ಪ್ರೀತಿ ಹೆಸರಲ್ಲಿ ಜೆಡಿಎಸ್ ಮುಖಂಡೆ ಪುತ್ರನ ಕಿರುಕುಳ: ಯುವತಿ ಆತ್ಮಹತ್ಯೆ
- sathyapathanewsplu
- Jan 11
- 1 min read

ಕಾರವಾರ: ಪ್ರೀತಿಯ ಹೆಸರಿನಲ್ಲಿ ಜೆಡಿಎಸ್ ಮುಖಂಡೆಯೋರ್ವರ ಪುತ್ರ ನೀಡಿದ ಮಾನಸಿಕ ಕಿರುಕುಳ ತಾಳಲಾರದೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕದ್ರಾ ಕೆಪಿಸಿ ಕಾಲೋನಿಯ ನಿವಾಸಿಯಾದ 20 ವರ್ಷದ ರಿಶೇಲ್ ಡಿಸೋಜಾ ಮೃತಪಟ್ಟ ದುರ್ದೈವಿ. ಜೆಡಿಎಸ್ ಮುಖಂಡೆಯ ಪುತ್ರ ಚಿರಾಗ್ ಎಂಬಾತನೇ ಈಕೆಗೆ ಸಾವಿನ ದಾರಿ ತೋರಿಸಿದ ಆರೋಪಿ ಎಂದು ಹೇಳಲಾಗುತ್ತಿದೆ.
ಮೃತ ಯುವತಿಯ ತಂದೆ ಕ್ರಿಸ್ತೋದ್ ಡಿಸೋಜಾ ಅವರು ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚಿರಾಗ್ ಮತ್ತು ರಿಶೇಲ್ ಪರಿಚಯಸ್ಥರಾಗಿದ್ದರು ಎಂದು ತಿಳಿಸಿದ್ದಾರೆ. ಚಿರಾಗ್ ಪದೇ ಪದೇ ಮನೆಯ ಬಳಿ ಸುಳಿಯುತ್ತಾ ರಿಶೇಲ್ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೆರಳಿದ ಚಿರಾಗ್, ಫೋನ್ ಮೂಲಕ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿ ಚಿರಾಗ್ ಕೇವಲ ಬೆದರಿಕೆ ಹಾಕುವುದಲ್ಲದೆ, "ನೀನು ಬದುಕಿದ್ದು ಪ್ರಯೋಜನವಿಲ್ಲ, ನೀನು ಸತ್ತು ಹೋದರೆ ಒಳ್ಳೆಯದು" ಎಂದು ಅತ್ಯಂತ ಕ್ರೂರವಾಗಿ ನಿಂದಿಸಿದ್ದ ಎನ್ನಲಾಗಿದೆ. ಈ ನಿಂದನೆ ಮತ್ತು ಕಿರುಕುಳದಿಂದ ಮನನೊಂದ ರಿಶೇಲ್, ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಕದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.





Comments