top of page
News Articles
Sathyapatha News Plus


ಪ್ರಧಾನಿ ನರೇಂದ್ರ ಮೋದಿಯವರಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಗೌರವ ಸಮರ್ಪಣೆ
ಮೂರು ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾ ಸರ್ಕಾರವು ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಪ್ರಧಾನಿ ಮೋದಿಯವರಿಗೆ ಈ ಪದಕವನ್ನು ಪ್ರದಾನ ಮಾಡಿದರು. ಭಾರತ ಮತ್ತು ಇಥಿಯೋಪಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮೋದಿಯವರ ಶ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾ
2 days ago1 min read


ಮೆಕ್ಸಿಕೋದಿಂದ ಭಾರತದ ಉತ್ಪನ್ನಗಳಿಗೆ ಶೇ. 50ರಷ್ಟು ಸುಂಕ
ಅಮೆರಿಕಾದ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಕೂಡ ಏಷ್ಯಾದ ದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಅವರು ಸ್ಥಳೀಯ ಉದ್ಯಮಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. 2026ರ ಜನವರಿಯಿಂದ ಜಾರಿಗೆ ಬರಲಿರುವ ಈ ಸುಂಕ ವಿಧಿಸುವ ಮಸೂದೆಗೆ ಮೆಕ್ಸಿಕನ್ ಸೆನೆಟ್ (ಮೇಲ್ಮನೆ) ಅಂತಿಮ ಅನುಮೋದನೆ ನೀಡಿದೆ. ಈ ನಿರ್ಣಯದ ಪರವಾಗಿ 76 ಮತ್ತು ವಿರುದ್ಧವಾಗಿ ಕೇವಲ 5 ಸದಸ್ಯರು ಮತ ಚಲಾಯಿಸಿದ್ದು, ಮಸೂದೆಗೆ ಸುಲಭವಾಗಿ ಅಂಗೀಕಾರ ದೊರೆತಿದೆ. ಈ ಹೊಸ ನಿಯಮವು ಮುಖ್ಯವಾಗಿ ಮೆಕ್ಸಿಕೋದೊಂದಿಗೆ ವ್ಯ
Dec 111 min read


ಜೀವವೈವಿಧ್ಯ ರಕ್ಷಣೆಗಾಗಿ ನ್ಯೂಜಿಲೆಂಡ್ ಕಾಡು ಬೆಕ್ಕುಗಳ ನಿರ್ಮೂಲನೆಗೆ ಕಠಿಣ ಕ್ರಮ
ನ್ಯೂಜಿಲೆಂಡ್ ತನ್ನ ಅತಿಸೂಕ್ಷ್ಮ ಹಾಗೂ ಅಪರೂಪದ ಜೀವವೈವಿಧ್ಯವನ್ನು ರಕ್ಷಿಸಲು 2050ರೊಳಗೆ ದೇಶದಾದ್ಯಂತ ಕಾಡು ಬೆಕ್ಕುಗಳನ್ನು (Feral Cats) ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ರಾಷ್ಟ್ರೀಯ ಯೋಜನೆಗೆ ಕೈ ಹಾಕಿದೆ. ಸಂರಕ್ಷಣಾ ಸಚಿವ ತಮಾ ಪೊಟಾಕಾ ಅವರು ಕಾಡು ಬೆಕ್ಕುಗಳನ್ನು “stone cold killers” ಎಂದು ವರ್ಣಿಸಿದ್ದು, ಅವುಗಳನ್ನು ಅಧಿಕೃತವಾಗಿ Predator Free 2050 ಯೋಜನೆಯ ಪಟ್ಟಿಗೆ ಸೇರಿಸುವುದಾಗಿ ಘೋಷಿಸಿದ್ದಾರೆ. 2016ರಲ್ಲಿ ಪ್ರಾರಂಭವಾದ ಈ ಯೋಜನೆ ದೇಶದ ಸ್ಥಳೀಯ ಪಕ್ಷಿಗಳು, ಬಾವಲುಗಳು, ಹಲ್ಲಿಗಳು, ಕೀಟಗಳು ಮತ್ತು ಇನ್ನಿತರ ಅಪರೂಪದ ಜೀವಿಗಳಿಗೆ ಅಪಾಯಕಾರಿಯಾಗಿದೆ ಎಂದು ಗುರುತಿಸಲ
Dec 101 min read


ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ, 23 ಮಂದಿಗೆ ಗಾಯ
ಜಪಾನ್: ಉತ್ತರ ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ನೆಲಸಮಗೊಂಡಿವೆ. ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಅಲೆಗಳು ಎದ್ದಿವೆ. ಅಮೋರಿ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಪೆಸಿಫಿಕ್ ಮಹಾಸಾಗರದಲ್ಲಿ ರಾತ್ರಿ 11.15 ಕ್ಕೆ ಭೂಕಂಪ ಸಂಭವಿಸಿದೆ. ಹಲವು ವಿಡಿಯೋಗಳು ವೈರಲ್ ಆಗಿವೆ.ಹಚಿನೋಹೆಯ ಹೋಟೆಲ್ನಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಇವಾಟೆ ಪ್ರಿಫೆಕ್ಚರ್ನ ಕುಜಿ ಬಂದರಿನಲ್ಲಿ 70 ಸೆಂ.ಮೀ.ವರೆಗಿನ ಸುನಾಮಿ ಅಲೆಗಳು ಎದ್ದಿವೆ.ಮುನ್ನೆಚ್ಚರಿಕೆಯಾಗಿ ದುರ್ಬಲ ಪ್ರದೇಶಗಳಲ್ಲಿರುವ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂ
Dec 91 min read


ಶ್ರೀಲಂಕಾದಲ್ಲಿ 'ದಿತ್ವಾ' ಚಂಡಮಾರುತಕ್ಕೆ 123 ಬಲಿ: ಭಾರತದಿಂದ ನೆರವಿನ ಹಸ್ತ!
ಭಾರಿ ಅವಾಂತರ ಸೃಷ್ಟಿಸಿರುವ 'ದಿತ್ವಾ' ಚಂಡಮಾರುತವು ಶ್ರೀಲಂಕಾದ ಕರಾವಳಿಗೆ ಅಪ್ಪಳಿಸಿ ದ್ವೀಪರಾಷ್ಟ್ರವನ್ನು ತತ್ತರಿಸುವಂತೆ ಮಾಡಿದೆ. ಸತತ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಇದುವರೆಗೆ 123 ಜನರು ಪ್ರಾಣ ಕಳೆದುಕೊಂಡಿದ್ದು, 130ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ತಿಳಿಸಿದೆ. ಪ್ರವಾಹ ಸಂತ್ರಸ್ತರಾಗಿರುವ ಸುಮಾರು 43,995 ಜನರನ್ನು ಸರ್ಕಾರಿ ಸ್ವಾಮ್ಯದ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಕೊಲಂಬೊ ಸೇರಿದಂತೆ ಹಲವು ಪ್ರಮುಖ ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು,
Dec 21 min read


ಶ್ವೇತಭವನದ ಗುಂಡಿನ ದಾಳಿ ಬೆನ್ನಲ್ಲೇ: 3ನೇ ಜಗತ್ತಿನ ದೇಶಗಳಿಂದ ವಲಸೆ ಶಾಶ್ವತ ಸ್ಥಗಿತಕ್ಕೆ ಟ್ರಂಪ್ ಘೋಷಣೆ
ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿಯ ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 3ನೇ ಜಗತ್ತಿನ ದೇಶಗಳಿಂದ ಅಮೆರಿಕಕ್ಕೆ ಶಾಶ್ವತವಾಗಿ ವಲಸೆ ನಿಲ್ಲಿಸುವ ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ. ಭದ್ರತಾ ಕಾಳಜಿಗಳನ್ನು ಮುಂದಿಟ್ಟುಕೊಂಡು, ಶ್ವೇತಭವನದ ಘಟನೆಯ ನಂತರ ವಲಸೆ ನೀತಿಯ ವಿರುದ್ಧ ವ್ಯಾಪಕ ಮತ್ತು ತೀವ್ರ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅಮೆರಿಕದ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಈ ನಿರ್ಧಾರ ಅತ್ಯಗತ್ಯ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ದೇಶದ ತಾಂತ್ರಿಕ ಪ್ರಗತಿ ಮತ್ತು ಜನರ ಜೀವನ ಪರಿಸ್ಥಿತಿಗಳ
Nov 291 min read
Archive
bottom of page


