ಪೆಟ್ರೋಲ್ ಡೀಸೆಲ್ ಗಳಿಗೆ ಭವಿಷ್ಯವಿಲ್ಲ: ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ದೀರ್ಘಾವಧಿಯಲ್ಲಿ ಭವಿಷ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪೆಟ್ರೋಲ್ ಅವಲಂಬನೆಯು ಪರಿಸರ ಮಾಲಿನ್ಯ ಮತ್ತು ಆಮದು ವೆಚ್ಚವನ್ನು ಹೆಚ್ಚಿಸುತ್ತಿದ್ದು, ಆಟೋಮೊಬೈಲ್ ಉದ್ಯಮವು ತಕ್ಷಣವೇ ವಿದ್ಯುತ್, ಸಿಎನ್‌ಜಿ ಮತ್ತು ಜೈವಿಕ ಇಂಧನಗಳಂತಹ ಶುದ್ಧ ಇಂಧನಗಳತ್ತ ಪರಿವರ್ತನೆಗೊಳ್ಳುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೈಡ್ರೋಜನ್ ಅನ್ನು ಭವಿಷ್ಯದ ಇಂಧನ ಎಂದು ಕರೆದ ಸಚಿವರು, ಈಗಾಗಲೇ ದೇಶದ 10 ಮಾರ್ಗಗಳಲ್ಲಿ ಹೈಡ್ರೋಜನ್ ಬಸ್‌ಗಳ ಸಂಚಾರ ಆರಂಭವಾಗಿದೆ ಎಂದರು. ಟಾಟಾ ಮತ್ತು ಮಹೀಂದ್ರಾ ಅಂತಹ ಕಂಪನಿಗಳು ಈ ತಂತ್ರಜ್ಞಾನದಲ್ಲಿ ತೊಡಗಿದ್ದು, ಎಥೆನಾಲ್ ಹಾಗೂ ಫ್ಲೆಕ್ಸ್ ಇಂಧನ ಎಂಜಿನ್‌ಗಳ ಬಳಕೆಯು ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.







Comments