ತಿರುಪತಿ ಲಡ್ಡು ಗುಣಮಟ್ಟ ಕಾಯ್ದುಕೊಳ್ಳಲು ಮೈಸೂರಿನ ಸಿಎಫ್‌ಟಿಆರ್‌ಐ ಜೊತೆ ಒಪ್ಪಂದ
- Jun 16
- 1 min read

ತಿರುಪತಿ ಲಡ್ಡು ಪ್ರಸಾದದ ಪವಿತ್ರತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನ (TTD) ಮೈಸೂರಿನ ಸಿಎಫ್‌ಟಿಆರ್‌ಐ (CFTRI) ಸಂಸ್ಥೆಯೊಂದಿಗೆ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ. ಇತ್ತೀಚಿನ ತುಪ್ಪದ ಕಲಬೆರಕೆ ವಿವಾದಗಳ ಹಿನ್ನೆಲೆಯಲ್ಲಿ ಭಕ್ತರ ವಿಶ್ವಾಸವನ್ನು ಮರುಗಳಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ನಡೆದ ರೈಸ್ (RISE) ಕಾನ್‌ಕ್ಲೇವ್ 2026ರಲ್ಲಿ ಈ ಒಪ್ಪಂದ ನಡೆದಿದ್ದು, ಇನ್ಮುಂದೆ ಲಡ್ಡು ತಯಾರಿಕೆಗೆ ಬಳಸುವ ತುಪ್ಪ ಸೇರಿದಂತೆ ಎಲ್ಲಾ ಕಚ್ಚಾ ವಸ್ತುಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಫ್ರಾನ್ಸ್‌ನಿಂದ ಆಮದು ಮಾಡಲಾದ ‘ಎಲೆಕ್ಟ್ರಾನಿಕ್ ನೋಸ್’ ಮತ್ತು ‘ಎಲೆಕ್ಟ್ರಾನಿಕ್ ಟಂಗ್’ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.
ತಿರುಮಲದಲ್ಲಿರುವ ಪ್ರಯೋಗಾಲಯಕ್ಕೆ ಸಿಎಫ್‌ಟಿಆರ್‌ಐ ತಾಂತ್ರಿಕ ಮಾರ್ಗದರ್ಶನ ನೀಡಲಿದ್ದು, ಕೀಟನಾಶಕ ಹಾಗೂ ಕಲ್ಮಶಗಳನ್ನು ಪತ್ತೆಹಚ್ಚಲು ಹೈಟೆಕ್ ಉಪಕರಣಗಳನ್ನು ಅಳವಡಿಸಲಾಗುತ್ತದೆ. ಪ್ರಸಾದದ ಪ್ಯಾಕೇಜಿಂಗ್‌ಗೆ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದ್ದು, ಈ ಕ್ರಮದಿಂದ ಕೋಟ್ಯಂತರ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.







Comments