top of page
News Articles
Sathyapatha News Plus


ಶಾಲಾ ವೇಳಾಪಟ್ಟಿ ಬದಲಾವಣೆ: ರಾಜ್ಯದ ಎಲ್ಲಾ ಶಾಲೆಗಳಿಗೂ ಶನಿವಾರ ಏಕರೂಪದ ಹೊಸ ಸಮಯ ನಿಗದಿ!
ರಾಜ್ಯದ ಶಾಲಾ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮಹತ್ವದ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಕರ್ನಾಟಕದಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವಂತೆ ಶನಿವಾರದ ತರಗತಿಗಳ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ಹೊಸ ಆದೇಶದ ಪ್ರಕಾರ, ಶನಿವಾರ ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ತರಗತಿಗಳು ನಡೆಯಲಿವೆ. ಈ ಹಿಂದೆ ವಿವಿಧ ಜಿಲ್ಲೆಗಳಲ್ಲಿದ್ದ ಸಮಯದ ಭಿನ್ನತೆ ಹಾಗೂ ಗೊಂದಲಗಳಿಗೆ ತೆರೆ ಎಳೆಯಲು ಇಲಾಖೆಯು ಈ ಕಟ್ಟುನಿಟ್ಟಿನ ಏಕರೂಪದ ಸೂಚನೆ ನೀಡಿದೆ.
Jun 271 min read


ವಾಣಿಜ್ಯ ಇಂಧನ ಪೂರೈಕೆ ನಿರ್ಬಂಧ ತೆರವು: ಕೇಂದ್ರ ಸರ್ಕಾರದ ದೊಡ್ಡ ಕೊಡುಗೆ
ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ದೊಡ್ಡ ಸಿಹಿಸುದ್ದಿ ನೀಡಿದೆ. ಗೃಹೇತರ ಪ್ಯಾಕೇಜ್ಡ್ ಎಲ್ಪಿಜಿ ಪೂರೈಕೆಗೆ ವಿಧಿಸಲಾಗಿದ್ದ ಎಲ್ಲಾ ವಲಯವಾರು ಮಿತಿಗಳು ಮತ್ತು ನಿರ್ಬಂಧಗಳನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಯಿಂದಾಗಿ ಈ ಹಿಂದೆ ಎಲ್ಪಿಜಿ ಪೂರೈಕೆ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು. ಪ್ರಸ್ತುತ ಅಂತರರಾಷ್ಟ್ರೀಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವುದರಿಂದ, ಬಿಕ್ಕಟ್ಟಿನ ಮುಂಚಿನಂತೆಯೇ ಇಂಧನ ಸರಬರಾಜನ್ನು ಪುನಃ ಆರಂಭಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಸಡಿಲಿಕೆಯಿಂದಾಗ
Jun 261 min read


ಪುತ್ತೂರಿನಲ್ಲಿ ಅಪರೂಪದ ಆಚರಣೆ: 25 ವರ್ಷಗಳ ಹಿಂದೆ ಮೃತಪಟ್ಟ ಜೋಡಿಗೆ ‘ಪ್ರೇತ ವಿವಾಹ’!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರಿನಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಚರಣೆಯಾದ ಅಪರೂಪದ ‘ಪ್ರೇತ ವಿವಾಹ’ ನಡೆದಿದೆ. ಸುಮಾರು 25 ವರ್ಷಗಳ ಹಿಂದೆ ಬಾಲ್ಯದಲ್ಲೇ ಮೃತಪಟ್ಟಿದ್ದ ಆನಂದ ಮತ್ತು ಸರೋಜಾ ಎಂಬವರ ಆತ್ಮಗಳಿಗೆ ಶಾಂತಿ ಸಿಗಲಿ ಹಾಗೂ ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿಶಿಷ್ಟ ವಿವಾಹವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗಿದೆ. ಮೃತ ಆನಂದ ಅವರ ಕುಟುಂಬದಲ್ಲಿ ಸಂತಾನ ಭಾಗ್ಯದ ಕೊರತೆ ಹಾಗೂ ವಿವಾಹ ತಡೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಜ್ಯೋತಿಷಿಗಳ ಸಲಹೆಯಂತೆ ‘ಪ್ರಶ್ನಾ ಚಿಂತನೆ’ ನಡೆಸಿದಾಗ, ಮದುವೆಯಾಗದೆ ಮೃತಪಟ್ಟ ಆನಂದನ ಅತೃಪ್ತ ಆತ್ಮವೇ
Jun 251 min read


