top of page
News Articles
Sathyapatha News Plus


ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ ಡಾ. ಸುಧಾ ಯಾದವ್ ಅವರು ಇಂದು ಬೆಳಗ್ಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಐದು ವರ್ಷಗಳ ಸೇವೆ ಪೂರೈಸಿ ನಿರ್ಗಮಿಸುತ್ತಿರುವ ಥಾವರ್ ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ಇವರನ್ನು ನಿಯೋಜಿಸಲಾಗಿದೆ. ಕಾರ್ಗಿಲ್ ಹುತಾತ್ಮ ಯೋಧನ ಪತ್ನಿಯಾಗಿರುವ ಡಾ. ಸುಧಾ ಯಾದವ್ ಅವರು ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪಡೆದಿದ್ದು, ಮಾಜಿ ಸಂಸದೆಯಾಗಿ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಪ್ರಮುಖ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂ
Oct 161 min read


₹4,200ರ ಟಿಕೆಟ್ ₹12 ಸಾವಿರಕ್ಕೆ? ಕುಕ್ಕೆ ಕ್ಷೇತ್ರದಲ್ಲಿ ಅಧಿಕಾರಿ ವರ್ಗದವರ ವಿರುದ್ಧ ಆರೋಪ!
ಸುಬ್ರಹ್ಮಣ್ಯ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆಯ ಟಿಕೆಟ್ ಹಾಗೂ ರಶೀದಿ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆದು ಸೇವೆ ಮಾಡಿಸಿಕೊಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಸರ್ಪಸಂಸ್ಕಾರ ಸೇವೆಗೆ ದಿನಾಂಕ ಹಾಗೂ ಸ್ಪಾಟ್ಗಳು ಮೊದಲೇ ನಿಗದಿಯಾಗಿದ್ದು, ಟಿಕೆಟ್ಗಳು ಮುಗಿದಿವೆ ಎಂದು ತಿಳಿಸಿದ ಬಳಿಕವೂ ₹4,200ರ ಸೇವೆಯನ್ನು ಸುಮಾರು ₹12 ಸಾವಿರದವರೆಗೆ ಹೆಚ್ಚುವರಿ ಹಣ ಪಡೆದು ಮಾಡಿಸಿಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಹಿಂದೆ ಅಧಿಕಾರಿ ವರ್ಗದವರ ಪಾತ್ರವೂ ಇದೆ ಎಂಬ ಆರೋಪಗಳು ಕೇಳಿ
Oct 161 min read


ಜೈಲಿನಲ್ಲಿದ್ದ ಪ್ರಿಯಕರನನ್ನು ಹೊರತರಲು ಡ್ರಗ್ಸ್ ಸಾಗಾಟಕ್ಕೆ ಇಳಿದ ಯುವತಿ! ರೈಲ್ವೆ ನಿಲ್ದಾಣದಲ್ಲೇ ಲಾಕ್
ವಿಜಯವಾಡ: ಜೈಲಿನಲ್ಲಿದ್ದ ಪ್ರಿಯಕರನನ್ನು ಜಾಮೀನಿನ ಮೇಲೆ ಹೊರತರಬೇಕು... ಆದರೆ ಕೈಯಲ್ಲಿ ಹಣವಿಲ್ಲ. ಇದೇ ಟೈಮಲ್ಲಿ ಬಂದಿದ್ದು ಕಮಿಷನ್ ಆಫರ್. ಪಾಪ, ಹಣದ ಆಸೆಗೆ ಡ್ರಗ್ಸ್ ಸಾಗಾಟಕ್ಕೆ ಇಳಿದ ಯುವತಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ ! ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ಈಗಲ್ ಹಾಗೂ ಜಿಆರ್ಪಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 110 ಗ್ರಾಂ ಎಂಡಿಎಂಎ (MDMA) ಸಾಗಿಸುತ್ತಿದ್ದ ನಾಗಸೌಮ್ಯ ಎಂಬ ಯುವತಿಯನ್ನು ಬಂಧಿಸಿದ್ದಾರೆ. ಈಕೆಗೆ ಡ್ರಗ್ಸ್ ಸಾಗಾಟಕ್ಕೆ ಆಮಿಷವೊಡ್ಡಿದ್ದಾನೆ ಎನ್ನಲಾದ ಬಷೀರ್ ಎಂಬಾತನನ್ನೂ ಪೊಲೀಸರು ಬಳಿಕ ಬಂಧಿಸಿದ್ದಾರೆ. ವಿಜಯವಾಡದ ಪಟಮಟ ನಿವಾಸಿ ನಾಗ
Oct 151 min read


