top of page
News Articles
Sathyapatha News Plus


ಸಾರಿಗೆ ನೌಕರರಿಗೆ ಸಿಹಿ ಸುದ್ದಿ :ಏಪ್ರಿಲ್ 6ಕ್ಕೆ ಮಹತ್ವದ ಸಭೆ
ರಾಜ್ಯ ಬಜೆಟ್ ಘೋಷಣೆಯಂತೆ ಸಾರಿಗೆ ನೌಕರರ ವೇತನ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷ ನೇತೃತ್ವದಲ್ಲಿ ವೇತನ ಹೆಚ್ಚಳದ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ವಿಶೇಷ ಸಭೆ ಆಯೋಜಿಸಲಾಗಿದೆ. ಈ ನಿರ್ಧಾರವು ಸಾವಿರಾರು ಸಾರಿಗೆ ನೌಕರರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು, ಆರ್ಥಿಕ ಸುಧಾರಣೆಯ ನಿರೀಕ್ಷೆಯಿದೆ. ಬರುವ ಏಪ್ರಿಲ್ 6ರಂದು ನೌಕರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಎಂಡಿ ಸಮಾಲೋಚನೆ ನಡೆಸಲಿದ್ದಾರೆ. ಅಂದೇ ವೇತನ ಪರಿಷ್ಕರಣೆಯ ಬಗ್ಗೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಸಾರಿಗೆ ಇಲಾಖ
Apr 21 min read


ಮಸೀದಿಯಲ್ಲಿ ಹರಕೆ ಹುಂಡಿ ಕಳವು: ಸಿಸಿಟಿವಿಯಲ್ಲಿ ಆರೋಪಿ ಸೆರೆ
ಮಾರ್ಚ್ 30ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಮಸೀದಿಯೊಂದರ ಆವರಣದಲ್ಲಿ ಹರಕೆ ಹುಂಡಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮಸೀದಿಯೊಳಗೆ ಪ್ರವೇಶಿಸಿ, ಯಾರೂ ಇಲ್ಲದ ಸಮಯ ನೋಡಿ ಹುಂಡಿಯೊಂದಿಗೆ ಪರಾರಿಯಾಗಿದ್ದಾನೆ. ಈ ಕೃತ್ಯದಿಂದ ಮಸೀದಿಯ ಆಡಳಿತ ಮಂಡಳಿ ಹಾಗೂ ಭಕ್ತರು ಆತಂಕಕ್ಕೊಳಗಾಗಿದ್ದಾರೆ. ಕಳ್ಳತನದ ದೃಶ್ಯಗಳು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಆರೋಪಿಯು ನೀಲಿ ಬಣ್ಣದ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿರುವುದು ಕಂಡುಬಂದಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು
Apr 21 min read


ಇಂದು (ಏ. 01)ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ್ಯ ಆದಿ ಬೈದರ್ಕಳ ನೇಮೋತ್ಸವ
ಇತಿಹಾಸ ಪ್ರಸಿದ್ಧ ಕಾರಣಿಕ ಶಕ್ತಿಗಳಾದ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವವು ಏಪ್ರಿಲ್ 1ರಂದು ಎಣ್ಣೂರು ಕಟ್ಟಬೀಡು ಮತ್ತು ಗರಡಿಯಲ್ಲಿ ಅತ್ಯಂತ ಸಡಗರದಿಂದ ನಡೆಯಿತು. ಆನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗ ತಂಬಿಲ, ಮುಹೂರ್ತ ತೋರಣ ಮತ್ತು ಭಂಡಾರ ಏರುವಿಕೆ ಶಾಸ್ತ್ರೋಕ್ತವಾಗಿ ಜರುಗಿದವು. ಈ ಪುಣ್ಯ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ದೈವಗಳ ದರ್ಶನ ಪಡೆದರು. ರಾತ್ರಿ ದೈವಗಳ ಗರಡಿ ಇಳಿಯುವಿಕೆ ಮತ್ತು ಕಿನ್ನಿದಾರು ದರ್ಶನ ರಂಗಸ್ಥಳದಲ್ಲಿ ಸಾರವ
Apr 11 min read


ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಸಿಹಿ ಸುದ್ದಿ: ಏಪ್ರಿಲ್ 10ರವರೆಗೆ ಬಸ್ ಪಾಸ್ ಅವಧಿ ವಿಸ್ತರಣೆ
ರಾಜ್ಯದ 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಹತ್ವದ ವಿನಾಯಿತಿ ನೀಡಿದೆ. 2025-26ನೇ ಸಾಲಿನ ಹಳೆಯ ಬಸ್ ಪಾಸ್ಗಳ ಮಾನ್ಯತಾ ಅವಧಿಯನ್ನು ಏಪ್ರಿಲ್ 10ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ವಾರ್ಷಿಕ ಪರೀಕ್ಷೆಗಳ ಸಮಯದಲ್ಲಿ ಸಾರಿಗೆ ಸಮಸ್ಯೆಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಶಾಲಾ ಪರೀಕ್ಷೆಗಳಿಗೆ ಹಾಜರಾಗಲು ಅನುಕೂಲವಾಗಲಿದೆ. ಈ ಆದೇಶದನ್ವಯ, ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಹಳೆಯ ಪಾಸ್ಗಳನ್ನೇ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರಿಂದ ಗ್ರಾಮೀಣ ಭಾಗದ ಸಾವಿರಾರು ವ
Apr 11 min read


