ಪ್ರಶ್ನೆಪತ್ರಿಕೆ ಸೋರಿಕೆ: ಇಂದು ನೀಟ್ ದೇಶವ್ಯಾಪಿ ಮಾಕ್ ಡ್ರಿಲ್, ನಾಳೆ ಮರುಪರೀಕ್ಷೆ
- Jun 20
- 1 min read

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಾಳೆ ನೀಟ್-ಯುಜಿ ಮರುಪರೀಕ್ಷೆ ನಡೆಯಲಿದ್ದು, ಈ ದೆಸೆಯಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಇಂದು ದೇಶದ 551 ನಗರಗಳಲ್ಲಿ ಪೂರ್ಣ ಪ್ರಮಾಣದ ಮಾಕ್ ಡ್ರಿಲ್ ಹಮ್ಮಿಕೊಂಡಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಪ್ರಶ್ನೆಪತ್ರಿಕೆ ವಿತರಣೆ ಮತ್ತು ಸಂಗ್ರಹಣೆಯ ಅಣುಕು ಕಾರ್ಯಾಚರಣೆ ನಡೆಯಲಿದೆ.
ನಾಳೆ ದೇಶಾದ್ಯಂತ 5,500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾಡಳಿತ, ರಾಜ್ಯ ಪೊಲೀಸ್ ಹಾಗೂ ಕೇಂದ್ರದ ವಿಶೇಷ ತಂಡಗಳನ್ನೊಳಗೊಂಡ ಮೂರು ಹಂತದ ಕಟ್ಟುನಿಟ್ಟಿನ ಭದ್ರತೆಯನ್ನು ನಿಯೋಜಿಸಲಾಗಿದೆ.
ಸುರಕ್ಷತೆಗಾಗಿ 2.5 ಲಕ್ಷ ಪೊಲೀಸರು ಹಾಗೂ 15,000 ಅರೆಸೇನಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ, 1.5 ಲಕ್ಷ ಸಿಸಿಟಿವಿ ಮತ್ತು 15,000 ಜಾಮರ್ಗಳ ಮೂಲಕ ಎನ್ಟಿಎ ಕಂಟ್ರೋಲ್ ರೂಮ್ನಿಂದ ಹದ್ದಿನ ಕಣ್ಣಿಡಲಾಗುತ್ತಿದೆ.







Comments