;
top of page

ಯೆಮೆನ್ ಮುಕಲ್ಲಾ ಬಂದರಿನ ಮೇಲೆ ಸೌದಿ ವಾಯುದಾಳಿ: ಯುಎಇಗೆ ಕಠಿಣ ಎಚ್ಚರಿಕೆ

  • Writer: sathyapathanewsplu
    sathyapathanewsplu
  • Dec 30, 2025
  • 1 min read

ಯೆಮೆನ್‌ನ ಪ್ರಮುಖ ಬಂದರು ನಗರವಾದ ಮುಕಲ್ಲಾ ಮೇಲೆ ಸೌದಿ ಅರೇಬಿಯಾ ಇಂದು ಭಾರೀ ಏರ್‌ಸ್ಟ್ರೈಕ್ ನಡೆಸಿದೆ. ಯೆಮೆನ್‌ನ ಪ್ರತ್ಯೇಕವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸೌದಿ ಅರೇಬಿಯಾ ಕಠಿಣ ಎಚ್ಚರಿಕೆ ನೀಡಿದೆ.

ವಾಯುದಾಳಿಯ ನಂತರ ಯೆಮೆನ್ ಅಧ್ಯಕ್ಷೀಯ ಮಂಡಳಿ ಯುಎಇ ಜೊತೆಗಿನ ರಕ್ಷಣಾ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. ಯೆಮೆನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಿಲ್ಲಿಸಬೇಕು ಹಾಗೂ ದೇಶದ ಹೊರಗೆ ಕಾರ್ಯನಿರ್ವಹಿಸುವ ಯಾವುದೇ ಸಂಘಟನೆಗಳಿಗೆ ಮಿಲಿಟರಿ ಮತ್ತು ಲಾಜಿಸ್ಟಿಕ್ ಬೆಂಬಲವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಯೆಮೆನ್‌ನಲ್ಲಿ ದೀರ್ಘಕಾಲದಿಂದ ಆಂತರಿಕ ಸಂಘರ್ಷ ನಡೆಯುತ್ತಿದ್ದು, ವಿವಿಧ ರಾಜಕೀಯ ಮತ್ತು ಸಶಸ್ತ್ರ ಗುಂಪುಗಳು ತಮ್ಮದೇ ಆದ ಪ್ರಭಾವವನ್ನು ಹೊಂದಿವೆ. ಕೆಲ ಪ್ರದೇಶಗಳು ಬಂಡುಕೋರರ ನಿಯಂತ್ರಣದಲ್ಲಿದ್ದರೆ, ಇನ್ನೂ ಕೆಲವು ಭಾಗಗಳು ಸರ್ಕಾರದ ವಶದಲ್ಲಿವೆ.

ಈ ಸಂಘರ್ಷದ ಪ್ರಮುಖ ಘಟಕವಾಗಿರುವ Southern Transitional Council (STC) ಸಂಘಟನೆ 2017ರಲ್ಲಿ ರಚನೆಯಾಗಿದ್ದು, ದಕ್ಷಿಣ ಯೆಮೆನ್‌ನಲ್ಲಿ ಪ್ರಬಲ ಹಿಡಿತ ಹೊಂದಿದೆ. ಈ ಸಂಘಟನೆಗೆ ಯುಎಇ ಸಕ್ರಿಯ ಬೆಂಬಲ ನೀಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇತ್ತೀಚೆಗೆ ಎಸ್‌ಟಿಸಿ ಪಡೆಗಳು ಪೂರ್ವ ಯೆಮೆನ್‌ನ ತೈಲ ಸಂಪನ್ನ ಹದ್ರಾಮೌಟ್ ಮತ್ತು ಅಲ್ ಮಹ್ರಾ ಪ್ರದೇಶಗಳಲ್ಲಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿವೆ.

ಎಸ್‌ಟಿಸಿಗೆ ಬಲ ತುಂಬುವ ಉದ್ದೇಶದಿಂದ ಮುಕಲ್ಲಾ ಬಂದರಿಗೆ ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಯುಎಇ ಕಳುಹಿಸಿಕೊಟ್ಟಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆಯಿಂದ ಕೋಪಗೊಂಡ ಸೌದಿ ಅರೇಬಿಯಾ, ಶಸ್ತ್ರಾಸ್ತ್ರ ಸಂಗ್ರಹಣೆ ನಡೆಯುತ್ತಿದೆ ಎನ್ನಲಾದ ಮುಕಲ್ಲಾ ನಗರದ ಮೇಲೆಯೇ ವಾಯುದಾಳಿ ನಡೆಸಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಈ ಘಟನೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಯೆಮೆನ್ ಸಂಘರ್ಷವು ಅಂತರರಾಷ್ಟ್ರೀಯ ಸ್ವರೂಪ ಪಡೆದುಕೊಳ್ಳುವ ಭೀತಿಯನ್ನು ಹೆಚ್ಚಿಸಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page