ಇಂದು (ಏ. 01)ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ್ಯ ಆದಿ ಬೈದರ್ಕಳ ನೇಮೋತ್ಸವ
- Apr 1
- 1 min read

ಇತಿಹಾಸ ಪ್ರಸಿದ್ಧ ಕಾರಣಿಕ ಶಕ್ತಿಗಳಾದ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವವು ಏಪ್ರಿಲ್ 1ರಂದು ಎಣ್ಣೂರು ಕಟ್ಟಬೀಡು ಮತ್ತು ಗರಡಿಯಲ್ಲಿ ಅತ್ಯಂತ ಸಡಗರದಿಂದ ನಡೆಯಿತು. ಆನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗ ತಂಬಿಲ, ಮುಹೂರ್ತ ತೋರಣ ಮತ್ತು ಭಂಡಾರ ಏರುವಿಕೆ ಶಾಸ್ತ್ರೋಕ್ತವಾಗಿ ಜರುಗಿದವು. ಈ ಪುಣ್ಯ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ದೈವಗಳ ದರ್ಶನ ಪಡೆದರು.

ರಾತ್ರಿ ದೈವಗಳ ಗರಡಿ ಇಳಿಯುವಿಕೆ ಮತ್ತು ಕಿನ್ನಿದಾರು ದರ್ಶನ ರಂಗಸ್ಥಳದಲ್ಲಿ ಸಾರವತ್ತಾಗಿ ನಡೆಯಲಿದೆ. ಬೆಳಗಿನ ಜಾವ ಕಟ್ಟಬೀಡಿಗೆ ಹಾಲು ಕುಡಿಯಲು ಬರುವ ದೈವಗಳು, ಅಲ್ಲಿ ಕಾಣಿಕೆ ಸ್ವೀಕರಿಸಿ ಬಳಿಕ ಕೋಟಿ-ಚೆನ್ನಯರ ದರ್ಶನ ನೀಡಲಿವೆ. ರಂಗಸ್ಥಳದಲ್ಲಿ ಬೈದೆರುಗಳ ಸೇಟು ಮತ್ತು ತುಲಾಭಾರ ಸೇವೆಗಳು ನಡೆಯಲಿದ್ದು, ಭಕ್ತರಿಗಾಗಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸಾಂಪ್ರದಾಯಿಕ ಕಟ್ಟಲೆಗಳೊಂದಿಗೆ ಜರುಗುವ ಈ ನೇಮೋತ್ಸವವು ಭಕ್ತರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಇಮ್ಮಡಿಗೊಳಿಸಿದೆ







Comments