top of page
News Articles
Sathyapatha News Plus


ಮಂಗಳೂರು ಜೈಲಿನಲ್ಲಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಹಲ್ಲೆ ಪ್ರಕರಣ : 14 ಮಂದಿ ದೋಷಿಗಳು
ಮಂಗಳೂರು: ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಮೇಲೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲೇ ದಾಳಿ ನಡೆಸಿದ ಪ್ರಕರಣದಲ್ಲಿ 14 ಮಂದಿ ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ದೋಷಿಗಳ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 16ರಂದು ಪ್ರಕಟಿಸಲಾಗುವುದು. 2017ರ ಸೆಪ್ಟೆಂಬರ್ 11ರಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ಮಂಗಳೂರು ಜಿಲ್ಲಾ ಕಾರಾಗೃಹದ ಹೊಸ ಕಟ್ಟಡದ ‘ಬಿ’ ಬ್ಲಾಕ್ನ ವರಾಂಡದಲ್ಲಿ ಈ ದಾಳಿ ನಡೆದಿತ್ತು. ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ಅ
3 days ago1 min read




ಬೆಳ್ತಂಗಡಿಯಲ್ಲಿ ಲೋಕಾಯುಕ್ತ ದಾಳಿ: ಕುವೆಟ್ಟು, ಮಡಂತ್ಯಾರು ಗ್ರಾ.ಪಂ. ಕಚೇರಿಗಳಲ್ಲಿ ಕಡತಗಳ ಪರಿಶೀಲನೆ
ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್ ಕಚೇರಿಗಳ ಮೇಲೆ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಗ್ರಾಮ ಪಂಚಾಯತ್ಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜುನಾಥ್ ಶಂಕರಹಳ್ಳಿ ನೇತೃತ್ವದಲ್ಲಿ ರಾಘವೇಂದ್ರ ಸಾಲಿಗ್ರಾಮ, ಆದರ್ಶ್, ಅರುಣ್ ಕುಮಾರ್, ಸೂರಜ್ ಕಾಪು ಸೇರಿದಂತೆ ಒಟ್ಟು ಎಂಟು ಮಂದಿಯ ತಂಡ ಬೆಳಗ್ಗೆ ಸುಮ
6 days ago1 min read


ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮೂವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ವಿಟ್ಲ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ತ ಅಪ್ರಾಪ್ತ ಬಾಲಕ ನೀಡಿದ ದೂರಿನಂತೆ, 2026ರ ಫೆಬ್ರವರಿಯಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಸೆಪ್ಟೆಂಬರ್ 4, 2026ರಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ
Sep 81 min read


ಬೆಂಗಳೂರು–ಮಂಗಳೂರು ವಂದೇ ಭಾರತ್: ಪುತ್ತೂರಿನಲ್ಲಿ ನಿಲುಗಡೆಗೆ ಡಾ. ಅರುಣಾ ಶ್ಯಾಮ್ ಮನವಿ
ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸಲಿರುವ 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪುತ್ತೂರು ರೈಲು ನಿಲ್ದಾಣದಲ್ಲಿ ನಿಯಮಿತ ನಿಲುಗಡೆ ಕಲ್ಪಿಸುವಂತೆ ಹಿರಿಯ ವಕೀಲರಾದ ಡಾ. ಅರುಣಾ ಶ್ಯಾಮ್. ಎಂ. ಅವರು ರೈಲ್ವೆ ಮಂಡಳಿಗೆ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ಯಶವಂತಪುರ–ಮಂಗಳೂರು ಸೆಂಟ್ರಲ್ ನಡುವೆ ಮತ್ತೊಂದು ಪ್ರಾಯೋಗಿಕ ಸಂಚಾರ ನಿಗದಿಯಾಗಿದ್ದು, ಈ ವೇಳೆಯಲ್ಲೇ ಪುತ್ತೂರಿನಲ್ಲಿ ಪ್ರಾಯೋಗಿಕ ನಿಲುಗಡೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಆಡಳಿತ ಕೇಂದ್ರವಾಗಿದೆ. ಇಲ್ಲಿಂದ ಪ್ರತಿನಿತ್ಯ ಬೆಂ
Sep 71 min read


