;
top of page

ನಾಪತ್ತೆಯಾಗಿದ್ದ ಸಾಕುನಾಯಿ ಪತ್ತೆ: ಹುಡುಕಿಕೊಟ್ಟ ವ್ಯಕ್ತಿಗೆ ₹50 ಸಾವಿರ ಬಹುಮಾನ!

  • Jun 24
  • 1 min read

ಸಾಕು ನಾಯಿಗಳು ಕೇವಲ ಪ್ರಾಣಿಗಳಲ್ಲ, ಅವು ಮನೆಯ ಅವಿಭಾಜ್ಯ ಅಂಗ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ವಾನಪ್ರೇಮಿ ಗಣೇಶ್ ಕೇರ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಅವರ ಪ್ರೀತಿಯ ದೇಸಿ ತಳಿಯ ವಿಶೇಷ ಚೇತನ ನಾಯಿ ‘ಚಿನ್ನು’ ಕೊನೆಗೂ ಪತ್ತೆಯಾಗಿದೆ.

ಮೂರ್ಛೆ ರೋಗದಿಂದ ಬಳಲುತ್ತಿದ್ದ ಈ ನಾಯಿ ಮೂರು ವಾರಗಳ ಹಿಂದೆ ಕಾಣೆಯಾಗಿತ್ತು. ಇದರಿಂದ ಕಂಗಾಲಾಗಿದ್ದ ಮಾಲೀಕ ಗಣೇಶ್ ಅವರು, ನಾಯಿಯನ್ನು ಹುಡುಕಿಕೊಟ್ಟವರಿಗೆ ₹50 ಸಾವಿರ ನಗದು ಬಹುಮಾನ ನೀಡುವುದಾಗಿ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದರು.

ಸ್ಥಳೀಯ ನಿವಾಸಿ ಪುರಂದರ ಪೋಳ್ಯ ಎಂಬುವವರು ಸಮಯಪ್ರಜ್ಞೆ ಮೆರೆದು ಈ ನಾಯಿಯನ್ನು ಸುರಕ್ಷಿತವಾಗಿ ಹಿಡಿದು ಮಾಲೀಕರಿಗೆ ಒಪ್ಪಿಸಿದ್ದಾರೆ. ಗಣೇಶ್ ಕೇರ ಅವರು ಕೊಟ್ಟ ಮಾತಿನಂತೆ ಪುರಂದರ ಅವರಿಗೆ ₹50 ಸಾವಿರ ಮುಖಬೆಲೆಯ ಚೆಕ್ ಹಸ್ತಾಂತರಿಸಿ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page