top of page
News Articles
Sathyapatha News Plus


ದರ್ಬೆ ಸೈಬರ್ ಸೆಂಟರ್ ಗಲಾಟೆ ಪ್ರಕರಣ: ಸತ್ಯಾಸತ್ಯತೆ ಬಿಚ್ಚಿಟ್ಟ ಸಂತ್ರಸ್ತ ಮುಬಾಶಿರ; ಕ್ಷಮೆ ಕೇಳಿದರೆ ಕೇಸ್ ವಾಪಸ್ ಪಡೆಯಲು ಸಿದ್ಧ
ಪುತ್ತೂರು / ಮಂಗಳೂರು: ಪುತ್ತೂರು ನಗರದ ದರ್ಬೆಯ ಸೈಬರ್ ಕೇಂದ್ರವೊಂದರಲ್ಲಿ ಜನನ ಪ್ರಮಾಣಪತ್ರ ಲ್ಯಾಮಿನೇಷನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣವು ರಾಜಕೀಯ ಹಾಗೂ ಕೋಮು ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಸಂತ್ರಸ್ತ ಮಂಡೆಕೋಲು ನಿವಾಸಿ ಮುಬಾಶಿರ ಅವರು ಮಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಹಾಜರಾಗಿ ಘಟನೆಯ ಪೂರ್ಣ ವಾಸ್ತವಾಂಶವನ್ನು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 21ರಂದು ಊಟಕ್ಕೆ ಬಂದಿದ್ದಾಗ ಪಕ್ಕದ ಸೈಬರ್ ಸೆಂಟರ್ಗೆ ಮಗುವಿನ ಬರ್ತ್ ಸರ್ಟಿಫಿಕೇಟ್ ಲ್ಯಾಮಿನೇಷನ್ ಮತ್ತು ಆಧಾರ್ ಕಾರ್ಡ್ ಪ್ರಿಂಟ್ಗೆ ನೀಡಿದ್ದೆವು. ಆದರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸರ್ಟಿ
Aug 281 min read


ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಪುತ್ತೂರು ಶಾಸಕ ಅಶೋಕ್ ರೈ ಆಗ್ರಹ
ಮಂಗಳೂರು: ಮಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬುಧವಾರ ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾದ ಶಾಸಕರು, ಕರಾವಳಿ ಭಾಗದ ಜನರ ಬಹುವರ್ಷಗಳ ಈ ಪ್ರಮುಖ ಬೇಡಿಕೆಯನ್ನು ಈಡೇರಿಸುವಂತೆ ಸವಿಸ್ತಾರವಾಗಿ ಮಾತುಕತೆ ನಡೆಸಿ ಮನವಿ ಪತ್ರ ಹಸ್ತಾಂತರಿಸಿದರು. ಶಾಸಕರು ತಮ್ಮ ಮನವಿಯಲ್ಲಿ, ತುಳು ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು ಸುದೀರ್ಘ ಇತಿಹಾಸವನ್ನು ಹೊ
Aug 281 min read


ಬಳ್ಪ -ಕೋಡಿಂಬಾಳ: ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು; ಗ್ರಾಮಸ್ಥರಲ್ಲಿ ಆತಂಕ
ಕೋಡಿಂಬಾಳ: ಬಳ್ಪ ಪರಿಸರದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಕ್ಕದ ಕೋಡಿಂಬಾಳ ಗ್ರಾಮಕ್ಕೆ ಲಗ್ಗೆಯಿಟ್ಟಿದೆ. ಎಣ್ಣೆಮಜಲು ಬಳಿಯ ಬೀರಿಕಾಡು ಪ್ರದೇಶದ ಮೂಲಕ ನದಿ ದಾಟಿ ಬಂದಿರುವ ಆನೆಗಳು, ಕೊರಿಯರ್ ಸಮೀಪದ ಖಾಸಗಿ ರಬ್ಬರ್ ತೋಟದಲ್ಲಿ ಠಿಕಾಣಿ ಹೂಡಿವೆ. ಜನವಸತಿ ಹಾಗೂ ಕೃಷಿ ತೋಟಗಳ ಸನಿಹದಲ್ಲೇ ಆನೆಗಳು ಬೀಡುಬಿಟ್ಟಿರುವುದರಿಂದ ಸ್ಥಳೀಯ ಕೃಷಿಕರು, ಕಾರ್ಮಿಕರು ಮತ್ತು ಶಾಲಾ ಮಕ್ಕಳು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಗ್ರಾಮಸ್ಥರು ಒಂಟಿಯಾಗಿ ಸಂಚರಿಸದೆ ಜಾಗರೂಕರಾಗಿರುವಂತೆ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ. ಅರಣ್ಯ ಇಲಾಖಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಕಾಡಾನೆಗಳನ್
Aug 281 min read


