;
top of page

ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದಿಂದ ಒಪ್ಪಂದ ಉಲ್ಲಂಘನೆ: ಭಾರತ ಕಳವಳ

2 hours ago
1 min read

ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನ ನೌಕಾದಳದ 'ಪಿಎನ್‌ಎಸ್ ಹುನೈನ್' ಯುದ್ಧನೌಕೆಯು ಅಂತಾರಾಷ್ಟ್ರೀಯ ನಿಯಮಾವಳಿ ಹಾಗೂ 1991ರ ಮಿಲಿಟರಿ ಕಾರ್ಯಾಚರಣೆಗಳ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿದೆ.

ದೆಹಲಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತದ 'ಐಎನ್‌ಎಸ್ ಕೋಲ್ಕತ' ದೈನಂದಿನ ಗಸ್ತು ತಿರುಗುತ್ತಿದ್ದಾಗ ಪಾಕಿಸ್ತಾನಿ ನೌಕೆ ಅಪಾಯಕಾರಿ ರೀತಿಯಲ್ಲಿ ಹತ್ತಿರ ಬಂದು ಘರ್ಷಣೆ ನಡೆಸಿದೆ ಎಂದರು. ಒಪ್ಪಂದದಂತೆ ಉಭಯ ದೇಶಗಳ ನೌಕೆಗಳು ಕನಿಷ್ಠ 3 ನಾಟಿಕಲ್ ಮೈಲು ಅಂತರ ಕಾಯ್ದುಕೊಳ್ಳಬೇಕು. ಈ ಕೃತ್ಯದಿಂದ ಐಎನ್‌ಎಸ್ ಕೋಲ್ಕತಾಗೆ ಯಾವುದೇ ಪ್ರಮುಖ ಹಾನಿಯಾಗಿಲ್ಲ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ತನ್ನ ಕಾರ್ಯಾಚರಣೆಗಳನ್ನು ಎಚ್ಚರಿಕೆಯಿಂದ ನಡೆಸಿ, ಒಪ್ಪಂದಗಳಿಗೆ ಬದ್ಧವಾಗಿರಬೇಕೆಂದು ಭಾರತ ಸೂಚಿಸಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page