ಉಚಿತ ಚಾನೆಲ್ ಜಾಹೀರಾತು ನಂಬಿ ₹1.78 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ!

ಮಂಗಳೂರು: ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿದರೆ ಎಲ್ಲಾ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಆಕರ್ಷಕ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರು ಬಿಸಾಡಿದ್ದ ಸೈಬರ್ ಶಾರ್ಕ್‌ಗಳ ಬಲೆಗೆ ಬಿದ್ದು ಬರೋಬ್ಬರಿ ₹1,78,191 ಹಣ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
ಉಚಿತ ಚಾನೆಲ್ ವೀಕ್ಷಣೆಯ ಆಸೆಯಿಂದ ಸಂಶಯಾಸ್ಪದ ಆ್ಯಪ್ ಡೌನ್‌ಲೋಡ್ ಮಾಡಿ, ಸೈಬರ್ ವಂಚಕರು ನೀಡಿದ ಸೂಚನೆ ಅನುಸರಿಸುತ್ತಿದ್ದಂತೆಯೇ ಆನ್‌ಲೈನ್ ಕನ್ನ ಹಾಕಿದ ಖದೀಮರು, ಸಂತ್ರಸ್ತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಂತ-ಹಂತವಾಗಿ ಎಗರಿಸಿದ್ದಾರೆ
ತಾನು ಸೈಬರ್ ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬರುತ್ತಿದ್ದಂತೆಯೇ ಸಂತ್ರಸ್ತ ವ್ಯಕ್ತಿ ಮಂಗಳೂರಿನ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಾರ್ವಜನಿಕರು ಇಂತಹ ಅಪರಿಚಿತ ಲಿಂಕ್ ಹಾಗೂ ಉಚಿತ ಆ್ಯಪ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಮನವಿ ಮಾಡಿದ್ದಾರೆ.







Comments