ಕಡಬ: ಪ.ಪಂ ಅಧ್ಯಕ್ಷೆಯ ಮನೆಯಲ್ಲೇ ಕಳ್ಳತನ
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಡಗದ್ದೆ ಎಂಬಲ್ಲಿ ಮನೆಯ ಮರದ ಬಾಕ್ಸ್ ಒಡೆದು ಅದರಲ್ಲಿದ್ದ ₹84,800/- ನಗದು ಹಣವನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್ (43) ಅವರ ಮನೆಯಲ್ಲಿ ಈ ಕಳವು ಸಂಭವಿಸಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆ ತಮನ್ನಾ ಜಬೀನ್ ಅವರು ಕುಟುಂಬದೊಂದಿಗೆ ಕಡಬ ಅಡ್ಡಗದ್ದೆಯಲ್ಲಿರುವ ಗಂಡನ ಮನೆಯಲ್ಲಿ ವಾಸವಾಗಿದ್ದು, ಮಲಗುವ ಕೋಣೆಯ ಮರದ ಬಾಕ್ಸ್ನಲ್ಲಿ ಹಣ ಸಂಗ್ರಹಿಸಿಟ್ಟಿದ್ದರು. ಆಗಸ್ಟ್ 18 ರಂದು ಕಾರ್ಯಕ್ರಮ ನಿಮಿತ್ತ ಕುಟುಂಬ ಸಮೇತ ಉಡುಪಿಗೆ ತೆರಳಿ ಅಂದೇ ಮನೆಗೆ ಹಿಂತಿರುಗಿದ್ದರು. ಬಳಿಕ
Aug 281 min read


ಟಾರ್ಗೆಟ್ ಪೂರ್ಣಗೊಳಿಸಿಲ್ಲ ಎಂದು 200 ಬಸ್ಕಿ ಶಿಕ್ಷೆ: ತೀವ್ರ ಅನಾರೋಗ್ಯಕ್ಕೆ ತುತ್ತಾದ ಯುವ ಉದ್ಯೋಗಿ!
ಚೀನಾದ ಹ್ಯಾಂಗ್ಝೌನಲ್ಲಿರುವ ಖಾಸಗಿ ಸಾಲ ಒದಗಿಸುವ ಕಂಪನಿಯೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ನಿಗದಿತ ದೈನಂದಿನ ಕೆಲಸದ ಟಾರ್ಗೆಟ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಮ್ಯಾನೇಜರ್ ನೀಡಿದ 200 ಸ್ಕ್ವಾಟ್ಸ್ (ಬಸ್ಕಿ) ಶಿಕ್ಷೆಯಿಂದಾಗಿ ಯಾಂಗ್ ಎಂಬ ಯುವ ಉದ್ಯೋಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹಣಕಾಸು ಸಲಹೆಗಾರರಾಗಿದ್ದ ಯಾಂಗ್ ಜುಲೈ 28ರಂದು ಟಾರ್ಗೆಟ್ ತಲುಪಲು ವಿಫಲರಾಗಿದ್ದರು. ಮ್ಯಾನೇಜರ್ ದಂಡ ಅಥವಾ 200 ಬಸ್ಕಿ ಶಿಕ್ಷೆಯ ಷರತ್ತು ವಿಧಿಸಿದ್ದರಿಂದ, ಹಣವಿಲ್ಲದೆ ಯಾಂಗ್ ಬಸ್ಕಿ ಹೊಡೆದು ವಿಡಿಯೊ ಕಳುಹಿಸಿದ್ದರು. ಕೊನೆಯಲ್ಲಿ ಕುಸಿದುಬಿದ್ದ ಆಕೆಗೆ ತೀವ್ರ ಕಾಲುನೋವು ಕಾಣಿ
Aug 271 min read