ಎನ್ಐಟಿ ಸುರತ್ಕಲ್: ಹಣ ದುರುಪಯೋಗ ಆರೋಪ, ಇಬ್ಬರು ಉಪನ್ಯಾಸಕರ ಬಂಧನ
ಮಂಗಳೂರಿನ ಪ್ರತಿಷ್ಠಿತ ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿ) ಇಬ್ಬರು ಬೋಧಕ ಸಿಬ್ಬಂದಿ ವಿರುದ್ಧ ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ ಹಾಗೂ ಭಾರಿ ಪ್ರಮಾಣದ ಹಣ ದುರುಪಯೋಗ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯು ನೀಡಿದ ಅಧಿಕೃತ ದೂರಿನ ಮೇರೆಗೆ ಈ ಸಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಸಂಸ್ಥೆಯು ಕೈಗೊಂಡ ಆಂತರಿಕ ವಿಚಾರಣೆ ಮತ್ತು ಆಡಿಟ್ ವೇಳೆಯಲ್ಲಿ ಆರ್ಥಿಕ ಅಕ್ರಮ ನಡೆದಿರುವುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿತ್ತು. ಆಡಳಿತ ಮಂಡಳಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಾನೂನು ಪ್ರಕಾರ ಸೂಕ್ತ
Sep 51 min read


ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ತಳ್ಳಾಟ, ನಿಂದನೆ: ಪ್ರಕರಣ ದಾಖಲು
ಪುತ್ತೂರು: ಸ್ಪಷ್ಟನೆ ನೀಡಲು ಪ್ರೆಸ್ ಕ್ಲಬ್ಗೆ ಆಗಮಿಸಿದ್ದ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಿಗೆ ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಘಟನೆ ಸೆ. 1ರಂದು ನಡೆದಿದೆ. ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ದೂರು ನೀಡಿದವರಾಗಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಲು ಅವರು ಪತ್ರಿಕಾಗೋಷ್ಠಿಗೆ ಬಂದಿದ್ದಾಗ ಉದಯ ಪಾಟಾಳಿ, ಜುನೈದ್ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ ಸೇರಿದಂತೆ ಹಲವರು ಸೇರಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಪ್ರೆಸ್ ಕ್ಲಬ್ನಿಂದ ಹೊರಬರದಂತೆ ಅಕ್ರಮವಾಗಿ ತಡೆದಿದ್ದಾರೆ ಎಂದೂ ಆರೋಪಿಸಲಾಗಿದೆ. ಈ ಕುರಿತು ಅಬ್ದುಲ್ ಹಕೀಂ ನೀಡಿದ
Sep 31 min read


ದಕ್ಷಿಣ ಕನ್ನಡ: ಸೆಪ್ಟೆಂಬರ್ 1 ರಿಂದ ಆಟೋ ರಿಕ್ಷಾ ಪ್ರಯಾಣ ದರ ಬದಲಾವಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರಗಳನ್ನು ಪರಿಷ್ಕರಿಸಲಾಗಿದ್ದು, ಸೆಪ್ಟೆಂಬರ್ 1ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಉಪ ಆಯುಕ್ತ ದರ್ಶನ್ ಎಚ್ವಿ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (RTA) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ನಿಯಮದಂತೆ, ಮೊದಲ 1.5 ಕಿಲೋಮೀಟರ್ಗೆ ಕನಿಷ್ಠ ದರವನ್ನು ರೂ.40 (ಗರಿಷ್ಠ ಮೂವರು ಪ್ರಯಾಣಿಕರು) ನಿಗದಿಪಡಿಸಲಾಗಿದೆ. ತದನಂತರದ ಪ್ರತಿ ಹೆಚ್ಚುವರಿ ಕಿಲೋಮೀಟರ್ಗೆ ರೂ.20 ಪಾವತಿಸಬೇಕಾಗುತ್ತದೆ. ಇನ್ನು ಕಾಯುವಿಕೆ ಶುಲ್ಕಕ್ಕೆ ಸಂಬಂಧಿಸಿದಂತೆ ಮೊದಲ 10 ನಿಮಿಷ ಉಚಿತವಾಗಿದ್ದು, ನಂತರದ ಪ್ರತಿ
Sep 11 min read


