ದಾವಣಗೆರೆ: ಪ್ಲಾಸ್ಟಿಕ್ ಕವರ್ ಕಚ್ಚಿ ಸಾಕುನಾಯಿ ಭೀಕರ ಸ್ಫೋಟಕ್ಕೆ ಬಲಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟ ಸಂಭವಿಸಿ ಸಾಕುನಾಯಿಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ.
ಮಾಲೀಕ ರುದ್ರೇಶ್ ಅವರೊಂದಿಗೆ ಜಮೀನಿಗೆ ತೆರಳುತ್ತಿದ್ದ ನಾಯಿ, ರಸ್ತೆ ಬದಿಯ ಪ್ಲಾಸ್ಟಿಕ್ ಕವರ್‌ನಲ್ಲಿ ಆಹಾರವಿದೆ ಎಂದು ಭಾವಿಸಿ ಕಚ್ಚಿದೆ. ತಕ್ಷಣವೇ ಸ್ಫೋಟ ಸಂಭವಿಸಿದ್ದು, ನಾಯಿಯ ಮುಖ ಛಿದ್ರಗೊಂಡು ಮೃತಪಟ್ಟಿದೆ.
ಸ್ಫೋಟದ ಸದ್ದು ಒಂದು ಕಿಲೋಮೀಟರ್‌ವರೆಗೆ ಕೇಳಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾಡುಹಂದಿ ನಿಯಂತ್ರಣಕ್ಕೆ ಇಟ್ಟಿದ್ದ ಸಿಡಿಮದ್ದು ಇದಾಗಿರಬಹುದು ಎಂದು ಶಂಕಿಸಲಾಗಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.







Comments