ನೇಪಾಳ ಪ್ರವಾಹ: ಬಲಿಯಾದವರ ಸಂಖ್ಯೆ 270ಕ್ಕೆ ಏರಿಕೆ, 288 ಭಾರತೀಯರು ನಾಪತ್ತೆ
ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಮಡಿದವರ ಸಂಖ್ಯೆ 270 ದಾಟಿದೆ. ಅಲ್ಲಿಗೆ ತೆರಳಿದ್ದ 288 ಭಾರತೀಯ ಪ್ರಜೆಗಳು ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ. ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ಸಂತ್ರಸ್ತರಿಗೆ ನೆರವಾಗಲು ದೆಹಲಿ ಮತ್ತು ಕಠ್ಮಂಡುವಿನಲ್ಲಿ ವಿಶೇಷ ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ತಮಿಳುನಾಡಿನ 21 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಿ ವಾಪಸ್ ಕರೆತರಲಾಗುತ್ತಿದೆ. ಇತ್ತ ಚೀನಾ ಗಡಿಯ ಟಿಬೆಟ್ ಭಾಗದಲ್ಲಿ ಸುಮಾರು 200 ಕೈಲಾಸ ಮಾನಸಸರೋವರ ಯಾತ್ರಿಕರು ಸಿಲುಕಿಕೊಂಡಿದ್ದು,
Aug 271 min read


ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ
ಬೆಳಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳಂದೂರು ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ, ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ರಾಘವ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮನಾಭ ಕೆ., ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ಹಾಗೂ ಶ್ರೀ ವಚನ ಜಯರಾಮ್, ಅಧ್ಯಕ್ಷರು ವಿದ್ಯಾಭಿಮಾನಿಗಳ ಸಂಘ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಕಳುವಾಜೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯ
Aug 271 min read


ಕರ್ನಾಟಕದಲ್ಲಿ H1N1 ಮತ್ತು ಇನ್ಫ್ಲುಯೆನ್ಸ ಪ್ರಕರಣ ಹೆಚ್ಚಳ
ಕರ್ನಾಟಕದಲ್ಲಿ H1N1 ಹಾಗೂ ಇನ್ಫ್ಲುಯೆನ್ಸ ಪ್ರಕರಣಗಳು ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಆದರೆ, ಮಳೆಗಾಲದಲ್ಲಿ ಈ ಸೋಂಕು ಹೆಚ್ಚುವುದು ಸಾಮಾನ್ಯವಾಗಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. IHIP ದತ್ತಾಂಶದಂತೆ ಆಗಸ್ಟ್ 22ರವರೆಗೆ 4,212 ಪ್ರಕರಣಗಳು ವರದಿಯಾಗಿದ್ದು, ಇದು ನಿರೀಕ್ಷಿತ ಕಾಲೋಚಿತ ಮಾದರಿಯಲ್ಲೇ ಇದೆ. ಆರೋಗ್ಯ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಗತ್ಯ ಔಷಧಿಗಳು ಹಾಗೂ ವೈದ್ಯಕೀಯ ಮೂಲಸೌಕರ್ಯಗಳ ದಾಸ್ತಾನು ಸಮರ್ಪಕವಾಗಿದೆ ಎಂದು ತಿಳಿಸಲಾಗಿದೆ. ಸಾರ್ವಜನಿಕರು ಭಯಪಡದೆ ಕೆಮ್ಮುವಾಗ ಬಾಯಿ ಮು
Aug 271 min read


ದಸರಾಗೆ 'ಗಜಪಯಣ' ಚಾಲನೆ: ಈ ಬಾರಿ ಸಾಂಪ್ರದಾಯಿಕ ಕಂಬಳ ಸಂಭ್ರಮ
ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜಿಸಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ 'ಗಜಪಯಣ'ಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆಯಂತೆ ಈಗಾಗಲೇ ಗುರುತಿಸಲಾದ ಜಾಗದಲ್ಲಿ ಕಂಬಳ ನಡೆಯಲಿದೆ ಎಂದರು. ಇದೇ ವೇಳೆ ದಸರಾದ ಪ್ರಮುಖ ಆಕರ್ಷಣೆಯಾಗಿದ್ದ 'ಅಭಿಮನ್ಯು' ಆನೆಗೆ ವಿಶೇಷ ಪೂಜೆ ಸಲ್ಲಿಸಿ ಗೌರವದ ಬೀಳ್ಕೊಡುಗೆ ನೀಡಲಾಯಿತು. ಕಳೆದ 25 ವರ್ಷಗಳಿಂದ ದಸರಾದಲ್ಲಿ ಸಕ್ರಿಯವಾಗಿ ಭಾಗವಹಿಸಿ, 6 ಬಾರಿ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ನಿವೃತ್ತಿ ಹೊಂದಿದ್ದಾ
Aug 271 min read