ಮಂಗಳೂರಿಗೆ ಬಂದಿಳಿದ ಬಾಲಿವುಡ್ ಬಾದ್ಶಾ ಶಾರುಖ್ ಖಾನ್: ಅಭಿಮಾನಿಗಳಲ್ಲಿ ಸೃಷ್ಟಿಯಾಯ್ತು ಹೊಸ ಸಂಚಲನ!
ಬಾಲಿವುಡ್ನ ಸೂಪರ್ ಸ್ಟಾರ್ ಶಾರುಖ್ ಖಾನ್ ಇಂದು ಕರಾವಳಿ ನಗರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಕಿಂಗ್ ಖಾನ್ ಆಗಮನದ ಸುದ್ದಿಯಿಂದಲೇ ಸ್ಥಳೀಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮತ್ತು ಹೊಸ ಸಂಚಲನ ಮೂಡಿದ್ದು, ಮುಂಜಾನೆಯಿಂದಲೇ ಅವರನ್ನು ನೋಡಲು ಜನ ಮುಗಿಬಿದ್ದಿದ್ದರು. ಇಂದು ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರುಖ್ ಬಂದಿಳಿದರು. ವಿಮಾನ ನಿಲ್ದಾಣದ ಹೊರಗೆ ನೆರೆದಿದ್ದ ಅಭಿಮಾನಿಗಳ ದಂಡನ್ನು ಕಂಡು, ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಬಾದ್ಶಾ ಎಂದಿನ ತಮ್ಮ ಮುಗುಳ್ನಗೆಯೊಂದಿಗೆ ಕೈಬೀಸಿ ಧನ್ಯವಾದ ತಿಳಿಸಿದರು. ಮಂಗಳೂರಿನ ಖ್ಯಾತ ‘ರೋಹನ್ ಕಾ
Jun 251 min read


ಯು.ಟಿ. ಖಾದರ್ಗೆ ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ
ಮಂಗಳೂರು ಶಾಸಕ ಹಾಗೂ ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರುವ ಯು.ಟಿ. ಖಾದರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸ್ಥಾನವನ್ನು ನೀಡಿ ಆದೇಶ ಹೊರಡಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಸ್ಪೀಕರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಖಾದರ್ ಅವರಿಗೆ ಈಗ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಎದುರಾಗಿರುವ ಪ್ರಕೃತಿ ವಿಕೋಪದ ಸಮರ್ಥ ನಿರ್ವಹಣೆಗಾಗಿ ಮಾತ್ರ ಈ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಗಳಿಗೆ ಪೂರ್ಣ ಪ್ರಮಾಣದ ಉಸ್ತುವಾರಿ ಸಚಿವರ ಸ್ಥಾನದ ಮರು ಹಂಚ
Jun 251 min read


ಬಾಲಕಿ ಮೇಲಿನ ಲೈಂಗಿಕ ಕಿರುಕುಳ: ಇಬ್ಬರು ಬಾಲಕರ ವಿರುದ್ಧ ಕೇಸ್
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಇಬ್ಬರು ಅಪ್ರಾಪ್ತ ಬಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ 16 ವರ್ಷದ ಓರ್ವ ಬಾಲಕನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ 17 ವರ್ಷದ ಆರೋಪಿ ಬಾಲಕ ಸದ್ಯ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕರಿಬ್ಬರು ಸೇರಿ 2023ರಲ್ಲಿ ಸಂತ್ರಸ್ತೆಯನ್ನು ಸ್ಥಳೀಯ ಡ್ಯಾಂ ಒಂದರ ಬಳಿಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದರು ಮತ್ತು ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಜೀವ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲ
Jun 251 min read


