;
top of page

ಠಾಣೆಯಲ್ಲಿ ಹೆತ್ತವರ ಕಣ್ಣೀರಿಗೂ ಕರಗದ ಮಗಳು! 40ರ ಧರ್ಮಗುರುವಿನ ಜೊತೆ ಹೋಗುವುದಾಗಿ ಯುವತಿ ಪಟ್ಟು…

1 day ago
1 min read


ಠಾಣೆಯಲ್ಲೇ ಹೆತ್ತವರ ಕಣ್ಣೀರು… ಕುಮಟಾ–ಮಂಗಳೂರು ಪ್ರಕರಣ ಭಾರೀ ಚರ್ಚೆ


ಮಂಗಳೂರು/ಕುಮಟಾ: ಧರ್ಮ ಶಿಕ್ಷಣ ನೀಡುವ ಮದರಸಾದಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ವ್ಯಕ್ತಿಯೊಬ್ಬರು, ತನಗಿಂತ ಕಿರಿಯ ಯುವತಿಯೊಂದಿಗೆ ತೆರಳಿರುವ ಆರೋಪದ ಪ್ರಕರಣ ಇದೀಗ ಉತ್ತರ ಕನ್ನಡದ ಕುಮಟಾ ಹಾಗೂ ಮಂಗಳೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಅವರ 22 ವರ್ಷದ ಪುತ್ರಿ ಸ್ಥಳೀಯ ಮದರಸಾದಲ್ಲಿ ಧರ್ಮ ಶಿಕ್ಷಣ ಪಡೆಯುತ್ತಿದ್ದರು. ಇದೇ ಮದರಸಾದಲ್ಲಿ ಮಂಗಳೂರಿನ ಅಸೈಗೋಳಿ ನಿವಾಸಿ, 40 ವರ್ಷದ ಅಶ್ರಫ್ ಸಅದಿ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.


ಕುಟುಂಬದ ಆರೋಪದ ಪ್ರಕಾರ, ಕಳೆದ ಮೂರು ವರ್ಷಗಳಿಂದ ಯುವತಿ ಮತ್ತು ಅಶ್ರಫ್ ಸಅದಿ ನಡುವೆ ಸಂಪರ್ಕವಿದ್ದು, ಬಳಿಕ ಅದು ಪ್ರೀತಿಗೆ ತಿರುಗಿತ್ತು. ಅಶ್ರಫ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ. ಆದರೆ ಈ ವಿಚಾರವನ್ನು ಯುವತಿಗೆ ಮುಚ್ಚಿಟ್ಟು ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂಬುದು ಕುಟುಂಬದ ಗಂಭೀರ ಆರೋಪವಾಗಿದೆ.


ಇತ್ತೀಚೆಗೆ ಇಬ್ಬರೂ ರಹಸ್ಯವಾಗಿ ನಿಖಾ ಮಾಡಿಕೊಂಡು, ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಬಳಿಕ ಯುವತಿಯನ್ನು ಅಸೈಗೋಳಿಯಲ್ಲಿರುವ ತನ್ನ ಮನೆಗೆ ಅಶ್ರಫ್ ಕರೆದುಕೊಂಡು ಬಂದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.


ಮಗಳು ಕಾಣೆಯಾಗಿರುವುದು ತಿಳಿದು ಪೋಷಕರು ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಅಶ್ರಫ್ ಸಅದಿ ಹಾಗೂ ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.


ಈ ವೇಳೆ ನಡೆದ ದೃಶ್ಯ ಮಾತ್ರ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಯುವತಿಯ ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಆಕೆಗೆ ಬುದ್ಧಿಹೇಳಿ ಮನೆಗೆ ವಾಪಸ್ ಬರುವಂತೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.


ಆದರೆ ಯುವತಿ ಪೋಷಕರ ಮಾತಿಗೆ ಒಪ್ಪದೇ, ತಾನು ತನ್ನ ಸ್ವಇಚ್ಛೆಯಿಂದ ಅಶ್ರಫ್ ಜೊತೆ ಇರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಇದೇ ವೇಳೆ, ಅಶ್ರಫ್ ಜೊತೆಗೇ ಜೀವನ ನಡೆಸುವುದಾಗಿ ಯುವತಿ ಪಟ್ಟು ಹಿಡಿದಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.


ಕಣ್ಣೆದುರೇ ಮಗಳು ತಮ್ಮೊಂದಿಗೆ ಬರಲು ನಿರಾಕರಿಸಿ ಮತ್ತೊಬ್ಬರ ಜೊತೆ ತೆರಳಿದ ದೃಶ್ಯ ಕಂಡು ಪೋಷಕರು ಠಾಣೆಯ ಆವರಣದಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.


ಈ ಪ್ರಕರಣದಲ್ಲಿ ಧರ್ಮಗುರು ವಿರುದ್ಧ ಮಾಡಲಾಗಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕುಟುಂಬದವರು ಆಗ್ರಹಿಸಿದ್ದು, ಧರ್ಮ ಶಿಕ್ಷಣದ ಹೆಸರಿನಲ್ಲಿ ಯುವತಿಯೊಂದಿಗೆ ಸಂಬಂಧ ಬೆಳೆಸಿದ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಆದರೆ ಯುವತಿ ಪ್ರಾಪ್ತವಯಸ್ಕಳಾಗಿದ್ದು, ತಾನು ಸ್ವಇಚ್ಛೆಯಿಂದ ಅಶ್ರಫ್ ಜೊತೆ ತೆರಳಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ಪೊಲೀಸ್ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page