ಶಾಸ್ತ್ರಿ ಸರ್ಕಲ್ನಲ್ಲಿ ಗುಂಡಿ ಗಂಡಾಂತರ ಬಾಳೆಗಿಡ ನೆಟ್ಟರೂ ಎಚ್ಚೆತ್ತುಕೊಳ್ಳದ ಆಡಳಿತ: ಈ ‘ಮರಣಗುಂಡಿ’ಗೆ ಕಾಯಂ ಪರಿಹಾರ ಎಂದು?
ಸುಳ್ಯದ ಹೃದಯಭಾಗ ಶಾಸ್ತಿ ಸರ್ಕಲ್ನಲ್ಲಿ ಬೇಸಿಗೆಯಲ್ಲಿ ತೆಗೆದ ಪೈಪ್ಲೈನ್ ಗುಂಡಿ ಈಗ ಸಾರ್ವಜನಿಕರನ್ನು ಬಲಿ ಪಡೆಯಲು ಕಾದಿದೆ. ಆಟೋ ಚಾಲಕರು ಬಾಳೆಗಿಡ ನೆಟ್ಟು ಮೂರು ಬಾರಿ ಪ್ರತಿಭಟಿಸಿದರೂ, ಆಡಳಿತ ವರ್ಗದ ‘ಕಣ್ಣೊರೆಸುವ ತಂತ್ರ’ ಬರೀ ಜಲ್ಲಿಕಲ್ಲು ಹಾಕುವುದಕ್ಕಷ್ಟೇ ಸೀಮಿತವಾಗಿದೆ. ಮಳೆಗೆ ಕಲ್ಲು ಕೊಚ್ಚಿಹೋಗಿ ವಾಹನ ಸವಾರರು ಅಡ್ಡಬಿದ್ದು ಮೂಳೆ ಮುರಿದುಕೊಳ್ಳುವ ಭೀತಿಯಲ್ಲಿದ್ದಾರೆ. ಅಷ್ಟೇ ಏಕೆ, ಕೆಲವು ದಿನಗಳ ಹಿಂದೆಯಷ್ಟೇ ಆಂಬುಲೆನ್ಸ್ ಒಂದಕ್ಕೆ ಈ ಗುಂಡಿಯಿಂದಾಗಿ ಪಲ್ಟಿಯಾಗುವ ಪರಿಸ್ಥಿತಿ ಎದುರಾಗಿತ್ತು! ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ರಸ್ತೆ ದುರಸ್ತಿ ಮಾಡಲು ಇನ್ನೆಷ್ಟು ಬ
Aug 271 min read


ದೇವರಕೊಲ್ಲಿ ಬಳಿ ಭೀಕರ ಅಪಘಾತ: ಟಿಟಿ ಮೇಲೆ ಮಗುಚಿದ ಲಾರಿ; ಹಲವರಿಗೆ ಗಂಭೀರ ಗಾಯ
ದೇವರಕೊಲ್ಲಿ: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಅಬ್ಬಿಕೊಲ್ಲಿ ಬಳಿ ಇಂದು ಸಂಜೆ ಭೀಕರ ಅಪಘಾತ ಸಂಭವಿಸಿದೆ. ಟೆಂಪೋ ಟ್ರಾವೆಲ್ಲರ್ (ಟಿಟಿ) ವಾಹನದ ಮೇಲೆ ಲಾರಿಯೊಂದು ಮಗುಚಿ ಬಿದ್ದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಪಘಾತದ ಬಳಿಕ ಟಿಟಿ ವಾಹನದೊಳಗೆ ಕೆಲವರು ಸಿಲುಕಿಕೊಂಡಿದ್ದರು. ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಗಾಯಾಳುಗಳನ್ನು ಮೂರು ಅಂಬ್ಯುಲೆನ್ಸ್ಗಳ ಮೂಲಕ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಸಾವು ಸಂಭವಿಸಿರುವ ಶಂಕೆಯೂ ವ್ಯಕ್ತವಾಗಿದ್ದು, ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಲ
Aug 261 min read


ಸೌಜನ್ಯಾ ಮನೆಗೆ ಆರ್ಎಸ್ಎಸ್ ಹಿರಿಯ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಭೇಟಿ
ಬೆಳ್ತಂಗಡಿ: 13 ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿದ್ದ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅವರ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಕ್ಕೆ ಆರ್ಎಸ್ಎಸ್ನ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಆಗಸ್ಟ್ 26ರಂದು ಭೇಟಿ ನೀಡಿದರು. ಈ ವೇಳೆ ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರೊಂದಿಗೆ ಪ್ರಭಾಕರ ಭಟ್ ಕಲ್ಲಡ್ಕ ಮಾತುಕತೆ ನಡೆಸಿದರು. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆದಿರುವುದಾಗಿ ತಿಳಿದುಬಂದಿದೆ. ಭೇಟಿಯ ಸಂದರ್ಭದಲ್ಲಿ ಉದ್ಯಮಿ ಸದಾನಂದ ನಾವರ, ಪುರಂದರ, ಮೋಹನ್ ಶೆಟ್ಟಿ ಉಜಿರೆ ಸೇರಿದಂತೆ ಮತ್ತಿತ
Aug 261 min read


