ಕೇವಲ 50 ರೂ. ಮೊಸರು ರಿಫಂಡ್ ಆಸೆಗೆ ಬಿದ್ದು 98 ಸಾವಿರ ಕಳೆದುಕೊಂಡ ಬೆಂಗಳೂರು ಮಹಿಳೆ!

ದೈನಂದಿನ ಜೀವನದಲ್ಲಿ ಇನ್ಸ್ಟಂಟ್ ಡೆಲಿವರಿ ಆ್ಯಪ್‌ಗಳ ಬಳಕೆ ಹೆಚ್ಚುತ್ತಿರುವಂತೆ, ಸೈಬರ್ ವಂಚಕರ ಕೃತ್ಯಗಳೂ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಬೆಂಗಳೂರಿನ ಮಹಿಳೆಯೊಬ್ಬರು ಬ್ಲಿಂಕಿಟ್‌ನಲ್ಲಿ ಮೊಸರಿನ ಪ್ಯಾಕೆಟ್ ಆರ್ಡರ್ ಮಾಡಿ, ಅದರ ಹಣವನ್ನು ರಿಫಂಡ್ (ಮರುಪಾವತಿ) ಪಡೆಯಲು ಹೋಗಿ ಬರೋಬ್ಬರಿ 98,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಅಕ್ಟೋಬರ್ 17ರಂದು ಹಾನಿಗೊಳಗಾದ ಮೊಸರಿನ ಪ್ಯಾಕೆಟ್‌ಗಾಗಿ ಕಸ್ಟಮರ್ ಕೇರ್ ಸಂಪರ್ಕಿಸಿದ ಮಹಿಳೆಗೆ, ನಕಲಿ ಗ್ರಾಹಕ ಸೇವಾ ಪ್ರತಿನಿಧಿಗಳೆಂದು ನಂಬಿಸಿದ ವಂಚಕರು ವಂಚನೆ ಎಸಗಿದ್ದಾರೆ. ಇಂಟರ್ನೆಟ್‌ನಲ್ಲಿ ಸಿಕ್ಕ ನಕಲಿ ನಂಬರ್‌ಗೆ ಕರೆ ಮಾಡಿದ ಮಹಿಳೆಗೆ ವಾಟ್ಸ್‌ಆ್ಯಪ್ ಮೂಲಕ ಲಿಂಕ್ ಕಳುಹಿಸಿ, ಫೋಟೋ ಅಪ್‌ಲೋಡ್ ಮಾಡಲು ಹಾಗೂ ಡಿಜಿಟಲ್ ಪಾವತಿ ಖಾತೆ ತೆರೆಯುವಂತೆ ಸೂಚಿಸಲಾಗಿದೆ. ಮಹಿಳೆ ಪಾಸ್‌ವರ್ಡ್ ನಮೂದಿಸುತ್ತಿದ್ದಂತೆ ಆ್ಯಪ್ ಕಣ್ಮರೆಯಾಗಿ, ಖಾತೆಯಲ್ಲಿದ್ದ 98 ಸಾವಿರ ರೂ. ಹಣ ಕಡಿತಗೊಂಡಿದೆ.







Comments