top of page
News Articles
Sathyapatha News Plus


ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪತ್ನಿ ಉಷಾಕುಮಾರಿ ನಿಧನ
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರ ಧರ್ಮಪತ್ನಿ ಉಷಾಕುಮಾರಿ (56) ಅವರು ಅಸೌಖ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಾದ ಉಷಾಕುಮಾರಿ ಅವರು ಉರ್ವ ಸೈಂಟ್ ಅಲೋಶಿಯಸ್ ಹೈಸ್ಕೂಲ್ನಲ್ಲಿ 26 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಚಿನ್ಮಯ ಹೈಸ್ಕೂಲ್ ಹಾಗೂ ಉಳ್ಳಾಲದ ಭಾರತ್ ಹೈಸ್ಕೂಲ್ನಲ್ಲೂ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ಅವರು ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
6 days ago1 min read


ಸೌಜನ್ಯಾ ಹತ್ಯೆ ಪ್ರಕರಣ: ಎಸ್ಐಟಿಯಿಂದ ತಾಯಿ ಕುಸುಮಾವತಿ ರಕ್ತದ ಮಾದರಿ ಸಂಗ್ರಹ, ತನಿಖೆ ತೀವ್ರ
ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಎಸ್ಐಟಿ ಆರಂಭಿಸಿದೆ. ತನಿಖಾಧಿಕಾರಿ ಲೋಕೇಶ್ ಪಿ ಜಗಲಸರ್ ಮತ್ತು ಎಸಿಪಿ ಮನೋಜ್ ಕುಮಾರ್ ನಾಯಕ್ ನೇತೃತ್ವದ ಮಂಗಳೂರು ಎಸ್ಐಟಿ ಕಚೇರಿಯ ತಂಡವು ಬೆಳ್ತಂಗಡಿಗೆ ಆಗಮಿಸಿತು. ಅಕ್ಟೋಬರ್ 23 ರಂದು ಸಂಜೆ ಬೆಳ್ತಂಗಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮೃತ ವಿದ್ಯಾರ್ಥಿನಿಯ ತಾಯಿ ಕುಸುಮಾವತಿ ಅವರನ್ನು ಕರೆತಂದ ಅಧಿಕಾರಿ
6 days ago1 min read


ಸಾಮಾಜಿಕ ಜಾಲತಾಣ ಪೋಸ್ಟ್ ದೂರು: ಏಕಾಏಕಿ ಬಂಧಿಸದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟ್ಗಳಿಗೆ ಸಂಬಂಧಿಸಿದ ದೂರುಗಳ ಆಧಾರದ ಮೇಲೆ ಯಾವುದೇ ಪೂರ್ವಪರ ಪರಿಶೀಲನೆ ನಡೆಸದೆ ಆರೋಪಿಗಳನ್ನು ಏಕಾಏಕಿ ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ (ಡಿಜಿ ಮತ್ತು ಐಜಿಪಿ) ಸ್ಪಷ್ಟ ನಿರ್ದೇಶನ ನೀಡಿದೆ. ಅಪರಾಧ ಪ್ರಕರಣ ದಾಖಲಾದ ತಕ್ಷಣವೇ ಬಂಧನ ಮಾಡುವುದು ಸರಿಯಲ್ಲ ಎಂದಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಹಾಗೂ ಅನಗತ್ಯ ಬಂಧನ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಆಡಳಿತಾತ್ಮಕ ಮಾರ್ಗಸೂಚಿಗಳನ್ನು ನೀಡುವಂತೆ ಸೂಚಿಸಿದೆ. ಬಂಧನಕ್ಕೂ
7 days ago1 min read


ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಆನೆ ಮರಿ ಸಾವು
ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಆನೆ ಮರಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಮೃತಪಟ್ಟಿದ್ದು, ಭಾಗಮಂಡಲ ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಕೃಷಿಗೆ ಹಾನಿ ಮಾಡಿದೆ ಎನ್ನಲಾಗಿದೆ. ತೋಟವು ಎತ್ತರ ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ ಕಾಡಾನೆಗಳ ಹಿಂಡು ಮರಳಿ ಕಾಡಿನತ್ತ ತೆರಳುವ ವೇಳೆ ಆನೆ ಮರಿ ಜಾರಿ ಬಿದ್ದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯ ಮೇಲೆ ಮೆಟ್ಟಿದ ಪರಿಣಾಮ ಅದು ಮೃತಪಟ್ಟಿರಬಹುದು ಎಂದು ಶಂಕಿ
Oct 231 min read


