೋರ್ವ, ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಸಹೋದರನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ವೇಳೆ ತಾನೇ ಗಂಭೀರವಾಗಿ ಸುಟ್ಟುಕೊಂಡ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಮುನಿರಾಜು ಎಂದು ಗುರುತಿಸಲಾಗಿದ್ದು, ಆತ ಸಹೋದರ ರಾಮಕೃಷ್ಣನ ಮನೆಯನ್ನೇ ಸುಡಲು ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಬೆಂಕಿ ಹಚ್ಚುವ ವೇಳೆ ಕೈಯಲ್ಲಿದ್ದ ಪೆಟ್ರೋಲ್ ಡಬ್ಬದಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡು ಮುನಿರಾಜುವೇ ಸುಟ್ಟುಕೊಂಡಿದ್ದಾನೆ. “ಕಾಪಾಡಿ, ಕಾಪಾಡಿ” ಎಂದು ಕಿರುಚಿದ ಶಬ್ದ
Jan 71 min read


ಕೆಎಸ್ಆರ್ಟಿಸಿ ಪ್ರೀಮಿಯಂ ಬಸ್ ಟಿಕೆಟ್ ದರ ಕಡಿತ
ಪ್ರಯಾಣಿಕರಿಗೆ ಸಂತೋಷದ ಸುದ್ದಿ: ಆಯ್ದ ಪ್ರೀಮಿಯಂ ಬಸ್ಗಳಿಗೆ 5–15% ಟಿಕೆಟ್ ದರ ಇಳಿಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೆಂಗಳೂರು ಕೇಂದ್ರವಾಗಿಸಿಕೊಂಡು ಸಂಚರಿಸುವ ಆಯ್ದ ಪ್ರೀಮಿಯಂ ಬಸ್ ಸೇವೆಗಳ ಟಿಕೆಟ್ ದರವನ್ನು ಇಳಿಕೆ ಮಾಡಿದೆ. ಜನವರಿ 5, 2026ರಿಂದಲೇ ಈ ದರ ಕಡಿತ ಜಾರಿಯಾಗಿದ್ದು, ಪ್ರಯಾಣಿಕರಿಗೆ 5ರಿಂದ 15 ಶೇಕಡಾವರೆಗೆ ರಿಯಾಯಿತಿ ಲಭ್ಯವಾಗುತ್ತಿದೆ. ಈ ರಿಯಾಯಿತಿ ಕ್ರಮವು ಜನಪ್ರಿಯ ಅಂತರ್ಜಿಲ್ಲಾ ಹಾಗೂ ಅಂತರ್ರಾಜ್ಯ ಮಾರ್ಗಗಳಲ್ಲಿನ ಆಯ್ದ ಪ್ರೀಮಿಯಂ ಸೇವೆಗಳಿಗೆ ಅನ್ವಯವಾಗುತ್ತದೆ. ಏರ್ಕಂಡಿಷನ್ಡ್ ವೋಲ್ವೋ, ಮಲ್ಟಿ-ಆಕ್ಸಲ್, ಸ್ಲೀಪರ್ ಸೇರಿದಂತೆ ಕೆ
Jan 61 min read
Archive
bottom of page