ಪ್ರಾಣಿಗಳಿಗೂ ಬದುಕುವ ಹಕ್ಕಿದೆ: ಹೈಕೋರ್ಟ್ ಮಹತ್ವದ ತೀರ್ಪು
ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ನಾಯಿಗಳ ಮೇಲಿನ ಕ್ರೌರ್ಯ ಮತ್ತು ಲೈಂಗಿಕ ದುರ್ಬಳಕೆಯ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಕೆ.ಇ. ರಮೇಶ್ ಎಂಬಾತನಿಗೆ 9 ನಾಯಿಗಳ ಕಸ್ಟಡಿಯನ್ನು ಮರಳಿ ನೀಡಬಾರದು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಆದೇಶಿಸಿದೆ. ನಾಗಸಂದ್ರದ ನಿವಾಸಿಯಾದ ರಮೇಶ್ ವಿರುದ್ಧ ಬಿಎನ್ಎಸ್ ಹಾಗೂ ಪ್ರಾಣಿ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಕಟುವಾಗಿ
Jun 251 min read


ಅಯೋಧ್ಯೆ ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರ ಹರಿಹರದಲ್ಲಿ ಬಂಧನ!
ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬಂಧನಕ್ಕೊಳಪಟ್ಟಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20), ತನಿಖೆ ವೇಳೆ ದಿಗಿಲುಗೊಳಿಸುವ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ತಾನು ಸಂಚು ರೂಪಿಸಿದ್ದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖಾಧಿಕಾರಿಗಳು ಈತನ ಮೊಬೈಲ್ ಪರಿಶೀಲಿಸಿದಾಗ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಹಲವು ವಾಟ್ಸಾಪ್ ಗ್ರೂಪ್ಗಳು ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ಪತ್ತೆಯಾಗಿವೆ. ವಿ
Jun 241 min read


ನಾಪತ್ತೆಯಾಗಿದ್ದ ಸಾಕುನಾಯಿ ಪತ್ತೆ: ಹುಡುಕಿಕೊಟ್ಟ ವ್ಯಕ್ತಿಗೆ ₹50 ಸಾವಿರ ಬಹುಮಾನ!
ಸಾಕು ನಾಯಿಗಳು ಕೇವಲ ಪ್ರಾಣಿಗಳಲ್ಲ, ಅವು ಮನೆಯ ಅವಿಭಾಜ್ಯ ಅಂಗ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ವಾನಪ್ರೇಮಿ ಗಣೇಶ್ ಕೇರ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಅವರ ಪ್ರೀತಿಯ ದೇಸಿ ತಳಿಯ ವಿಶೇಷ ಚೇತನ ನಾಯಿ ‘ಚಿನ್ನು’ ಕೊನೆಗೂ ಪತ್ತೆಯಾಗಿದೆ. ಮೂರ್ಛೆ ರೋಗದಿಂದ ಬಳಲುತ್ತಿದ್ದ ಈ ನಾಯಿ ಮೂರು ವಾರಗಳ ಹಿಂದೆ ಕಾಣೆಯಾಗಿತ್ತು. ಇದರಿಂದ ಕಂಗಾಲಾಗಿದ್ದ ಮಾಲೀಕ ಗಣೇಶ್ ಅವರು, ನಾಯಿಯನ್ನು ಹುಡುಕಿಕೊಟ್ಟವರಿಗೆ ₹50 ಸಾವಿರ ನಗದು ಬಹುಮಾನ ನೀಡುವುದಾಗಿ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದರು. ಸ್ಥಳೀಯ ನಿವಾಸಿ ಪುರಂದರ ಪೋಳ್ಯ ಎಂಬುವವರು ಸ
Jun 241 min read