ಕೃಷ್ಣ ಜನ್ಮಾಷ್ಟಮಿ, ತೆನೆ ಹಬ್ಬಕ್ಕೆ ಸ್ಥಳೀಯ ರಜೆ ಘೋಷಿಸಲು ಶಾಸಕ ವೇದವ್ಯಾಸ ಕಾಮತ್ ಮನವಿ
ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಕ್ರೈಸ್ತ ಸಮುದಾಯದ ಮರಿಯ ಜಯಂತಿ (ತೆನೆ ಹಬ್ಬ) ಆಚರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸ್ಥಳೀಯ ರಜೆ ಘೋಷಿಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದೇ ಸೆಪ್ಟೆಂಬರ್ 4 ರಂದು ಕರಾವಳಿ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಹಾಗೂ ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವ
Sep 11 min read


ಸುಳ್ಯದಲ್ಲಿ ಧರ್ಮಸ್ಥಳಕ್ಕೆ ಸೇರಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ; ವಿಹೆಚ್ಪಿ–ಬಜರಂಗದಳ ಸ್ಥಳ ಪರಿಶೀಲನೆ, ತೆರವು ಕಾರ್ಯಾಚರಣೆ
ಸುಳ್ಯ: ಆಲೆಟ್ಟಿ ಕ್ರಾಸ್ನ ಗುರುಂಪು ಬಳಿ ಧರ್ಮಸ್ಥಳಕ್ಕೆ ಸಂಬಂಧಿಸಿದ ಜಾಗದಲ್ಲಿ ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗುರುಂಪು ಬಳಿಯ ಸರ್ವೇ ನಂಬರ್ 263-6ರ ಜಾಗದಲ್ಲಿ ಸ್ಥಳೀಯ ಅನ್ಯಮತೀಯ ವ್ಯಕ್ತಿಯೊಬ್ಬರು ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಿಸಿ, ಗೋಡೆ ಹಾಗೂ ಕಬ್ಬಿಣದ ಛಾವಣಿ ಅಳವಡಿಸಿ ಬಾಡಿಗೆಗೆ ನೀಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಈ ಕುರಿತು ಧರ್ಮಸ್ಥಳದ ಆಡಳಿತಕ್ಕೆ ಮಾಹಿತಿ ತಲುಪಿದ ಬಳಿಕ, ಕೆಲವು ದಿನಗಳ ಹಿಂದೆ ಧರ್ಮಸ್ಥಳದ ವ್ಯವಸ್ಥಾಪಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ
Aug 251 min read


ತುಳು ನಾಡಿಗೆ ಒಲಿದ ಸಂಗೀತ ಸರಸ್ವತಿ: ‘ಸರಿಗಮಪ ಲಿಟಲ್ ಚಾಂಪ್ಸ್’ನಲ್ಲಿ ಮಂಗಳೂರಿಗೆ ಡಬಲ್ ಧಮಾಕಾ!
ಮಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ನ ಅದ್ದೂರಿ ಫಿನಾಲೆ ತೆರೆ ಕಂಡಿದ್ದು, ಮಂಗಳೂರಿನ ಇಬ್ಬರು ಬಾಲಪ್ರತಿಭೆಗಳು ವಿನ್ನರ್ ಹಾಗೂ ಮೊದಲ ರನ್ನರ್ ಅಪ್ ಸ್ಥಾನ ಪಡೆದು ತುಳು ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ಮಂಗಳೂರಿನ ಅಶ್ಮಿತ್ ಈ ಬಾರಿಯ ‘ಸರಿಗಮಪ ಲಿಟಲ್ ಚಾಂಪ್ಸ್’ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅಶ್ಮಿತ್ಗೆ ವಿಜೇತ ಟ್ರೋಫಿಯೊಂದಿಗೆ ₹20 ಲಕ್ಷ ನಗದು ಬಹುಮಾನ ದೊರೆತಿದೆ. ಗಾಯನದ ಜೊತೆಗೆ ವಯೊಲಿನ್ ವಾದನದಲ್ಲೂ ಗಮನ ಸೆಳೆದ ಅಶ್ಮಿತ್, ಫಿನಾಲೆ
Aug 231 min read


