ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಉಗ್ರರ ಅಡಗುತಾಣ ಭೇದಿಸಿದ ಭದ್ರತಾ ಪಡೆಗಳು: ಶಸ್ತ್ರಾಸ್ತ್ರ ವಶ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಉಗ್ರರ ಗುಹೆಯಲ್ಲಿದ್ದ ಅಡಗುತಾಣವನ್ನು ಪತ್ತೆ ಮಾಡಿದೆ. ಭಾರತೀಯ ಸೇನೆಯ 60ನೇ ರಾಷ್ಟ್ರೀಯ ರೈಫಲ್ಸ್ ತುಕಡಿಯು ಖಚಿತ ಮಾಹಿತಿಯ ಮೇರೆಗೆ ಕೋತ್ರಾಂಕಾ ತಹಸಿಲ್‌ನ 'ಚೋರ್ ಹಿಲ್' ಬಳಿ ಶೋಧ ನಡೆಸಿ ಈ ಕಾರ್ಯಾಚರಣೆ ಕೈಗೊಂಡಿದೆ.
ಈ ಗುಹೆಯಿಂದ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ ಗ್ರೆನೇಡ್‌ಗಳು, ಎಕೆ-47 ಮ್ಯಾಗಜೀನ್ ಹಾಗೂ 18 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರು ನಡೆಸಲು ಉದ್ದೇಶಿಸಿದ್ದ ಸಂಭಾವ್ಯ ವಿಧ್ವಂಸಕ ಕೃತ್ಯಗಳನ್ನು ಈ ಮೂಲಕ ಯಶಸ್ವಿಯಾಗಿ ತಡೆಯಲಾಗಿದೆ. ಸದ್ಯ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಪ್ರದೇಶದಲ್ಲಿ ಭದ್ರತೆ ಹಾಗೂ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.







Comments