ಕಿಡಿಗೇಡಿಗಳ ಕೃತ್ಯಕ್ಕೆ 300 ಅಡಿಕೆ ಮರಗಳು ಭಸ್ಮ: ಕಡಬದ ಯೇನೆಕಲ್ನಲ್ಲಿ ಕಂಗಾಲಾದ ರೈತ ಕುಟುಂಬ
ಕಡಬ ತಾಲೂಕಿನ ಯೇನೆಕಲ್ ಗ್ರಾಮದ ರೈತ ಗಿರಿಧರ ಅಂಬೆಕಲ್ಲು ಎಂಬುವವರ ತೋಟದಲ್ಲಿ ಕೊಳೆ ರೋಗ ನಿಯಂತ್ರಣಕ್ಕಾಗಿ ಮೈಲುತುತ್ತು ದ್ರಾವಣ ಸಿಂಪಡಿಸಿದ ಕೇವಲ ಮೂರೇ ದಿನದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ಗಿಡ ಮತ್ತು ಮರಗಳು ಸಂಪೂರ್ಣವಾಗಿ ಕರಟಿ ಹೋಗಿರುವ ದಾರುಣ ಘಟನೆ ವರದಿಯಾಗಿದೆ. ಜೂನ್ 19ರಂದು ಸಿಂಪಡಿಸಲಾಗಿದ್ದ ದ್ರಾವಣದ ಮೊದಲ ಬ್ಯಾರೆಲ್ನಲ್ಲಿದ್ದ ರಾಸಾಯನಿಕದಿಂದಾಗಿ ಈ ದುರಂತ ಸಂಭವಿಸಿದ್ದು, ಕಣ್ಣೆದುರೇ ಒಣಗುತ್ತಿರುವ ಮರಗಳನ್ನು ಕಂಡು ರೈತ ಕುಟುಂಬ ಕಂಗಾಲಾಗಿದೆ. ತೋಟದ ಆರಂಭದ ಭಾಗದಲ್ಲಿ ಸಿಂಪಡಿಸಲಾಗಿದ್ದ ಒಂದು ಡ್ರಂ ದ್ರಾವಣದ ಜಾಗದಲ್ಲಿ ಮಾತ್ರ ಗಿಡಗಳು ಸುಟ್ಟು ಹೋಗಿದ್ದು, ತೋಟದ ಇ
Jun 231 min read


ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ: ಬಂಡಾಯ ಬಣದ ತೀರ್ಮಾನ
ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಬಂಡಾಯ ನಾಯಕರು ವಜಾಗೊಳಿಸಿದ್ದಾರೆ. ಇದರೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನೂ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕೋಲ್ಕತ್ತಾದ ನ್ಯೂಟೌನ್ನ ಪಂಚತಾರಾ ಹೋಟೆಲ್ನಲ್ಲಿ ನಡೆದ ಬಂಡಾಯ ಬಣದ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರುತಬ್ರತಾ ಬ್ಯಾನರ್ಜಿ ನೇತೃತ್ವದ ಈ ಶಿಬಿರವು, ಮಾಜಿ ಸಚಿವ ಅರೂಪ್ ರಾಯ್ ಅವರನ್ನು ಟಿಎಂಸಿಯ ಹೊಸ ಅಖಿಲ ಭಾರತ ಅಧ್ಯಕ್ಷರನ್ನಾಗಿ ಘೋಷಿಸಿದೆ. ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿ ವಿರುದ್ಧ ತ
Jun 231 min read


ಅರ್ಜಿ ಹಾಕುವವರೆಗೂ ಗೃಹಲಕ್ಷ್ಮಿ, ಗೃಹಜ್ಯೋತಿ ನಿಲ್ಲತ್ತಾ? ಅರ್ಜಿ ಸಲ್ಲಿಕೆ ಯಾವಾಗ? ಸರ್ಕಾರದ ಸ್ಪಷ್ಟನೆ ಇಲ್ಲಿದೆ
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದ್ದು, ಅಲ್ಲಿಯವರೆಗೆ ಸದ್ಯ ಚಾಲ್ತಿಯಲ್ಲಿರುವ ಸೌಲಭ್ಯಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಈ ಯೋಜನೆಗಳಲ್ಲಿ ಒಂದೇ ಮನೆಯಲ್ಲಿ ಇಬ್ಬರು-ಮೂವರು ಸೌಲಭ್ಯ ಪಡೆಯುತ್ತಿರುವುದು, ಆದಾಯ ತೆರಿಗೆ ಪಾವತಿದಾರರು ಹಾಗೂ ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಯ ವಿದ್ಯುತ್ ಪಡೆಯುತ್ತಿರುವುದು ಸರ್ಕಾರದ ಗಮನಕ
Jun 231 min read