ಕೋಲ್ಚಾರು: ಶ್ರೀ ಭಗವತಿ ಸೇವಾ ಸಮಿತಿ ಇದರ ವತಿಯಿಂದ 24ನೇ ವರ್ಷದ ಅದ್ದೂರಿ ಓಣಂ ಆಚರಣೆ
ಕೋಲ್ಚಾರಿನಲ್ಲಿ 24ನೇ ವರ್ಷದ ಅದ್ದೂರಿ ಓಣಂ ಆಚರಣೆ ಕೋಲ್ಚಾರು: ಶ್ರೀ ಭಗವತಿ ಸೇವಾ ಸಮಿತಿ, ಕೋಲ್ಚಾರು ಇದರ ವತಿಯಿಂದ ಇಂದು, ಆಗಸ್ಟ್ 23ರಂದು 24ನೇ ವರ್ಷದ ಓಣಂ ಆಚರಣೆಯನ್ನು ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ತಿರುವಾದಿರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಹಿಳೆಯರು ಹಾಗೂ ಮಕ್ಕಳಿಗಾಗಿ ಹಲವು ಬಗೆಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದವರು ಉತ್ಸಾಹದಿಂದ ಪಾಲ್ಗೊಂಡರು. ಆಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಅದ್ಭುತ ಓಣಂ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾಂಪ್ರದಾಯಿ
Aug 231 min read


ಮೀಸಲು ಕ್ಷೇತ್ರದ ಅಂಬೇಡ್ಕರ್ ಭವನ ಅನೈತಿಕ ಚಟುವಟಿಕೆಗಳಿಗೆ ಮೀಸಲೇ?
ಹೌದು, ಸುಳ್ಯ ವಿಧಾನಸಭಾ ಕ್ಷೇತಮೀಸಲುಕ್ಷೇತ್ರ.ಹಾಗೆಯೇ ಸುಳ್ಯತಾಲ್ಲೂಕುಅಭಿವೃದ್ಧಿವಿಚಾರದಲ್ಲಿ ಬಹಳ ಹಿಂದಿನಿಂದಲೂ ಹಿಂದೆ ಉಳಿದಿದೆ ಎನ್ನುವುದಕ್ಕೆ ಇಲ್ಲಿನ ಅಂಬೇಡ್ಕರ್ ಭವನ ಸಾಕ್ಷಿ. .. ಸುಮಾರು 16 ವರ್ಷಗಳ ಹಿಂದೆ ಶಂಕುಸ್ಥಾಪನೆಗೊಂಡ ಅಂಬೇಡ್ಕರ್ ಭವನ ಇನ್ನು ಪೂರ್ಣಗೊಳ್ಳಲಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ಸುಳ್ಯದ ಅಂಬೇಟಡ್ಕ ಬಳಿಯಲ್ಲಿ ಹಲವಾರು ಕೋಟಿ ರೂಪಾಯಿಯ ಯೋಜನೆ ಇನ್ನೂ ಪೂರ್ಣಗೊಳ್ಳಲಿಲ್ಲ. ಜನಸಾಮಾನ್ಯರ ತೆರಿಗೆಯ ಕೋಟಿ ಕೋಟಿ ರೂಪಾಯಿ ಅನೈತಿಕ ಚಟುವಟಿಕೆಗಳಿಗೆ ಉಪಯೋಗವಾಗುತ್ತಿದೆ. ಬಹಳ ದೊಡ್ಡಮಟ್ಟದ ಕಟ್ಟಡ ಕೇವಲ ಒಂದು ಹಂತದಲ್ಲಿ ನಿರ್ಮಾಣಗೊಂಡಿದೆ. ದೊಡ್ಡ ದೊಡ್ಡ ಪಿ
Aug 231 min read