ಕುದ್ಮಾರು ಜಂಕ್ಷನ್: ಕಾರು-ಬೈಕ್ ಭೀಕರ ಡಿಕ್ಕಿ
ಕಡಬ ತಾಲೂಕಿನ ಕಾಣಿಯೂರು ರಸ್ತೆಯ ಕುದ್ಮಾರು ಬಳಿ ಬುಧವಾರ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಗಾಯಗೊಂಡ ಸವಾರರನ್ನು ತಕ್ಷಣವೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
Apr 11 min read


ಜಮ್ಮು-ಕಾಶ್ಮೀರದ ಗಂಡೇಬಲ್ನಲ್ಲಿ ‘ಆಪರೇಷನ್ ಅರಹಮಾ’: ಎನ್ಕೌಂಟರ್ನಲ್ಲಿ ಪಾಕ್ ಉಗ್ರ ಹತ, ಮೂವರ ಬಂಧನ
ಜಮ್ಮು-ಕಾಶ್ಮೀರದ ಗಂಡೇಬಲ್ ಜಿಲ್ಲೆಯಲ್ಲಿ ಭಾರತೀಯ ಸೇನೆಯು 'ಆಪರೇಷನ್ ಅರಹಮಾ' ಕಾರ್ಯಾಚರಣೆ ನಡೆಸುತ್ತಿದೆ. ಗುರುವಾರ ರಾತ್ರಿಯಿಡೀ ನಡೆದ ಭೀಕರ ಎನ್ಕೌಂಟರ್ನಲ್ಲಿ ಓರ್ವ ಪಾಕಿಸ್ತಾನಿ ಉಗ್ರ ಹತ್ಯೆಯಾಗಿದ್ದಾನೆ ಎಂದು ಸೇನೆ ತಿಳಿಸಿದೆ. ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದಾಗ, ಸೇನೆಯು ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಉಗ್ರರನ್ನು ಮಟ್ಟಹಾಕಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದರೆ, ಇತರ ಮೂವರು ಉಗ್ರರನ್ನು ಸೇನಾಪಡೆಗಳು ಬಂಧಿಸಿವೆ. ಪ್ರಸ್ತುತ ಗಂಡೇಬಲ್ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದೆ. ಗಡಿ ಭಾಗದಲ್
Apr 11 min read


ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ: ಕ್ಷಿಪಣಿಗಳ ಮೇಲೆ 'ಭಾರತಕ್ಕೆ ಧನ್ಯವಾದ' ಸಂದೇಶ ವೈರಲ್
ಇಸ್ರೇಲ್ ಮೇಲೆ ಇರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೇ ಒಂದು ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ದಾಳಿಗೆ ಬಳಸಲಾದ ಕ್ಷಿಪಣಿಗಳ ಮೇಲೆ 'ಭಾರತದ ಜನರಿಗೆ ಧನ್ಯವಾದಗಳು' ಎಂದು ಬರೆಯಲಾಗಿದ್ದು, ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಕಚೇರಿ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದೆ. ಭಾರತದ ಜೊತೆಗೆ ಪಾಕಿಸ್ತಾನ, ಸ್ಪೇನ್ ಮತ್ತು ಜರ್ಮನಿ ದೇಶಗಳಿಗೂ ಇರಾನ್ ಈ ಮೂಲಕ ಕೃತಜ್ಞತೆ ಸಲ್ಲಿಸಿದೆ. ಮತ್ತೊಂದೆಡೆ, ಆರ್ಥಿಕ ಮತ್ತು ವ್ಯೂಹಾತ್ಮಕ ದೃಷ್ಟಿಯಿಂದ ಮಹತ್ವದ ಹೊರ್ಮುಜ್ ಜಲಸಂಧಿಯನ್ನು ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಐದು ರಾಷ್ಟ್ರಗಳಿಗೆ ಮುಕ್ತಗೊಳ
Apr 11 min read


ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ಇಂದು (ಏ.1) ಗೊನೆ ಮುಹೂರ್ತ, ಏ.10ರಿಂದ ಜಾತ್ರೋತ್ಸವ ಆರಂಭ
ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಂಭ್ರಮ ಆರಂಭಗೊಂಡಿದೆ. ಇದರ ಅಂಗವಾಗಿ ಏಪ್ರಿಲ್ 1ರಂದು ಬೆಳಿಗ್ಗೆ 9.15ರ ವೃಷಭ ಲಗ್ನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೊನೆ ಮುಹೂರ್ತ ನೆರವೇರಲಿದೆ. ನಂತರ ಮಧ್ಯಾಹ್ನ ಭಕ್ತಾದಿಗಳಿಗೆ ಕೊಟ್ಟಿಬೆಟ್ಟು ಏಳ್ಳಾಡುಗುತ್ತು ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ. ಏಪ್ರಿಲ್ 10ರಂದು ಭವ್ಯ ಧ್ವಜಾರೋಹಣದೊಂದಿಗೆ ಅಧಿಕೃತವಾಗಿ ಜಾತ್ರೆಗೆ ಚಾಲನೆ ದೊರೆಯಲಿದ್ದು, ಪ್ರತಿದಿನ ಸಂಜೆ ಪೇಟೆ ಸವಾರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪುತ್ತೂರಿನ ಆರಾಧ್ಯ ದೈವದ ಈ ಮಹೋತ್ಸವಕ್ಕೆ ಸಾ
Apr 11 min read
Archive
bottom of page



