ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
- sathyapathanewsplu
- 4 days ago
- 1 min read

ಜಾಲ್ಲೂರು ಗ್ರಾಮದ ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವವು ಫೆಬ್ರವರಿ 18ರಿಂದ 20ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಹರಿಪ್ರಕಾಶ್ ಅಡ್ಕಾರು ವಹಿಸಿದ್ದರು. ಈ ಸಂದರ್ಭದಲ್ಲೇ ಸಮಿತಿಯ ಸದಸ್ಯರಾದ ಪುರುಷೋತ್ತಮ, ನಂಗಾರು, ವಿಜಯಕುಮಾರ್ ನರಿಯೂರು, ಶ್ರೀಮತಿ ಪವಿತ್ರಾ ಭಾರತಿ, ಶ್ರೀಮತಿ ಸೌಮ್ಯಲಕ್ಷ್ಮಿ ಬೈತಡ್ಕ, ಮೊಕ್ತೆಸರ ಗುರುರಾಜ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉತ್ಸವ ಸಮಿತಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಬೈತಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಧನುಷ್ ಕುಕ್ಕೆಟ್ಟಿ ಹಾಗೂ ವೇದಾ ಹರೀಶ್ ಶೆಟ್ಟಿ ನೆಕ್ರಾಜೆ, ಚಂದ್ರಕುಮಾರ ಕಾಳಮ್ಮನೆ, ಸುಕೇಶ್ ಪದವು, ಕೋಶಾಧ್ಯಕ್ಷ ಗೋಪಾಲ ಕಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜೊತೆಗೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಅಧ್ಯಕ್ಷ ಸುಧಾಕರ ಕಾಮತ್, ಸಂಯೋಜಕ ನ. ಸೀತಾರಾಮ ಹಾಗೂ ಶ್ರೀ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಮೋಹನ್ ನಂಗಾರು, ಭಾಸ್ಕರ ಅಡ್ಕಾರು, ಗಣೇಶ್ ರೈ ಕುಕ್ಕಂದೂರು, ಮುರಳಿಧರ ಅಡ್ಕಾರು ಮತ್ತು ಕಚೇರಿ ವ್ಯವಸ್ಥಾಪಕ ಹರ್ಷಿತ್ ದೇರಾಜೆ ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಮಾಜಿ ಅಧ್ಯಕ್ಷರುಗಳು, ವಿವಿಧ ಪದಾಧಿಕಾರಿಗಳು, ಬೈಲುವಾರು ಸಮಿತಿಯ ಸಂಚಾಲಕರುಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾತ್ರೋತ್ಸವದ ಯಶಸ್ಸಿಗೆ ಶುಭಾಶಯ ಕೋರಿದರು.





Comments