ಉಚಿತ ಚಾನೆಲ್ ಜಾಹೀರಾತು ನಂಬಿ ₹1.78 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ!
ಮಂಗಳೂರು: ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿದರೆ ಎಲ್ಲಾ ಟಿವಿ ಚಾನೆಲ್ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಆಕರ್ಷಕ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರು ಬಿಸಾಡಿದ್ದ ಸೈಬರ್ ಶಾರ್ಕ್ಗಳ ಬಲೆಗೆ ಬಿದ್ದು ಬರೋಬ್ಬರಿ ₹1,78,191 ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ಉಚಿತ ಚಾನೆಲ್ ವೀಕ್ಷಣೆಯ ಆಸೆಯಿಂದ ಸಂಶಯಾಸ್ಪದ ಆ್ಯಪ್ ಡೌನ್ಲೋಡ್ ಮಾಡಿ, ಸೈಬರ್ ವಂಚಕರು ನೀಡಿದ ಸೂಚನೆ ಅನುಸರಿಸುತ್ತಿದ್ದಂತೆಯೇ ಆನ್ಲೈನ್ ಕನ್ನ ಹಾಕಿದ ಖದೀಮರು, ಸಂತ್ರಸ್ತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಂತ-ಹಂತವಾಗಿ ಎಗರಿಸಿದ್ದಾರೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬರುತ್ತಿದ
Oct 231 min read


ಶವ ಇಟ್ಟುಕೊಂಡು ಬಿಲ್ ವಸೂಲಿಗೆ ಬ್ರೇಕ್: ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಚಾಟಿ!
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಹೆಸರಿನಲ್ಲಿ ರೋಗಿಗಳಿಂದ ನಡೆಯುತ್ತಿರುವ ದುಬಾರಿ ಶುಲ್ಕ ವಸೂಲಿಗೆ ತಡೆ ಹಾಕಲು ರಾಜ್ಯ ಸರ್ಕಾರ ಮಹತ್ವದ ಕ್ರಮಗಳಿಗೆ ಮುಂದಾಗಿದೆ. ಆಸ್ಪತ್ರೆಗಳ ಚಿಕಿತ್ಸಾ ದರ ಹಾಗೂ ಔಷಧಗಳ ಬೆಲೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಹಲವು ಮಹತ್ವದ ಚರ್ಚೆಗಳನ್ನು ನಡೆಸಿದೆ. ರೋಗಿಗಳಿಗೆ ಅನಗತ್ಯ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ, ಇನ್ನುಮುಂದೆ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿಯ ಜೊತೆಗೆ ಔಷಧಗಳ ದರಪಟ್ಟಿಯನ್ನೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಚಿಕಿತ್ಸೆ ಆರಂಭಿಸುವ ಮುನ
Oct 231 min read


ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರಕ್ಕೆ ಕಡಿವಾಣ; ಏಕರೂಪ ದರ ನಿಗದಿಗೆ ಚರ್ಚೆ
ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಒಂದೇ ರೀತಿಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಚಿಕಿತ್ಸಾ ವೆಚ್ಚದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಚಿಕಿತ್ಸಾ ದರಗಳಿಗೆ ನಿಯಂತ್ರಣ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಒಂದೇ ರೀತಿಯ ಚಿಕಿತ್ಸೆಗೆ ವಿವಿಧ ಆಸ್ಪತ್ರೆಗಳು ವಿಭಿನ್ನ ಮೊತ್ತ ವಸೂಲಿ ಮಾಡುತ್ತಿರುವುದರಿಂದ ರೋಗಿಗಳು ಮತ್ತು ಕುಟುಂಬಸ್ಥರು ಗೊಂದಲಕ್ಕೊಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮುಖ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಏಕರೂಪದ ದರ ನಿಗದಿಪಡಿಸುವ ಸಾಧ್ಯತೆ ಕುರಿತು ಖಾಸಗಿ ಆಸ್ಪತ್ರೆಗಳ ಒಕ್
Oct 231 min read


