ಕೆಲಂಬೀರಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆ
- 1 day ago
- 1 min read

ಪುತ್ತೂರು: ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ 51ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಕೊಡಮಂತಾಯ ದೈವದ ಹಾಗೂ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಮಾರ್ಚ್ 2 ರಿಂದ 5ರವರೆಗೆ ಸಂಭ್ರಮದಿಂದ ನಡೆಯಲಿದೆ. ಫೆಬ್ರವರಿ 15ರಂದು ಆಟೋಟ ಸ್ಪರ್ಧೆಗಳು ಹಾಗೂ ಫೆಬ್ರವರಿ 25ರಂದು ಗೊನೆ ಮುಹೂರ್ತ ನೆರವೇರಲಿದೆ.
ಮಾರ್ಚ್ 2ರಂದು ಸ್ಥಳ ಶುದ್ಧಿ ಹೋಮ, ನಾಗಬ್ರಹ್ಮ ತಂಬಿಲ ಹಾಗೂ ಸಾಯಂಕಾಲ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಾರ್ಚ್ 4ರಂದು ಬೆಳಿಗ್ಗೆ ಕೊಡಮಂತಾಯ ದೈವದ ನೇಮೋತ್ಸವ ಹಾಗೂ ಸಂಜೆ ಬ್ರಹ್ಮ ಬೈದೆರುಗಳ ಭಂಡಾರ ತೆಗೆಯಲಾಗುವುದು. ಈ ವೇಳೆ ಕುಣಿತ ಭಜನೆ, ಸಾಧಕರಿಗೆ ಸನ್ಮಾನ ಹಾಗೂ ರಾತ್ರಿ ಬೈದೆರುಗಳ ಗರಡಿ ಇಳಿಯುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾರ್ಚ್ 5ರ ಬೆಳಿಗ್ಗೆ ಗಂಧ ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಡಳಿತ ಸಮಿತಿ ಕೋರಿದೆ.






Comments