ವಾಣಿಜ್ಯ ಇಂಧನ ಪೂರೈಕೆ ನಿರ್ಬಂಧ ತೆರವು: ಕೇಂದ್ರ ಸರ್ಕಾರದ ದೊಡ್ಡ ಕೊಡುಗೆ
- Jun 26
- 1 min read

ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ದೊಡ್ಡ ಸಿಹಿಸುದ್ದಿ ನೀಡಿದೆ. ಗೃಹೇತರ ಪ್ಯಾಕೇಜ್ಡ್ ಎಲ್‌ಪಿಜಿ ಪೂರೈಕೆಗೆ ವಿಧಿಸಲಾಗಿದ್ದ ಎಲ್ಲಾ ವಲಯವಾರು ಮಿತಿಗಳು ಮತ್ತು ನಿರ್ಬಂಧಗಳನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಯಿಂದಾಗಿ ಈ ಹಿಂದೆ ಎಲ್‌ಪಿಜಿ ಪೂರೈಕೆ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು. ಪ್ರಸ್ತುತ ಅಂತರರಾಷ್ಟ್ರೀಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವುದರಿಂದ, ಬಿಕ್ಕಟ್ಟಿನ ಮುಂಚಿನಂತೆಯೇ ಇಂಧನ ಸರಬರಾಜನ್ನು ಪುನಃ ಆರಂಭಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಸಡಿಲಿಕೆಯಿಂದಾಗಿ ಸ್ಥಗಿತಗೊಂಡಿದ್ದ ಬಲ್ಕ್ ಎಲ್‌ಪಿಜಿ ಪೂರೈಕೆ ದೇಶಾದ್ಯಂತ ಮತ್ತೆ ಚುರುಕುಗೊಂಡಿದೆ. ಸದ್ಯ ಇದು ಶೇಕಡಾ 50 ರಷ್ಟು ಮರುಸ್ಥಾಪನೆಯಾಗಿದ್ದು, ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ದೊಡ್ಡ ವಾಣಿಜ್ಯ ಸಂಸ್ಥೆಗಳಿಗೆ ಸುಗಮ ಇಂಧನ ಲಭ್ಯತೆಯ ನೆಮ್ಮದಿ ತಂದಿದೆ.







Comments