ಮೂಡುಬಿದಿರೆಯಲ್ಲಿ ದುರಂತ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಪ್ರವಹಿಸಿ ತಾಯಿ–ಮಗ ಸಾವು!
ಮೂಡುಬಿದಿರೆ: ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ತಾಯಿ–ಮಗ ಇಬ್ಬರೂ ವಿದ್ಯುತ್ ಶಾಕ್ಗೆ ಬಲಿಯಾದ ದಾರುಣ ಘಟನೆ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ ಶೋನ್ ಮಸ್ಕರೇನಸ್ (18) ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಬಟ್ಟೆ ಒಣಗಿಸುತ್ತಿದ್ದ ವೇಳೆ ಶೋನ್ಗೆ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ. ಮಗನನ್ನು ರಕ್ಷಿಸಲು ಮುಂದಾದ ತಾಯಿ ಮರ್ಸಿ ಅವರಿಗೂ ವಿದ್ಯುತ್ ಪ್ರವಹಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಟ್ಟೆ
Oct 221 min read


ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ಗೆ ಕಾರು ಡಿಕ್ಕಿ; ಪ್ರಥಮ ಪಿಯು ವಿದ್ಯಾರ್ಥಿ ಸಾವು
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯ ಕರ್ಬಸಂಕ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೆಲ್ಯಾಡಿಯಲ್ಲಿ ‘ಪ್ಲವರ್ಸ್ ಹೋಟೆಲ್’ ನಡೆಸುತ್ತಿರುವ ಜೋಜೋ ಟಿ. ಜೋರ್ಜ್ ಅವರ ಪುತ್ರ, 16 ವರ್ಷದ ಅಶ್ವಿನ್ ಜೋಜೋ ಜೋರ್ಜ್ ಮೃತ ದುರ್ದೈವಿ. ಇವರು ಪುತ್ತೂರಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ಗೆ ಅಶ್ವಿನ್ ಅವರ ಕಾರು ಮುಂಜಾನೆ ವೇಳೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ
Oct 221 min read


ಕಲ್ಮಡ್ಕ ಕಾಡುಹಂದಿ ಬೇಟೆಗಾಗಿ ವಿದ್ಯುತ್ ತಂತಿ ಪ್ರಕರಣ: ಇಬ್ಬರ ಸಾವಿನ ಬಳಿಕ ತಲೆಮರೆಸಿಕೊಂಡಿದ್ದ ಮಧುಸೂದನ ಭಟ್ ಪೊಲೀಸರಿಗೆ ಶರಣು!
ಸುಳ್ಯ: ಕಾಡುಹಂದಿ ಬೇಟೆಗಾಗಿ ವಿದ್ಯುತ್ ತಂತಿಗೆ ಕರೆಂಟ್ ಹರಿಸಿ, ಅದನ್ನು ಅರಿಯದೆ ಮೀನು ಹಿಡಿಯಲು ತೆರಳಿದ್ದ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎನ್ನಲಾದ ಕಲ್ಮಡ್ಕದ ಮಧುಸೂದನ ಭಟ್ ಬೆಳ್ಳಾರೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಅಕ್ಟೋಬರ್ 12ರಂದು ಕಲ್ಮಡ್ಕ ಗ್ರಾಮದ ಹೊಳೆಕೆರೆ ತೋಟದ ಸಮೀಪ ಈ ಘಟನೆ ನಡೆದಿತ್ತು. ಕಾಡುಹಂದಿ ಬೇಟೆಯಾಡುವ ಉದ್ದೇಶದಿಂದ ಮಧುಸೂದನ ಭಟ್ ಅವರು ವಿದ್ಯುತ್ ತಂತಿಗೆ ಸಂಪರ್ಕ ಕಲ್ಪಿಸಿ, ಕಾಡುಹಂದಿ ಸಂಚರಿಸುವ ದಾರಿಯಲ್ಲಿ ಅಡ್ಡಲಾಗಿ ಹಾಕಿದ್ದರು ಎನ್ನಲಾಗಿದೆ. ಇದೇ ವೇಳೆ ಈ ವಿಚಾರ ತಿಳಿಯದ ಸ್ಥಳೀಯ
Oct 211 min read


