ಬೆಳ್ಳಾರೆ: ಬೈಕ್ ಮೋರಿಗೆ ಬಿದ್ದು ಮಗ ಸಾವು, ತಂದೆಗೆ ಗಂಭೀರ ಗಾಯ
- sathyapathanewsplu
- 2 days ago
- 1 min read

ಬೆಳ್ಳಾರೆ: ಇಲ್ಲಿನ ಸಮೀಪದ ಕಲ್ಲೋಣಿ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಮೋರಿಯಿಂದ ಕೆಳಗೆ ಬಿದ್ದ ಭೀಕರ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕಡಬದ ಮರ್ದಾಳ ನಿವಾಸಿ ಎಂದು ಗುರುತಿಸಲಾಗಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಬರಿಮಲೆ ಪ್ರಸಾದವನ್ನು ಸುಳ್ಯಕ್ಕೆ ತಲುಪಿಸಲು ತಂದೆ-ಮಗ ಬೈಕಿನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಗ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳ್ಳಾರೆ ಸಮೀಪದ ಕಲ್ಲೋಣಿಯಲ್ಲಿ ನಡೆದಿದೆ. ಮರ್ದಾಳ ಸಮೀಪದ ಕೊಲ್ಯ ನಿವಾಸಿ ನಿಶಾಂತ್ ಮೃತಪಟ್ಟ ದುರ್ದೈವಿ ಯುವಕ. ಇವರ ತಂದೆ ಮೋನಪ್ಪ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.





Comments