;
top of page

ಕಲ್ಮಡ್ಕ ಕಾಡುಹಂದಿ ಬೇಟೆಗಾಗಿ ವಿದ್ಯುತ್ ತಂತಿ ಪ್ರಕರಣ: ಇಬ್ಬರ ಸಾವಿನ ಬಳಿಕ ತಲೆಮರೆಸಿಕೊಂಡಿದ್ದ ಮಧುಸೂದನ ಭಟ್ ಪೊಲೀಸರಿಗೆ ಶರಣು!

Oct 21
1 min read

ಸುಳ್ಯ: ಕಾಡುಹಂದಿ ಬೇಟೆಗಾಗಿ ವಿದ್ಯುತ್ ತಂತಿಗೆ ಕರೆಂಟ್ ಹರಿಸಿ, ಅದನ್ನು ಅರಿಯದೆ ಮೀನು ಹಿಡಿಯಲು ತೆರಳಿದ್ದ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎನ್ನಲಾದ ಕಲ್ಮಡ್ಕದ ಮಧುಸೂದನ ಭಟ್ ಬೆಳ್ಳಾರೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.


ಅಕ್ಟೋಬರ್ 12ರಂದು ಕಲ್ಮಡ್ಕ ಗ್ರಾಮದ ಹೊಳೆಕೆರೆ ತೋಟದ ಸಮೀಪ ಈ ಘಟನೆ ನಡೆದಿತ್ತು. ಕಾಡುಹಂದಿ ಬೇಟೆಯಾಡುವ ಉದ್ದೇಶದಿಂದ ಮಧುಸೂದನ ಭಟ್ ಅವರು ವಿದ್ಯುತ್ ತಂತಿಗೆ ಸಂಪರ್ಕ ಕಲ್ಪಿಸಿ, ಕಾಡುಹಂದಿ ಸಂಚರಿಸುವ ದಾರಿಯಲ್ಲಿ ಅಡ್ಡಲಾಗಿ ಹಾಕಿದ್ದರು ಎನ್ನಲಾಗಿದೆ.


ಇದೇ ವೇಳೆ ಈ ವಿಚಾರ ತಿಳಿಯದ ಸ್ಥಳೀಯ ನಿವಾಸಿಗಳಿಬ್ಬರು ರಾತ್ರಿ ತೋಡಿನಲ್ಲಿ ಮೀನು ಹಿಡಿಯಲು ತೆರಳಿದ್ದರು. ವಿದ್ಯುತ್ ಹರಿದಿದ್ದ ತಂತಿ ಸಂಪರ್ಕಕ್ಕೆ ಬಂದ ಪರಿಣಾಮ ಇಬ್ಬರೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು.


ಘಟನೆ ಬಳಿಕ ಆರೋಪಿ ಮಧುಸೂದನ ಭಟ್ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದರು. ಪ್ರಕರಣದಲ್ಲಿ ವಿದ್ಯುತ್ ತಂತಿ ಅಳವಡಿಸಿ ಕರೆಂಟ್ ಹರಿಸಲು ಸಹಾಯ ಮಾಡಿದ್ದ ಎನ್ನಲಾದ ಸ್ಥಳೀಯ ಬೇಟೆಗಾರನೊಬ್ಬನನ್ನು ಪೊಲೀಸರು ಬಂಧಿಸಿದ್ದರು.


ಆದರೆ ಪ್ರಮುಖ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಬಂಧನಕ್ಕೆ ಒತ್ತಡ ಹೆಚ್ಚಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳು ಅಕ್ಟೋಬರ್ 22ರಂದು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದವು ಎನ್ನಲಾಗಿದೆ.


ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಮಧುಸೂದನ ಭಟ್ ಬೆಳ್ಳಾರೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.



Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page