ರೇಷನ್ ಕಾರ್ಡ್ e-KYC ಇನ್ನು ಮನೆಯಲ್ಲೇ: ‘ಅನ್ನಸೇವೆ’ ಆ್ಯಪ್ ಮೂಲಕ 5 ನಿಮಿಷದಲ್ಲಿ ಪೂರ್ಣ
ಬೆಂಗಳೂರು: ಪಡಿತರ ಚೀಟಿ (ರೇಷನ್ ಕಾರ್ಡ್) ಫಲಾನುಭವಿಗಳಿಗೆ ಆಹಾರ ಇಲಾಖೆ ಗುಡ್ನ್ಯೂಸ್ ನೀಡಿದ್ದು, ಇನ್ನು ಮುಂದೆ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ e-KYC ಪೂರ್ಣಗೊಳಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಆಹಾರ ಇಲಾಖೆ ‘ಅನ್ನಸೇವೆ’ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರ ಸರ್ಕಾರದ ನಿಯಮದಂತೆ ರೇಷನ್ ಕಾರ್ಡ್ ಫಲಾನುಭವಿಗಳು ಐದು ವರ್ಷಕ್ಕೊಮ್ಮೆ e-KYC ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿಂದೆ e-KYCಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗೆ ನಗರ ಹಾಗೂ ಪಟ್ಟಣಗಳಿಗ
Oct 151 min read


ದಕ್ಷಿಣ ಕನ್ನಡದಲ್ಲಿ ನವರಾತ್ರಿ ಮೆರವಣಿಗೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್!
ಮಂಗಳೂರು: ನವರಾತ್ರಿ ಹಬ್ಬದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಶಾರದಾ ಮಹೋತ್ಸವ ಹಾಗೂ ಮೆರವಣಿಗೆಗಳ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ನಿಗದಿತ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಬಾರ್ಗಳು, ವೈನ್ ಶಾಪ್ಗಳು ಸೇರಿದಂತೆ ಮದ್ಯ ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳು ಈ ಅವಧಿಯಲ್ಲಿ ಬಂದ್ ಇರಬೇಕಾಗುತ್ತದೆ. ನವರಾತ್ರಿ ಮೆರವಣಿಗೆ ವ
Oct 151 min read


ನವರಾತ್ರಿ ಐದನೇ ದಿನ: ಸ್ಕಂದಮಾತಾ ದೇವಿಯ ಆರಾಧನೆ; ಮಕ್ಕಳ ಕ್ಷೇಮ, ಕುಟುಂಬದ ಶಾಂತಿಗಾಗಿ ವಿಶೇಷ ಪ್ರಾರ್ಥನೆ
ಶಾರದೀಯ ನವರಾತ್ರಿಯ ಐದನೇ ದಿನವನ್ನು ಸ್ಕಂದಮಾತಾ ದೇವಿಯ ಆರಾಧನೆಗೆ ಸಮರ್ಪಿಸಲಾಗಿದೆ. ಪಾರ್ವತಿ ದೇವಿಯ ಐದನೇ ಸ್ವರೂಪವೆಂದು ಪೂಜಿಸಲ್ಪಡುವ ಸ್ಕಂದಮಾತೆ, ತಾಯಿ ಮಮತೆ, ಕರುಣೆ ಮತ್ತು ರಕ್ಷಣೆಯ ಪ್ರತಿರೂಪವಾಗಿ ಭಕ್ತರಿಂದ ಆರಾಧಿಸಲ್ಪಡುತ್ತಾರೆ. ಪುರಾಣಗಳಲ್ಲಿ ಸ್ಕಂದಮಾತೆಯನ್ನು ಸಿಂಹದ ಮೇಲೆ ಆಸೀನಳಾಗಿ, ಮಡಿಲಲ್ಲಿ ಪುತ್ರ ಸ್ಕಂದ ಅಥವಾ ಕಾರ್ತಿಕೇಯನನ್ನು ಹಿಡಿದಿರುವ ದೇವಿಯಾಗಿ ವರ್ಣಿಸಲಾಗಿದೆ. ದೇವಿಯ ಕೈಗಳಲ್ಲಿ ಕಮಲಪುಷ್ಪಗಳಿದ್ದು, ಒಂದು ಕೈಯಲ್ಲಿ ಸ್ಕಂದನನ್ನು ಧರಿಸಿರುವ ಹಾಗೂ ಮತ್ತೊಂದು ಕೈಯಲ್ಲಿ ಅಭಯಮುದ್ರೆಯ ಮೂಲಕ ಭಕ್ತರಿಗೆ ಆಶೀರ್ವಾದ ನೀಡುತ್ತಿರುವ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.
Oct 151 min read