ಬೆಳ್ಳಾರೆ–ಸವಣೂರು ರಸ್ತೆಯಲ್ಲಿ ಭೀಕರ ಅಪಘಾತ: ಸ್ಟೇ ವೈರ್ಗೆ ಬೈಕ್ ಡಿಕ್ಕಿ, ಕುದ್ಮಾರು ಯುವಕ ಸ್ಥಳದಲ್ಲೇ ಸಾವು!
ಪುತ್ತೂರು: ಬೆಳ್ಳಾರೆ–ಸವಣೂರು ರಸ್ತೆಯ ಕನ್ನಡಕುಮೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಾಯಗೊಂಡ ಘಟನೆ ಅಕ್ಟೋಬರ್ 20ರ ರಾತ್ರಿ ನಡೆದಿದೆ. ಮೃತ ಯುವಕನನ್ನು ಕಡಬ ಕುದ್ಮಾರು ನಿವಾಸಿ ಧನಂಜಯ ಎಂದು ಗುರುತಿಸಲಾಗಿದೆ. ಧನಂಜಯ ತನ್ನ ಸ್ನೇಹಿತ ರೋಷನ್ ಅವರನ್ನು ಸಹಸವಾರನಾಗಿ ಕೂರಿಸಿಕೊಂಡು KA-19-HK-0323 ನೋಂದಣಿಯ ಬೈಕ್ನಲ್ಲಿ ಬೆಳ್ಳಾರೆ ಕಡೆಯಿಂದ ಸವಣೂರು ಕಡೆಗೆ ತೆರಳುತ್ತಿದ್ದ ಎನ್ನಲಾಗಿದೆ. ಕನ್ನಡಕುಮೇರಿ ಬಳಿ ತಲುಪುತ್ತಿದ್ದಂತೆ ಬೈಕ್ನ ನಿಯಂತ್ರಣ ತಪ್ಪಿದ್ದು, ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬದ ಸ್ಟೇ ವೈರ್ಗೆ ಬೈಕ್ ಡಿಕ
Oct 211 min read


ಕಾರ್ಲಾಡಿ ಮನೆಯಲ್ಲಿ ಸಂಭ್ರಮದ ಆಯುಧ ಪೂಜೆ ಹಾಗೂ ವಾಹನ ಪೂಜೆ
ಕಾರ್ಲಾಡಿ, ಅಕ್ಟೋಬರ್ 20: ಕಾರ್ಲಾಡಿ ಮನೆಯ ಆವರಣದಲ್ಲಿ ಇಂದು ಆಯುಧ ಪೂಜೆ ಹಾಗೂ ವಾಹನ ಪೂಜೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಗಣ್ಯರು ಹಾಗೂ ಹಿತೈಷಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಕೆಲಂಬೀರಿಯ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷರಾದ ಸತೀಶ್ ಮಾರ್ಕಾಜೆ, ಸುಳ್ಯ ಡಿಸಿಸಿ ಬ್ಯಾಂಕ್ ಪ್ರಬಂಧಕರಾದ ಸಂತೋಷ್ ಮರಕ್ಕಡ, ಎರ್ಮೆಮೆತ್ತಿಮಾರು ತರವಾಡು ಮನೆಯ ಜಯರಾಮ್ ಸುವರ್ಣ, ಪಿಡಬ್ಲ್ಯುಡಿ ಎಂಜಿನಿಯರ್ ಜನಾರ್ಧನ್, ನಾಗಬ್ರಹ್ಮ ಆದಿ ಮೊಗ್ಗೆರ್ಕಳ ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ
Oct 201 min read


ಕೆಎಸ್ಆರ್ಟಿಸಿ ದಸರಾ ವಿಶೇಷ ಪ್ರವಾಸ ಪ್ಯಾಕೇಜ್ ಅಕ್ಟೋಬರ್ 25ರವರೆಗೆ ವಿಸ್ತರಣೆ
ಮಂಗಳೂರು ಹಾಗೂ ಉಡುಪಿ ವಿಭಾಗಗಳಿಂದ ವಿವಿಧ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ದಸರಾ ವಿಶೇಷ ಬಸ್ ಪ್ರವಾಸ ಪ್ಯಾಕೇಜ್ಗಳನ್ನು ಅಕ್ಟೋಬರ್ 25 ರವರೆಗೆ ವಿಸ್ತರಿಸಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು ಆದೇಶಿಸಿದೆ. ಆರಂಭದಲ್ಲಿ ಈ ಪ್ರವಾಸಗಳನ್ನು ಅಕ್ಟೋಬರ್ 11 ರಿಂದ 20 ರವರೆಗೆ ಮಾತ್ರ ನಡೆಸಲು ಯೋಜಿಸಲಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ ದಿನಾಂಕವನ್ನು ಲಂಬಿಸಲಾಗಿದೆ. ಮಂಗಳೂರು ಪ್ಯಾಕೇಜ್ ("ದಸರಾ ನವದುರ್ಗಾ ದರ್ಶನ"): ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆ
Oct 201 min read


ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಉಗ್ರರ ಅಡಗುತಾಣ ಭೇದಿಸಿದ ಭದ್ರತಾ ಪಡೆಗಳು: ಶಸ್ತ್ರಾಸ್ತ್ರ ವಶ
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಉಗ್ರರ ಗುಹೆಯಲ್ಲಿದ್ದ ಅಡಗುತಾಣವನ್ನು ಪತ್ತೆ ಮಾಡಿದೆ. ಭಾರತೀಯ ಸೇನೆಯ 60ನೇ ರಾಷ್ಟ್ರೀಯ ರೈಫಲ್ಸ್ ತುಕಡಿಯು ಖಚಿತ ಮಾಹಿತಿಯ ಮೇರೆಗೆ ಕೋತ್ರಾಂಕಾ ತಹಸಿಲ್ನ 'ಚೋರ್ ಹಿಲ್' ಬಳಿ ಶೋಧ ನಡೆಸಿ ಈ ಕಾರ್ಯಾಚರಣೆ ಕೈಗೊಂಡಿದೆ. ಈ ಗುಹೆಯಿಂದ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ ಗ್ರೆನೇಡ್ಗಳು, ಎಕೆ-47 ಮ್ಯಾಗಜೀನ್ ಹಾಗೂ 18 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರು ನಡೆಸಲು ಉದ್ದೇಶಿಸಿದ್ದ ಸಂಭಾವ್ಯ ವಿಧ್ವಂಸಕ ಕೃತ್ಯಗಳನ್ನು ಈ ಮೂಲಕ ಯಶಸ್ವಿಯಾಗಿ ತಡೆಯಲಾಗಿದ
Oct 201 min read


ಉಪ್ಪಿನಂಗಡಿ: ಬೈಕ್ ತಡೆದು ಚೂರಿ ತೋರಿಸಿ ನಗದು, ಮೊಬೈಲ್ ದರೋಡೆ; ಮೂವರ ವಿರುದ್ಧ ಪ್ರಕರಣ ದಾಖಲು
ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಶುಕ್ರವಾರ ಬೈಕ್ ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ, ಇಬ್ಬರಿಂದ ಎರಡು ಮೊಬೈಲ್ ಹಾಗೂ ನಗದು ದರೋಡೆ ಮಾಡಿರುವ ಘಟನೆ ನಡೆದಿದೆ. ಕಡಬ ತಾಲ್ಲೂಕಿನ ಕೋನಾಜೆ ನಿವಾಸಿ ಮಿಥಿಲೇಶ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತನ್ವೀಶ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಥಿಲೇಶ್ ಹಾಗೂ ಅವರ ಅತ್ತೆ ಮಗಾಧೇವಿ ಬೈಕ್ನಲ್ಲಿ ಬರುತ್ತಿದ್ದಾಗ ಆರೋಪಿಗಳು ಕಾರಿನಲ್ಲಿ ಬಂದು ದರೋಡೆ ಎಸಗಿದ್ದಾರೆ. "ನನ್ನ ಹಣ ಎಲ್ಲಿ, ಯಾಕೆ ಕೊಟ್ಟಿಲ್ಲ" ಎಂದು ಪ್ರಶ್ನಿಸಿ ಚೂರಿ ತೋರಿಸಿ ಬೆದರಿಸಿ, ಜೇಬಿನಲ್ಲಿದ್ದ ಒಟ್ಟು 5 ಸಾವಿರ ರೂ. ಮೌಲ್ಯದ ಎರಡು
Oct 191 min read


ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹೊರಭಾಗದಲ್ಲಿ ಅಂಗಡಿ ವಿಚಾರ: ಹೂವಿನ ವ್ಯಾಪಾರಿಗಳ ನಡುವೆ ಮಾರಾಮಾರಿ
ಬೆಳ್ತಂಗಡಿ: ಪ್ರಸಿದ್ಧ ದೇವಸ್ಥಾನವಾದ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹೊರಭಾಗದಲ್ಲಿರುವ ಅಂಗಡಿಯ ವಿಚಾರವಾಗಿ ಹೂವಿನ ವ್ಯಾಪಾರಿಗಳ ನಡುವೆ ತೀವ್ರ ಸ್ವರೂಪದ ಮಾರಾಮಾರಿ ನಡೆದಿರುವ ಘಟನೆ ವರದಿಯಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಟ್ರಸ್ಟ್ಗೆ ಸೇರಿದ ಅಂಗಡಿಗಳ ಅಧಿಕೃತ ಏಲಂ ಪ್ರಕ್ರಿಯೆ ನಡೆದಿತ್ತು. ಈ ಪ್ರಕ್ರಿಯೆಯ ಮೂಲಕ ರಾಘವ ಎಂಬುವವರು ಹೂವಿನ ಸ್ಟಾಲ್ನ ಹಕ್ಕನ್ನು ಪಡೆದುಕೊಂಡಿದ್ದರು. ಆದರೆ, ಏಲಂ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಗೊಂಡ ಬಳಿಕವೂ, ಈ ಹಿಂದೆ ಅದೇ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದ
Oct 181 min read


ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ: ರೋಗಿಗಳಿಗೆ ಬಲವಾದ ಆರ್ಥಿಕ ಆಸರೆ
ಕೇಂದ್ರ ಸರ್ಕಾರವು 137 ಬಗೆಯ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲಿನ ವ್ಯಾಪಾರ ಲಾಭಾಂಶವನ್ನು ಶೇ. 30ಕ್ಕೆ ಮಿತಿಗೊಳಿಸಿದ್ದು, ನವೆಂಬರ್ 9ರಿಂದ ಪರಿಷ್ಕೃತ ಬೆಲೆಗಳು ಜಾರಿಗೆ ಬರಲಿವೆ. ಇದರಿಂದಾಗಿ ಪೆಂಬ್ರೊಲಿಜುಮಾಬ್, ಓಸಿಮರ್ಟಿನಿಬ್ ಸೇರಿದಂತೆ ಪ್ರಮುಖ ಔಷಧಿಗಳ ಬೆಲೆಯಲ್ಲಿ ಭಾರಿ ಕಡಿತವಾಗಲಿದೆ. ಸ್ತನ, ಪ್ರಾಸ್ಟೇಟ್ ಹಾಗೂ ಅಂಡಾಶಯ ಕ್ಯಾನ್ಸರ್ ಚಿಕಿತ್ಸೆಗಳು ಇನ್ನು ಮುಂದೆ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ. ಪರಿಷ್ಕೃತ ಬೆಲೆಯನ್ನು ಔಷಧ ಅಂಗಡಿಗಳು ಹಾಗೂ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದ ದೇಶದ ಲಕ್ಷಾಂತ
Oct 181 min read


MRPL ಸ್ಫೋಟ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು
ಮಂಗಳೂರು: ಸೆಪ್ಟೆಂಬರ್ 30ರಂದು ಮಂಗಳೂರಿನ MRPLನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಗುತ್ತಿಗೆ ಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು 38 ವರ್ಷದ ರಾಜೇಶ್ ಡಿ’ಸಿಲ್ವಾ (ರಾಜೇಶ್ ಬ್ಯಾಪ್ಟಿಸ್ಟ್) ಎಂದು ಗುರುತಿಸಲಾಗಿದೆ. ಸ್ಫೋಟ ಸಂಭವಿಸಿದ ಘಟಕದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಅವರಿಗೆ ದೇಹದ ಸುಮಾರು 35ರಷ್ಟು ಭಾಗ ಸುಟ್ಟು ಗಂಭೀರ ಗಾಯಗಳಾಗಿತ್ತು. ಘಟನೆಯ ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 18 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶನಿವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಾಜೇಶ್ ಅವರು ಸ
Oct 171 min read
Archive
bottom of page