ಕಲ್ಲೇಗ ಕೊಲೆ ಪ್ರಕರಣ: ಪ್ರಮುಖ ಆರೋಪಿ ಚೇತನ್ಗೆ ಹೈಕೋರ್ಟ್ ಜಾಮೀನು
ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣದಲ್ಲಿ ಪ್ರಥಮ ಆರೋಪಿ ಕೃಷ್ಣನಗರದ ಚೇತನ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಜಾಮೀನು ದೊರೆಯುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. 2023ರ ನವೆಂಬರ್ 6ರಂದು ರಾತ್ರಿ ನೆಹರುನಗರದಲ್ಲಿ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿ ಕೃಷ್ಣನಗರದ ಚೇತನ್, ಪಡೀಲು ನಿವಾಸಿ ಮನೀಷ್, ಬನ್ನೂರಿನ ಮಂಜುನಾಥ್ ಯಾನೆ ಹರಿ ಹಾಗೂ ಕೇಶವ ಪಡೀಲ್ ಅವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳ ಬಳಿಕ ಪ್ರಥಮ ಆರೋಪಿ ಚೇತನ್
Aug 231 min read


ದರ್ಶನ್ಗೆ ಮಾಫಿ ಸಾಕ್ಷಿ ಸಂಕಷ್ಟ? ದೈವದ ಮೊರೆ ಹೋದ ವಿಜಯಲಕ್ಷ್ಮಿ
ಮಂದಾರಬೈಲು ಶ್ರೀರಕ್ತೇಶ್ವರಿ–ಗುಳಿಗ ದೈವ ಸನ್ನಿಧಿಯಲ್ಲಿ ವಿಶೇಷ ಕೋಲ ಸೇವೆ ಮಂಗಳೂರಿನ ಶ್ರೀಕ್ಷೇತ್ರ ಮಂದಾರಬೈಲು ಶ್ರೀರಕ್ತೇಶ್ವರಿ ಮಂತ್ರದೇವತೆ ಹಾಗೂ ಗುಳಿಗ ದೈವದ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ವಿಶೇಷ ಕೋಲ ಸೇವೆ ಸಲ್ಲಿಸಿದ್ದಾರೆ. ದೈವದ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ, ಹರಕೆ ಸಲ್ಲಿಸಿರುವ ವಿಜಯಲಕ್ಷ್ಮಿ, ಕುಟುಂಬದ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ದರ್ಶನ್ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ವಿಜಯಲಕ್ಷ್ಮಿ ದೈವದ ಮೊರೆ ಹೋಗಿರುವುದು ಗಮನ ಸೆಳೆದಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳ ನಡುವ
Aug 231 min read


ದೈವಾರಾಧನೆಯ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಹಿಂದಿನಂತೆ ಅವಕಾಶ ನೀಡುವಂತೆ: ಯು.ಟಿ. ಖಾದರ್ಗೆ ಮನವಿ
ಶಾಸಕ ಅಶೋಕ್ ಕುಮಾರ್ ನೇತೃತ್ವದಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ಗೆ ಮನವಿ ಸಲ್ಲಿಕೆ ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ದೈವಾರಾಧನೆಯ ಅಂಗವಾಗಿ ನಡೆಯುವ ಕೋಳಿ ಅಂಕವನ್ನು ಈ ಹಿಂದೆ ನಡೆಯುತ್ತಿದ್ದ ರೀತಿಯಲ್ಲೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಾಂಪ್ರದಾಯಿಕ ಆಚರಣೆ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬೆಂಗಳೂರಿನ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದರು. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿಯಾದ ವೇದಿಕೆಯ ಪದಾಧಿಕಾರಿಗಳು, ಕರಾವಳಿಯ ಸಾಂಪ್ರದಾಯಿಕ ಆಚರ
Aug 221 min read


ಉಡುಪಿಯಲ್ಲಿ 10.8 ಟನ್ ರಾಸಾಯನಿಕ ಬಳಸಿಹಣ್ಣಾಗಿಸಿದ್ದ ಬಾಳೆಹಣ್ಣುಗಳ ವಶ
ರಾಸಾಯನಿಕ ಬಳಸಿ ಹಣ್ಣಾಗಿಸಿದ್ದ 10.89 ಟನ್ ಬಾಳೆಹಣ್ಣು ಉಡುಪಿಯಲ್ಲಿ ವಶ ಉಡುಪಿ: ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ, ರಾಸಾಯನಿಕ ಬಳಸಿ ಹಣ್ಣಾಗಿಸಲಾಗಿದೆ ಎಂದು ಶಂಕಿಸಲಾದ 10,890 ಕೆ.ಜಿ. ಬಾಳೆಹಣ್ಣುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲೆವೂರು, ಕೆಮ್ತೂರು ಹಾಗೂ ದುಗ್ಗಲಿಪಾಡವು ಪ್ರದೇಶಗಳಲ್ಲಿರುವ ಬಾಳೆಹಣ್ಣು ಮಾರಾಟದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಹೆಚ್ಚಿನ ಪ್ರಮಾಣದ ಬಾಳೆಹಣ್ಣುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ಪ್ರಕಾರ, ಬಾಳೆಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಬದಲು ರಾಸಾಯನಿ
Aug 201 min read


