;
top of page

ಕೊಲ್ಲೂರು ಮೂಕಾಂಬಿಕೆಗೆ ತಮಿಳುನಾಡು ರಾಜಕಾರಣಿಗಳ ವಿಶೇಷ ನಂಟು

  • Jun 14
  • 1 min read

ಕೊಲ್ಲೂರು ಮೂಕಾಂಬಿಕೆ ದೇವಿಗೂ ತಮಿಳುನಾಡಿನ ರಾಜಕಾರಣಿಗಳಿಗೂ ವಿಶೇಷ ನಂಟಿದೆ. ಇತ್ತೀಚೆಗೆ ನಟ, ರಾಜಕಾರಣಿ ವಿಜಯ್ ಅವರು ಕೊಲ್ಲೂರಿಗೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸುಮಾರು 500 ಗ್ರಾಂ ತೂಕದ ಬೆಳ್ಳಿಯ ಖಡ್ಗ ಹಾಗೂ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

ವಿಜಯ್‌ಗಿಂತ ಮುನ್ನ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ. ಜಿ. ರಾಮಚಂದ್ರನ್, ಜಾನಕಿ ಮತ್ತು ಜಯಲಲಿತಾ ಅವರು ದೇವಿಯ ದರ್ಶನ ಪಡೆದಿದ್ದರು. 1980ರಲ್ಲಿ ಎಂಜಿಆರ್ ಅವರು ದೇವಿಗೆ 1 ಕೆಜಿ ತೂಕದ ಚಿನ್ನದ ಖಡ್ಗವನ್ನು ಅರ್ಪಿಸಿದ್ದು, ಅದನ್ನು ಇಂದಿಗೂ ದೇವಿಯ ಸೇವೆಯಲ್ಲಿ ಬಳಸಲಾಗುತ್ತದೆ.

ಅದೇ ರೀತಿ 2004ರಲ್ಲಿ ಜಯಲಲಿತಾ ಅವರು ಕೊಲ್ಲೂರಿನಲ್ಲಿ ಚಂಡಿಕಾ ಯಾಗ ನಡೆಸಿ, ದೇವಿಗೆ ಚಿನ್ನದ ಕವಚ ಸಮರ್ಪಿಸಿದ್ದರು. ಅಂದು ಎಂಜಿಆರ್ ನೀಡಿದ್ದ ಚಿನ್ನದ ಖಡ್ಗದ ಅಂದಾಜು ಮೌಲ್ಯ 13.30 ಲಕ್ಷ ರೂಪಾಯಿಯಾಗಿದ್ದರೆ, ಇಂದಿನ ಮಾರುಕಟ್ಟೆ ದರದ ಪ್ರಕಾರ ಅದರ ಮೌಲ್ಯ ಕೋಟಿಗೂ ಅಧಿಕವಾಗುತ್ತದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page