ಪುತ್ತೂರು: 53 ಲಕ್ಷ ಮೌಲ್ಯದ 106 ಕೆಜಿ ಗಾಂಜಾ ಜಪ್ತಿ; ಇಬ್ಬರು ಆರೋಪಿಗಳ ಬಂಧನ
- sathyapathanewsplu
- 2 days ago
- 1 min read

ಪುತ್ತೂರು: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಗುರಿ ಹೊಂದಿರುವ ಪುತ್ತೂರು ಪೊಲೀಸರು ಭಾನುವಾರ ಸಂಜೆ ಭರ್ಜರಿ ಕಾರ್ಯಾಚರಣೆ ನಡೆಸಿ, 53 ಲಕ್ಷ ರೂಪಾಯಿ ಮೌಲ್ಯದ 106 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಸಿನಿಮೀಯ ಮಾದರಿಯಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಬೆಳ್ತಂಗಡಿಯ ರಫೀಕ್ (37) ಮತ್ತು ಅಬ್ದುಲ್ ಸಾದಿಕ್ (37) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸ್‌ಐ ಗುಣಪಾಲ ಜೆ. ನೇತೃತ್ವದ ತಂಡ, ಕಾರು ಮತ್ತು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 73 ಕಟ್ಟುಗಳ ಗಾಂಜಾವನ್ನು ಜಪ್ತಿ ಮಾಡಿದೆ. ಈ ಜಾಲವು ಕೇರಳ ಹಾಗೂ ದಕ್ಷಿಣ ಕನ್ನಡದ ವಿವಿಧೆಡೆ ಗಾಂಜಾ ವಿತರಿಸಲು ಸಂಚು ರೂಪಿಸಿತ್ತು. ಪೊಲೀಸರ ಈ ಕೆಚ್ಚೆದೆಯ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.





Comments