ಮುರುಳ್ಯ: ಬಾವಿಗೆ ಬಿದ್ದು ಐದು ವರ್ಷದ ಅವಳಿ ಮಕ್ಕಳ ದಾರುಣ ಸಾವು

ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ವಸಂತ ಹಾಗೂ ದಿವ್ಯ ದಂಪತಿಗಳ ಐದು ವರ್ಷದ ಅವಳಿ ಮಕ್ಕಳಾದ ಜಸ್ವಿತ್ ಮತ್ತು ಜಾವಿನ್ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮನೆಯ ಸಮೀಪದಲ್ಲಿದ್ದ 15 ಅಡಿ ಆಳದ ಕೆರೆಗೆ (ಬಾವಿ) ಆಟವಾಡುತ್ತಿದ್ದ ಮಕ್ಕಳಿಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಘಟನೆ ವೇಳೆ ಪೋಷಕರು ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ಅಜ್ಜ-ಅಜ್ಜಿ ಮಾತ್ರ ಇದ್ದರು. ಸುಳ್ಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮಕ್ಕಳ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.







Comments