;
top of page

ಇಂದು ಕಾಣಿಯೂರಿನಲ್ಲಿ ನ್ಯಾಯವಾದಿ ನಿಶಾಂತ್ ಎ. ಅವರ ನೂತನ ವಕೀಲರ ಕಛೇರಿ ಉದ್ಘಾಟನೆ: ಗಣ್ಯರಿಂದ ಶುಭಹಾರೈಕೆ

  • Apr 30
  • 1 min read

Updated: May 2

ಕಾಣಿಯೂರಿನಲ್ಲಿ ನ್ಯಾಯವಾದಿ ನಿಶಾಂತ್ ಅವರ ಮುಂದಾಳತ್ವದಲ್ಲಿ ಆರಂಭಗೊಂಡ ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ನಿಶಾಂತ್ ಅವರ ತಂದೆ ಭಾಸ್ಕರ ಪೂಜಾರಿ ಹಾಗೂ ತಾಯಿ ವನಿತಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಹಾಗೂ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ ಮಳಿ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆ, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಇದೇ ವೇಳೆ ವಕೀಲರಾದ ಮಹೇಶ್ ಕಜೆ, ಶ್ಯಾಮ್ ಪ್ರಸಾದ್ ಕೈಲಾರ್, ಕೃಷ್ಣಪ್ರಸಾದ್ ನನ್ಸಾರ್, ಕುಮಾರ್ ಎ.ಪಿ., ರಾಧಾಕೃಷ್ಣ ರೈ ಕಟ್ಟಬೀಡು, ರಾಜನಾರಾಯಣ ಮಳಿ, ಗುರುಪ್ರಸಾದ್ ಪಿ., ಕಾರ್ತಿಕ್, ಲತಾ ವಸಂತ ಪೂಜಾರಿ, ಜಯಂತ ಸುವರ್ಣ ಕೆಲಂಬೀರಿ, ಸುಶಾಂತ್ ಎಣ್ಣೂರು, ಸ್ವಸ್ಟಿಕ್ ಸುವರ್ಣ ಸೇರಿದಂತೆ ಹಲವರು ಭಾಗವಹಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.


ಇನ್ನು ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಮಾರ್ಕಜೆ, ಉದ್ಯಮಿ ಚಂದ್ರಶೇಖರ್ ಬರೆಪ್ಪಾಡಿ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅನುವಂಶೀಯ ಮೊಕೇಸರರಾದ ಶಿವರಾಮ ಗೌಡ, ಉದಯಕುಮಾರ್, ರಾಘುನಾಥ ರೈ ಕಟ್ಟಬೀಡು, ಪುರಂದರ ಪೂಜಾರಿ ಎಣ್ಮುರು, ಮನ್ವಿತ್ ಸುವರ್ಣ, ರಘುನಾಥ ರೈ ಕೆ.ಎನ್., ರಾಧಾಕೃಷ್ಣ ರೈ ಕೆ., ಎನ್‌.ಜಿ. ಲೋಕನಾಥ ರೈ ಪಟ್ಟೆ, ಪಂಜಿಮೊಗರು ರಘುನಾಥ ರೈ, ಜಯರಾಮ ರೈ ಎಣ್ಮುರು, ಮಾಯಿಲಪ್ಪ ಗೌಡ ಪಟ್ಟೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಆರಂಭದಲ್ಲಿ ವಕೀಲ ತೇಜಸ್ ನಾಯಕ್ ಕೊಂಬೆಟ್ಟು ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page