ನೀಟ್ ಮರುಪರೀಕ್ಷೆ: ಟೆಲಿಗ್ರಾಂ ನಿಷೇಧದ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- Jun 19
- 1 min read

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಜೂನ್ 22ರವರೆಗೆ ದೇಶದಲ್ಲಿ ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು, ಕೇವಲ ನೀಟ್ ಆಕಾಂಕ್ಷಿಗಳಿಗಾಗಿ ದೇಶದ 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸಬಹುದೇ? ಹಾಗೂ ಸೋರಿಕೆ ತಡೆಗೆ ಟೆಲಿಗ್ರಾಂ ಸೂಕ್ತ ಕ್ರಮ ಕೈಗೊಂಡಿದೆಯೇ ಎಂದು ಕೇಂದ್ರವನ್ನು ಪ್ರಶ್ನಿಸಿದರು.
ಟೆಲಿಗ್ರಾಂ ಪರ ವಾದಿಸಿದ ವಕೀಲ ಧ್ರುವ ಮೆಹ್ತಾ, ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾತ್ರ ತೆಗೆದುಹಾಕಬೇಕೇ ಹೊರತು ಇಡೀ ಆ್ಯಪ್ ನಿಷೇಧಿಸಬಾರದು. ಇದು ಬಳಕೆದಾರರ ವಾಕ್ ಸ್ವಾತಂತ್ರ್ಯದ ಧಕ್ಕೆಯಾಗುತ್ತದೆ ಎಂದು ವಾದಿಸಿದರು.







Comments