ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಪೈಲಟ್ ಸೇರಿ ಐವರು ಕನ್ನಡಿಗರ ದುರ್ಮರಣ

ಚಮೋಲಿ/ಬೆಳಗಾವಿ (ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಶುಕ್ರವಾರ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಪೈಲಟ್ ಸೇರಿದಂತೆ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತರ ಪೈಕಿ ಐವರು ಕರ್ನಾಟಕ ಮೂಲದ ಯಾತ್ರಿಕರಾಗಿದ್ದಾರೆ.
ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಈ ಹೆಲಿಕಾಪ್ಟರ್ ಮಧ್ಯಾಹ್ನ 1:14 ರ ಸುಮಾರಿಗೆ ಬದ್ರಿನಾಥ ಧಾಮದಿಂದ ಡೆಹ್ರಾಡೂನ್‌ನ ಸಹಸ್ತ್ರಧಾರಕ್ಕೆ ಹೊರಟಿತ್ತು. ಆದರೆ, ಟೇಕ್‌ಆಫ್ ಆದ 7-8 ನಿಮಿಷಗಳಲ್ಲೇ ಜೋಶಿಮಠ ಕಣಿವೆಯ ಬಳಿ ಹವಾಮಾನ ವೈಪರೀತ್ಯ ಉಂಟಾಗಿ, ಹೆಲಿಕಾಪ್ಟರ್‌ನ ಸಂಪರ್ಕ ಕಡಿತಗೊಂಡಿತು. ಪಾಂಡುಕೇಶ್ವರ ಗ್ರಾಮದ ಮೇಲ್ಭಾಗದ ಜೆಪಿ ಪವರ್ ಹೌಸ್ ಕಡೆಗಿನ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.
ಅಪಘಾತದಲ್ಲಿ ಪೈಲಟ್ ಕ್ಯಾಪ್ಟನ್ ಹಿಮಾನ್ಶು ಸಭರ್ವಾಲ್ ಹಾಗೂ ಬೆಂಗಳೂರಿನಿಂದ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ, ಹೆಚ್.ಎಸ್. ನಾಗರಾಜ, ಪ್ರತಾಪ್ ಬಚ್ಚಿಹಳ್ಳಿ, ಸುಧೀರ್ ಕೆ. ಮತ್ತು ಶಂಕರಗೌಡ ವಿ.ಬಿ. ಅಸುನೀಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಪೊಲೀಸ್, SDRF, ಭಾರತೀಯ ಸೇನೆ ಮತ್ತು ITBP ಜಂಟಿ ತಂಡಗಳು ದುರ್ಗಮ ಹವಾಮಾನದಲ್ಲೂ ತಕ್ಷಣ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.







Comments