ಜಮ್ಮು-ಕಾಶ್ಮೀರದ ಗಂಡೇಬಲ್‌ನಲ್ಲಿ ‘ಆಪರೇಷನ್ ಅರಹಮಾ’: ಎನ್‌ಕೌಂಟರ್‌ನಲ್ಲಿ ಪಾಕ್ ಉಗ್ರ ಹತ, ಮೂವರ ಬಂಧನ

ಜಮ್ಮು-ಕಾಶ್ಮೀರದ ಗಂಡೇಬಲ್ ಜಿಲ್ಲೆಯಲ್ಲಿ ಭಾರತೀಯ ಸೇನೆಯು 'ಆಪರೇಷನ್ ಅರಹಮಾ' ಕಾರ್ಯಾಚರಣೆ ನಡೆಸುತ್ತಿದೆ. ಗುರುವಾರ ರಾತ್ರಿಯಿಡೀ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಓರ್ವ ಪಾಕಿಸ್ತಾನಿ ಉಗ್ರ ಹತ್ಯೆಯಾಗಿದ್ದಾನೆ ಎಂದು ಸೇನೆ ತಿಳಿಸಿದೆ. ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದಾಗ, ಸೇನೆಯು ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಉಗ್ರರನ್ನು ಮಟ್ಟಹಾಕಿದೆ.

ಈ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದರೆ, ಇತರ ಮೂವರು ಉಗ್ರರನ್ನು ಸೇನಾಪಡೆಗಳು ಬಂಧಿಸಿವೆ. ಪ್ರಸ್ತುತ ಗಂಡೇಬಲ್ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದೆ. ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ.







Comments