ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ; ಮಹದೇವಪುರದಲ್ಲಿ ನಡು ರಸ್ತೆಯಲ್ಲಿ ಗಲಾಟೆ
- sathyapathanewsplu
- Jan 9
- 1 min read

ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್‌ಗೆ ಬೈಕ್ ಸವಾರರು ಥಳಿಸಿರುವ ಘಟನೆ ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಡೆಲಿವರಿ ಬಾಯ್ ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಸವಾರರು ಡೆಲಿವರಿ ಬಾಯ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಯುತ್ತಿದ್ದುದನ್ನು ಕಂಡ ಸ್ಥಳೀಯರು ಡೆಲಿವರಿ ಬಾಯ್ ಸಹಾಯಕ್ಕೆ ಧಾವಿಸಿದ್ದು, ಸಮಾಧಾನಪಡಿಸಲು ಪ್ರಯತ್ನಿಸಿದರೂ ಸವಾರರು ಶಾಂತಗೊಳ್ಳದ ಹಿನ್ನೆಲೆ ಸ್ಥಳೀಯರು ಬೈಕ್ ಸವಾರರಿಗೆ ಧರ್ಮದೇಟು ನೀಡಿದ್ದಾರೆ.
ಸ್ಥಳೀಯರ ಗೂಸಾ ಬೀಳುತ್ತಿದ್ದಂತೆಯೇ ಬೈಕ್ ಸವಾರರು ಅಲ್ಲಿಂದ ಪರಾರಿಯಾಗಿದ್ದು, ಜನವರಿ 4ರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.