ಕತಾರ್ ಅನಿಲ ಕೇಂದ್ರದಲ್ಲಿ ಭೀಕರ ಸ್ಫೋಟ: 54 ಮಂದಿಗೆ ಗಾಯ, 18 ಜನ ನಾಪತ್ತೆ
ಕತಾರ್ನ ಪ್ರಮುಖ ನೈಸರ್ಗಿಕ ಅನಿಲ ರಫ್ತು ಕೇಂದ್ರವಾದ ರಾಸ್ ಲಾಫನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 54 ಮಂದಿ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಯುದ್ಧದ ಸಂದರ್ಭದಲ್ಲಿ ನಡೆದ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಅನಿಲ ರಫ್ತು ಕಾರ್ಯಾಚರಣೆಯನ್ನು ಪುನರಾರಂಭಿಸಲು ಕಾರ್ಮಿಕರು ಯತ್ನಿಸುತ್ತಿದ್ದಾಗ ಈ ಅವಘಡ ನಡೆದಿದೆ. ಸ್ಫೋಟದ ತೀವ್ರತೆಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಶ್ವದ ಅಗ್ರ ನೈಸರ್ಗಿಕ ಅನಿಲ ಉತ್ಪಾದಕ ರಾಷ್ಟ್ರವಾದ ಕತಾರ್
Jun 221 min read


ಬಸ್ ಟಿಕೆಟ್ ದರ ಭಾರಿ ಹೆಚ್ಚಳಕ್ಕೆ ಸರ್ಕಾರದ ಮುಂದೆ ಸಾರಿಗೆ ನಿಗಮಗಳ ಪ್ರಸ್ತಾವನೆ
ತೀವ್ರ ಆರ್ಥಿಕ ನಷ್ಟ ಹಾಗೂ ಡೀಸೆಲ್ ದರ ಏರಿಕೆಯಿಂದ ತತ್ತರಿಸಿರುವ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ. ಕಳೆದ ವರ್ಷವಷ್ಟೇ ದರ ಹೆಚ್ಚಳವಾಗಿದ್ದರೂ, ಪ್ರಸ್ತುತ ಬಿಎಂಟಿಸಿ ಶೇಕಡಾ 44 ರಷ್ಟು ಹಾಗೂ ಕೆಎಸ್ಆರ್ಟಿಸಿ ಶೇಕಡಾ 33 ರಷ್ಟು ಟಿಕೆಟ್ ದರ ಏರಿಕೆ ಮಾಡಲು ಅನುಮತಿ ಕೋರಿವೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪ್ರತಿನಿತ್ಯದ ಇಂಧನ ದರ ಏರಿಕೆಯಿಂದಾಗಿ ನಿಗಮಗಳಿಗೆ ವರ್ಷಕ್ಕೆ 480 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಸರ್ಕಾರದ
Jun 221 min read


ದಾವಣಗೆರೆ: ಪ್ಲಾಸ್ಟಿಕ್ ಕವರ್ ಕಚ್ಚಿ ಸಾಕುನಾಯಿ ಭೀಕರ ಸ್ಫೋಟಕ್ಕೆ ಬಲಿ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟ ಸಂಭವಿಸಿ ಸಾಕುನಾಯಿಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ. ಮಾಲೀಕ ರುದ್ರೇಶ್ ಅವರೊಂದಿಗೆ ಜಮೀನಿಗೆ ತೆರಳುತ್ತಿದ್ದ ನಾಯಿ, ರಸ್ತೆ ಬದಿಯ ಪ್ಲಾಸ್ಟಿಕ್ ಕವರ್ನಲ್ಲಿ ಆಹಾರವಿದೆ ಎಂದು ಭಾವಿಸಿ ಕಚ್ಚಿದೆ. ತಕ್ಷಣವೇ ಸ್ಫೋಟ ಸಂಭವಿಸಿದ್ದು, ನಾಯಿಯ ಮುಖ ಛಿದ್ರಗೊಂಡು ಮೃತಪಟ್ಟಿದೆ. ಸ್ಫೋಟದ ಸದ್ದು ಒಂದು ಕಿಲೋಮೀಟರ್ವರೆಗೆ ಕೇಳಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾಡುಹಂದಿ ನಿಯಂತ್ರಣಕ್ಕೆ ಇಟ್ಟಿದ್ದ ಸಿಡಿಮದ್ದು ಇದಾಗಿರಬಹುದು ಎಂದು ಶಂಕಿಸಲಾಗ
Jun 221 min read


ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ: ಐಎಂಡಿ ಮುನ್ಸೂಚನೆ
ಕರ್ನಾಟಕದಲ್ಲಿ ಮುಂಗಾರು ಮಳೆ ತೀವ್ರತೆ ಕಳೆದುಕೊಂಡಿರುವ ನಡುವೆಯೇ, ಮುಂದಿನ ಐದು ದಿನಗಳ ಕಾಲ ಅಂದರೆ ಜೂನ್ 24ರವರೆಗೆ ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಪ್ರಸ್ತುತ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸಾಮಾನ್ಯ ಸ್ಥಿತಿಯಲ್ಲಿದ್ದು, ಇಂದಿನಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಾರುತಗಳು ತೀವ್ರಗೊಳ್ಳಲಿವೆ. ಇದರಿಂದಾಗಿ ಈ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 21 ರಿಂದ ಮುಂಗಾರು ಆರ್ಭಟ ಹೆಚ್ಚಾ
Jun 221 min read


ಸ್ನೇಹಿತರ ಬಳಗ (ರಿ.) ಕಲ್ಪಡ ಇದರ 10ನೆ ವರುಷದ ದಶಮ ಸಂಭ್ರಮ ಲೋಗೋ ಹಾಗೂ ಲಕ್ ಡಿಪ್ ಬಿಡುಗಡೆ
ಸ್ನೇಹಿತರ ಬಳಗ (ರಿ.) ಕಲ್ಪಡ ಇದರ 10ನೆ ವರುಷದ ದಶಮ ಸಂಭ್ರಮ ಲೋಗೋ ಹಾಗೂ ಲಕ್ ಡಿಪ್ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 21/6/2026 ನೇ ಭಾನುವಾರ ಬೆಳಿಗ್ಗೆ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮು ಕ್ತೇಸರರು ಹಾಗೂ ಸ್ನೇಹಿತರ ಬಳಗದ ಗೌರವಧ್ಯಕ್ಷ ರಾದ ಶ್ರೀ ಶಿವರಾಮ ಉಪಾಧ್ಯಾಯ ಕಲ್ಪಡ ಇವರು ಬಿಡುಗಡೆ ಮಾಡಿದರು. ಈ ಸಂಧರ್ಭದಲ್ಲಿ ಶ್ರೀ ಉಳ್ಳಾಕುಲು ದೈವಸ್ಥಾನದ ಮಾಜಿ ಅಧ್ಯಕ್ಷರಾದ ಭಾಸ್ಕರ ಗೌಡ ಕಲ್ಪಡ ಗುತ್ತು, ಬಳಗದ ಅಧ್ಯಕ್ಷರಾದ ಸುರೇಶ್ ಗುತ್ತು, ದೈವದ ಪರಿಚಾರಕ ರಾದ ಶ್ರೀಧರ ಕಲ್ಪಡ, ಲಿಂಗಪ್ಪ ಕಲ್ಪಡ ಹಾಗೂ ಬಳಗದ ಎಲ್ಲಾ ಪದಾಧಿಕಾರಿಗಳು, ಸರ್ವಸದಸ್ಯರು ಪಾಲ್ಗೊಂಡಿದ್ದರು. ದಶಮಾನೋತ್
Jun 211 min read