ಕಲುಷಿತ ನೀರಿನಲ್ಲಿ ಶುಂಠಿ ತೊಳೆಯುತ್ತಿದ್ದ ವ್ಯಾಪಾರಿ: ಕ್ರಮಕ್ಕೆ ಆಗ್ರಹ
ಮಂಗಳೂರು: ಬಿಕರ್ನಕಟ್ಟೆ–ಕೈಕಂಬ ರಸ್ತೆಯ ಬದಿಯಲ್ಲಿ ಶುಂಠಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ಕಲುಷಿತ ನೀರಿನಲ್ಲಿ ಶುಂಠಿಯನ್ನು ತೊಳೆದು ಸ್ವಚ್ಛಗೊಳಿಸಿದ ಘಟನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ರಸ್ತೆ ಬದಿಯ ಹೊಂಡದಲ್ಲಿ ನಿಂತಿದ್ದ ಕೆಸರು ನೀರನ್ನು ಬಳಸಿ ವ್ಯಾಪಾರಿ ಶುಂಠಿಯನ್ನು ತೊಳೆದು ಬಳಿಕ ಮಾರಾಟಕ್ಕೆ ಇಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಗಮನಿಸಿದ ವಾಹನ ಸವಾರರು ಹಾಗೂ ಪಾದಾಚಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಆಹಾರ ಪದಾರ್ಥಗಳ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿಂ
Aug 191 min read


ವಸತಿ ರಹಿತರಿಗೆ ಗುಡ್ನ್ಯೂಸ್: ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆಗೆ ಸರ್ಕಾರ ಸಿದ್ಧತೆ
ಬೆಂಗಳೂರು: ರಾಜ್ಯದ ನಿವೇಶನ ಹಾಗೂ ವಸತಿ ರಹಿತರಿಗೆ ನಿವೇಶನ ಒದಗಿಸುವ ಚುನಾವಣಾ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಉದ್ದೇಶಿಸಿದ್ದು, ನಿವೇಶನಗಳ ರಚನೆಗೆ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೂಚಿಸಿದೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಮೂಲಕ ನಿರ್ದೇಶನ ನೀಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 30×40, ನಗರದಲ್ಲಿ 20×30 ಅಡಿ ನಿವೇಶನ ಸರ್ಕಾರದ
Aug 181 min read


ಕುಂದಾಪುರ ಶೂಟೌಟ್ ಬಳಿಕ ಉಡುಪಿಯಲ್ಲಿ ಮತ್ತೊಂದು ರಕ್ತಪಾತಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಗುಂಡಿನ ದಾಳಿಗೆ ಬಲಿ
ಉಡುಪಿ: ಕುಂದಾಪುರದಲ್ಲಿ ನಡೆದ ಶೂಟೌಟ್ ಘಟನೆ ಮಾಸುವ ಮುನ್ನವೇ, ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಗುಂಡಿನ ದಾಳಿ ಸಂಭವಿಸಿದ್ದು, ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ (ಪ್ರಿನ್ಸ್) ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯಿಂದ ಕರಾವಳಿ ಭಾಗವೇ ಬೆಚ್ಚಿಬಿದ್ದಿದೆ. ಸ್ಥಳೀಯವಾಗಿ ಪ್ರಭಾವಿ ನಾಯಕನಾಗಿದ್ದ ಡೇವಿಡ್ ಡಿಸೋಜಾ ಅವರು ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು. ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಶೂಟೌಟ್ಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬ
Aug 71 min read
Archive
bottom of page



