ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!
- sathyapathanewsplu
- 1 day ago
- 1 min read

ಹಳದಿ ಲೋಹದ ಖರೀದಿಗೆ ಕಾಯುತ್ತಿದ್ದ ಗ್ರಾಹಕರಿಗೆ ಮಾರುಕಟ್ಟೆ ದೊಡ್ಡ ಉಡುಗೊರೆ ನೀಡಿದೆ. ಕಳೆದ ಎರಡು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಚಿನ್ನದ ದರ ಇಂದು ಕೂಡ ಗಣನೀಯವಾಗಿ ಇಳಿಕೆಯಾಗಿದ್ದು, ಬಂಗಾರ ಪ್ರಿಯರಲ್ಲಿ ಹರ್ಷ ತಂದಿದೆ. ಬೆಲೆ ಇಳಿಕೆಯಾಗುತ್ತಿದ್ದಂತೆ ಜುವೆಲ್ಲರಿ ಮಳಿಗೆಗಳತ್ತ ಜನಸಾಗರವೇ ಹರಿಯುತ್ತಿದೆ.
ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 790 ರೂಪಾಯಿ ಇಳಿಕೆಯಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 862 ರೂಪಾಯಿಗಳಷ್ಟು ಕುಸಿದಿದೆ. ಅಚ್ಚರಿಯ ಬೆಳವಣಿಗೆ ಎಂಬಂತೆ, ಬೆಳ್ಳಿಯ ದರದಲ್ಲಿ ಏಕಾಏಕಿ 45,000 ರೂಪಾಯಿಗಳಷ್ಟು ಬೃಹತ್ ಕುಸಿತ ಕಂಡುಬಂದಿದೆ. ಜನವರಿ 30 ಮತ್ತು 31ರಂದು ದರ ಇಳಿಕೆಯಾಗಿದ್ದ ಬೆನ್ನಲ್ಲೇ ಇಂದು ಕೂಡ ಬೆಲೆ ಇಳಿಕೆಯಾಗಿರುವುದು ಹೂಡಿಕೆದಾರರಿಗೆ ವರದಾನವಾಗಿದೆ.
ಇಂದಿನ ಚಿನ್ನದ ದರ ವಿವರ (22 ಕ್ಯಾರೆಟ್):
* 1 ಗ್ರಾಂ: 14,720 ರೂಪಾಯಿ
* 8 ಗ್ರಾಂ: 1,17,760 ರೂಪಾಯಿ
* 10 ಗ್ರಾಂ: 1,47,200 ರೂಪಾಯಿ
* 100 ಗ್ರಾಂ: 14,72,000 ರೂಪಾಯಿ






Comments