ಆಲಂಕಾರು: ಪತ್ನಿಯ ಕೊಂದು ಪತಿ ಆತ್ಮಹತ್ಯೆ ಶಂಕೆ: ಎರಡು ವರ್ಷದ ಮಗು ಅನಾಥ
ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಜಗೋಳಿಯ ದಿನೇಶ್ ಮತ್ತು ಸಿದ್ದಕಟ್ಟೆಯ ಸಂಗೀತ ದಂಪತಿ ಆಲಂಕಾರು ಕಜೆಯ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತ್ನಿಯನ್ನು ಕೊಲೆ ಮಾಡಿ, ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಒಂದು ತಿಂಗಳ ಹಿಂದೆ ಹೋಟೆಲ್ ವ್ಯವಹಾರ ಬಿಟ್ಟು ತೆರಳಿದ್ದ ದಂಪತಿ, ಜೂನ್ 19ರ ಸಂಜೆ ಮತ್ತೆ ಬಾಡಿಗೆ ಮನೆಗೆ ಮರಳಿದ್ದರು. ಜೂನ್ 20ರಂದು ಮನೆಯ ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿ ಇಬ್ಬರ ಸಾವು ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಎರಡು ವರ್ಷದ ಹೆಣ್ಣು ಮಗು ದೃವಿ ಅತ್ತುಕೊಂಡು ನಿದ್ರೆಗೆ ಜಾರಿತ್ತು. ಮಗುವಿನ ಅಳುವಿನ ಶ
Jun 211 min read


NEET-UG 2026 ಮರುಪರೀಕ್ಷೆ ಇಂದು: 22.79 ಲಕ್ಷ ವಿದ್ಯಾರ್ಥಿಗಳಿಗೆ ಕಠಿಣ ನಿಯಮಗಳು
ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದಾಗಿದ್ದ NEET-UG 2026 ಪರೀಕ್ಷೆಯು ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರವರೆಗೆ ವಿಶ್ವದಾದ್ಯಂತ ಮರುನಡೆಯುತ್ತಿದೆ. ದೇಶದ 22.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದು, ಎನ್ಟಿಎ (NTA) ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಅಭ್ಯರ್ಥಿಗಳಿಗೆ ಹೊಸ ಅಡ್ಮಿಟ್ ಕಾರ್ಡ್ ಹಾಗೂ ಆಧಾರ್ ಬಯೋಮೆಟ್ರಿಕ್ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಮಧ್ಯಾಹ್ನ 1.30ರ ನಂತರ ಬರುವವರಿಗೆ ಪ್ರವೇಶ ನಿಷೇಧಿಸಲಾಗಿದೆ. ಅರ್ಧ ತೋಳಿನ ಹಗುರ ಉಡುಪು ಮತ್ತು ಸರಳ ಚಪ್ಪಲಿ ಧರಿಸಲು ಮಾತ್ರ ಅವಕಾಶವಿದ್ದು, ಶೂ, ಗಡಿಯಾರ ಹಾಗೂ
Jun 211 min read


ಮುರುಳ್ಯ: ಬಾವಿಗೆ ಬಿದ್ದು ಐದು ವರ್ಷದ ಅವಳಿ ಮಕ್ಕಳ ದಾರುಣ ಸಾವು
ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ವಸಂತ ಹಾಗೂ ದಿವ್ಯ ದಂಪತಿಗಳ ಐದು ವರ್ಷದ ಅವಳಿ ಮಕ್ಕಳಾದ ಜಸ್ವಿತ್ ಮತ್ತು ಜಾವಿನ್ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮನೆಯ ಸಮೀಪದಲ್ಲಿದ್ದ 15 ಅಡಿ ಆಳದ ಕೆರೆಗೆ (ಬಾವಿ) ಆಟವಾಡುತ್ತಿದ್ದ ಮಕ್ಕಳಿಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಘಟನೆ ವೇಳೆ ಪೋಷಕರು ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ಅಜ್ಜ-ಅಜ್ಜಿ ಮಾತ್ರ ಇದ್ದರು. ಸುಳ್ಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮಕ್ಕಳ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.
Jun 201 min read
Archive
bottom of page



