ಸಾರಿಗೆ ನೌಕರರಿಗೆ ಸಿಹಿ ಸುದ್ದಿ :ಏಪ್ರಿಲ್ 6ಕ್ಕೆ ಮಹತ್ವದ ಸಭೆ
- Apr 2
- 1 min read

ರಾಜ್ಯ ಬಜೆಟ್ ಘೋಷಣೆಯಂತೆ ಸಾರಿಗೆ ನೌಕರರ ವೇತನ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷ ನೇತೃತ್ವದಲ್ಲಿ ವೇತನ ಹೆಚ್ಚಳದ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ವಿಶೇಷ ಸಭೆ ಆಯೋಜಿಸಲಾಗಿದೆ. ಈ ನಿರ್ಧಾರವು ಸಾವಿರಾರು ಸಾರಿಗೆ ನೌಕರರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು, ಆರ್ಥಿಕ ಸುಧಾರಣೆಯ ನಿರೀಕ್ಷೆಯಿದೆ.

ಬರುವ ಏಪ್ರಿಲ್ 6ರಂದು ನೌಕರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಎಂಡಿ ಸಮಾಲೋಚನೆ ನಡೆಸಲಿದ್ದಾರೆ. ಅಂದೇ ವೇತನ ಪರಿಷ್ಕರಣೆಯ ಬಗ್ಗೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಸಾರಿಗೆ ಇಲಾಖೆಯ ಇತಿಹಾಸದಲ್ಲಿ ಇದು ಪ್ರಮುಖ ಘಟ್ಟವಾಗಲಿದ್ದು, ನೌಕರರ ದೀರ್ಘಕಾಲದ ಬೇಡಿಕೆಗೆ ಮನ್ನಣೆ ಸಿಗುವ ಸೂಚನೆ ಲಭ್ಯವಾಗಿದೆ.







Comments