;
top of page

ಸಿಗರೇಟ್ ಬೆಲೆ ಏರಿಕೆ ಬಿಸಿ

  • Feb 2
  • 1 min read

ಬೆಂಗಳೂರು: ಧೂಮಪಾನಿಗಳಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕೇಂದ್ರ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಜಾರಿಗೆ ತಂದ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಸಿಗರೇಟ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ವಿವಿಧ ಬ್ರ್ಯಾಂಡ್‌ಗಳ ಸಿಗರೇಟ್ ಪ್ಯಾಕ್‌ಗಳ ಮೇಲೆ ಕನಿಷ್ಠ 22 ರೂ.ನಿಂದ ಗರಿಷ್ಠ 55 ರೂ.ವರೆಗೆ ಬೆಲೆ ಏರಿಕೆ ಮಾಡಲಾಗಿದೆ.

ಸರ್ಕಾರದ ಆದೇಶ ಹೊರಬಿದ್ದ ತಕ್ಷಣವೇ ವಿತರಕರು ಹಳೆಯ ಸ್ಟಾಕ್‌ಗಳಿಗೂ ಹೊಸ ದರವನ್ನು ನಿಗದಿಪಡಿಸಿ ಮಾರಾಟ ಆರಂಭಿಸಿದ್ದಾರೆ. ಇಂದಿನಿಂದ ತಯಾರಿಕಾ ಕಂಪನಿಗಳು ಹೊಸ MRP (ಗರಿಷ್ಠ ಮಾರಾಟ ಬೆಲೆ) ಹೊಂದಿರುವ ಪ್ಯಾಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ದೇಶಾದ್ಯಂತ ಇರುವ ಸುಮಾರು 9,000 ಸ್ಟಾಕಿಸ್ಟ್‌ಗಳ ಮೂಲಕ ಈ ಹೊಸ ದರ ಜಾರಿಗೆ ಬರುತ್ತಿದ್ದು, ಚಿಲ್ಲರೆ ಮಾರಾಟಗಾರರು ಈಗಾಗಲೇ ಹೆಚ್ಚಿನ ದರಕ್ಕೆ ಸಿಗರೇಟ್ ಮಾರಾಟ ಮಾಡುತ್ತಿದ್ದಾರೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page