ಪುತ್ತೂರು ದರ್ಬೆ ಬೈಪಾಸ್ನಲ್ಲಿ ಬ್ರೇಕ್ ವೈಫಲ್ಯ; ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ಗೆ ಡಿಕ್ಕಿ
ಪುತ್ತೂರು: ದರ್ಬೆ ಬೈಪಾಸ್ನ ಅಶ್ವಿನಿ ಸರ್ಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಮನೆಯ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬಸ್ಸಿನಲ್ಲಿ ಬ್ರೇಕ್ ವೈಫಲ್ಯ ಉಂಟಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯಲ್ಲಿದ್ದ ಮನೆಯ ಕಾಂಪೌಂಡ್ಗೆ ನುಗ್ಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾಂಪೌಂಡ್ಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
Aug 261 min read


ಕಡಬ: ಅಂಬೇಡ್ಕರ್ ಭವನದಲ್ಲಿ ಅಕ್ರಮ ಮನಿ ಸರ್ಕ್ಯುಲೇಷನ್ ಜಾಲ ಪತ್ತೆ, 8 ಜನರ ವಿರುದ್ಧ ಎಫ್ಐಆರ್
ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡಿ ನಿಷೇಧಿತ ಮನಿ ಸರ್ಕ್ಯುಲೇಷನ್ ಯೋಜನೆ ನಡೆಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಸಂಸ್ಥೆಯ ಮಾಲೀಕರು ಹಾಗೂ ಸ್ಥಳೀಯ ಏಜೆಂಟರು ಸೇರಿದಂತೆ ಒಟ್ಟು 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ದಿನಾಂಕ 23.08.2026 ರಂದು ಸಿಕ್ಕ ಗುಪ್ತಚರ ಮಾಹಿತಿ ಆಧರಿಸಿ ಕಡಬ ಪೊಲೀಸರು ದಾಳಿ ನಡೆಸಿದಾಗ, ಹಾವೇರಿ ಮೂಲದ 'ಕಿಂಗ್ಸ್ ಬಜಾರ್' (KINGS Bazaar) ಹೆಸರಿನಲ್ಲಿ ಸಾರ್ವಜನಿಕರನ್ನು ಸೇರಿಸಿ ಸಭೆ ನಡೆಸುತ್ತಿರುವುದು ಕಂಡುಬಂದಿದೆ. "ಕಂಪನಿಗೆ ಹಣ ತೊಡಗಿಸಿದರೆ ಶೀಘ್ರವಾಗಿ ಭಾರಿ ಲಾಭ ಗಳಿಸಬಹುದು, ರಿಯಾಯಿತಿ ದರದಲ
Aug 261 min read


ಹಬ್ಬದ ಸಂಭ್ರಮಕ್ಕೆ ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ
ಮಂಗಳೂರು: ಹಬ್ಬದ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಪೊಲೀಸರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಖಾಸಗಿ ಜಾಗದಲ್ಲಿ ಕಾರ್ಯಕ್ರಮ ನಡೆಸುವುದಾದರೆ ಜಾಗದ ಮಾಲೀಕರಿಂದ ಎನ್ಒಸಿ ಪಡೆಯುವುದು ಕಡ್ಡಾಯವಾಗಿದೆ. ಡಿಜೆ ಹಾಗೂ ಅತಿಯಾದ ಶಬ್ದದ ಸ್ಪೀಕರ್ಗಳ ಬಳಕೆಗೆ ಸಂಪೂರ್ಣ ನಿಷೇಧವಿದ್ದು, ಅನುಮತಿಯೊಂದಿಗೆ ಬಳಸುವ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯೊಳಗೆ ಬಂದ್ ಮಾಡಬೇಕು. ಮೆರವಣಿಗೆಗಳನ್ನು ರಾತ್ರಿ 11.30ರೊಳಗೆ ಮುಕ್ತಾಯಗೊಳಿಸಬೇಕು. ನಿಗದಿತ ಮಾರ್ಗ ಅಥವಾ ಸ್ಥಳವನ್ನು ಬದಲಾಯಿಸಿ
Aug 251 min read


ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೇಘಸ್ಫೋಟದಂತಹ ಮಳೆ ಉಕ್ಕಿ ಹರಿದ ದರ್ಪಣ ತೀರ್ಥ ನದಿ ಹಲವು ಕಡೆಗಳಿಗೆ ನುಗ್ಗಿದ ನೀರು
ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ: ಉಕ್ಕಿ ಹರಿದ ದರ್ಪಣ ತೀರ್ಥ ನದಿ, ಹಲವು ಕಡೆಗಳಿಗೆ ನುಗ್ಗಿದ ನೀರು ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು ಮೇಘಸ್ಫೋಟದಂತಹ ಭಾರೀ ಮಳೆಯಾಗಿದ್ದು, ನದಿಗಳು ಉಕ್ಕಿ ಹರಿದಿವೆ. ನಿರಂತರ ಮಳೆಯಿಂದಾಗಿ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ದರ್ಪಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹ ಸದೃಶ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯಿಂದಾಗಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶ ಸೇರಿದಂತೆ ವಿವಿಧೆಡೆ ಮಳೆ ನೀರು ನುಗ್ಗಿದೆ. ನೀರಿನ ಪ್ರವಾಹದಿಂದ ದೇವರಗದ್ದೆ, ಕುಲ್ಕುಂದ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು
Aug 251 min read


ಬಿಜೆಪಿಗೆ ಆಘಾತ: ಕಾಂಗ್ರೆಸ್ ಸೇರಿದ ನೆರಿಯಾ ಮಾಜಿ ಗ್ರಾ.ಪಂ. ಸದಸ್ಯೆ ಮರಿಯಮ್ಮ
ಬೆಳ್ತಂಗಡಿ: ತಾಲೂಕಿನ ನೆರಿಯಾ ಗ್ರಾಮ ಪಂಚಾಯತ್ನ ಮಾಜಿ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದ ಮರಿಯಮ್ಮ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಪಕ್ಷದ ತತ್ವ, ಸಿದ್ಧಾಂತ ಹಾಗೂ ಜನಪರ ಕಾರ್ಯವೈಖರಿಯನ್ನು ಮೆಚ್ಚಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮರಿಯಮ್ಮ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ, "ಕಾಂಗ್ರೆಸ್ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವ ಪಕ್ಷವಾಗಿದೆ. ಮರಿಯಮ್ಮ ಅವರ ಸೇರ್ಪಡೆಯಿಂದ ನೆರಿಯಾ ಭಾಗದಲ್ಲಿ ಪಕ್ಷದ ಸಂಘಟನೆ ಇನ
Aug 251 min read


ಸುಳ್ಯದಲ್ಲಿ ಧರ್ಮಸ್ಥಳಕ್ಕೆ ಸೇರಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ; ವಿಹೆಚ್ಪಿ–ಬಜರಂಗದಳ ಸ್ಥಳ ಪರಿಶೀಲನೆ, ತೆರವು ಕಾರ್ಯಾಚರಣೆ
ಸುಳ್ಯ: ಆಲೆಟ್ಟಿ ಕ್ರಾಸ್ನ ಗುರುಂಪು ಬಳಿ ಧರ್ಮಸ್ಥಳಕ್ಕೆ ಸಂಬಂಧಿಸಿದ ಜಾಗದಲ್ಲಿ ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗುರುಂಪು ಬಳಿಯ ಸರ್ವೇ ನಂಬರ್ 263-6ರ ಜಾಗದಲ್ಲಿ ಸ್ಥಳೀಯ ಅನ್ಯಮತೀಯ ವ್ಯಕ್ತಿಯೊಬ್ಬರು ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಿಸಿ, ಗೋಡೆ ಹಾಗೂ ಕಬ್ಬಿಣದ ಛಾವಣಿ ಅಳವಡಿಸಿ ಬಾಡಿಗೆಗೆ ನೀಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಈ ಕುರಿತು ಧರ್ಮಸ್ಥಳದ ಆಡಳಿತಕ್ಕೆ ಮಾಹಿತಿ ತಲುಪಿದ ಬಳಿಕ, ಕೆಲವು ದಿನಗಳ ಹಿಂದೆ ಧರ್ಮಸ್ಥಳದ ವ್ಯವಸ್ಥಾಪಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ
Aug 251 min read
Archive
bottom of page