ವಿವಾಹಿತ ಪುತ್ರಿಯರಿಗೂ ತಂದೆಯ ಗೇಣಿ ಆಸ್ತಿಯಲ್ಲಿ ಸಮಾನ ಪಾಲು; ಹೈಕೋರ್ಟ್ ಮಹತ್ವದ ತೀರ್ಪು
ಧಾರವಾಡ: ವಿವಾಹವಾದ ಬಳಿಕವೂ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕು ಮುಂದುವರಿಯುತ್ತದೆ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಕುಟುಂಬದ ಮುಖ್ಯಸ್ಥರಿಗೆ ಗೇಣಿ ಆಧಾರದ ಮೇಲೆ ಮಂಜೂರಾದ ಜಮೀನಿನಲ್ಲಿಯೂ ವಿವಾಹಿತ ಪುತ್ರಿಯರು ಪಾಲು ಪಡೆಯಲು ಅರ್ಹರು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದ ಆಸ್ತಿ ವಿವಾದದ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ಕೆಳಹಂತದ ನ್ಯಾಯಾಲಯಗಳು ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದ್ದು
Oct 141 min read


ನವರಾತ್ರಿ ನಾಲ್ಕನೇ ದಿನ: ಕುಷ್ಮಾಂಡಾ ದೇವಿಯ ಆರಾಧನೆ – ಪೂಜಾ ವಿಧಾನ, ಮಂತ್ರ ಮತ್ತು ಮಹತ್ವ
ಶಾರದೀಯ ನವರಾತ್ರಿಯ ನಾಲ್ಕನೇ ದಿನವಾದ ಇಂದು ನವದುರ್ಗೆಯ ನಾಲ್ಕನೇ ಸ್ವರೂಪವಾದ ಕುಷ್ಮಾಂಡಾ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತಿದೆ. ದೇವಿಯ ಆರಾಧನೆಯಿಂದ ಆರೋಗ್ಯ, ಆಯಸ್ಸು, ಸಮೃದ್ಧಿ ಹಾಗೂ ಆತ್ಮಸ್ಥೈರ್ಯ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಪುರಾಣಗಳ ಪ್ರಕಾರ, ಸೃಷ್ಟಿಯ ಆರಂಭದಲ್ಲಿ ಎಲ್ಲೆಡೆ ಕತ್ತಲೆ ಆವರಿಸಿದ್ದ ಸಂದರ್ಭದಲ್ಲಿ ಕುಷ್ಮಾಂಡಾ ದೇವಿಯ ದಿವ್ಯ ನಗುವಿನಿಂದ ಬ್ರಹ್ಮಾಂಡ ಸೃಷ್ಟಿಯಾಯಿತು ಎಂದು ಹೇಳಲಾಗುತ್ತದೆ. ಹೀಗಾಗಿ ಆಕೆಯನ್ನು ಬ್ರಹ್ಮಾಂಡದ ಸೃಷ್ಟಿಯೊಂದಿಗೆ ಸಂಬಂಧಿಸಿದ ದೇವಿಯಾಗಿ ಪೂಜಿಸಲಾಗುತ್ತದೆ. ಕುಷ್ಮಾಂಡಾ ದೇವಿಯನ್ನು ಸಾಮಾನ್ಯವಾಗಿ ಅಷ್ಟಭುಜಾ ರೂಪದಲ್ಲಿ ಆರ
Oct 141 min read


ಬಿಹಾರದ ಹುಡುಗನಿಗಾಗಿ ರಷ್ಯಾದಿಂದ ಬಂದ ಯುವತಿ! ಪ್ರೀತಿಗೆ ಗಡಿ ಇಲ್ಲ ಮಾರಾಯ್ರೆ!
ಬಿಹಾರದ ಯುವಕನೊಬ್ಬ ಉದ್ಯೋಗಕ್ಕಾಗಿ ರಷ್ಯಾಕ್ಕೆ ಹೋಗಿದ್ದ. ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರಷ್ಯಾದ ಯುವತಿಯೊಬ್ಬಳ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರ ನಡುವಿನ ಪ್ರೀತಿ ಗಟ್ಟಿಯಾಗುತ್ತಿದ್ದಂತೆ ಕಥೆ ಈಗ ಬಿಹಾರದವರೆಗೂ ಬಂದಿದೆ. ಆದ್ರೆ, ಕಥೆ ಇಲ್ಲಿಗೆ ಮುಗಿಯಲಿಲ್ಲ! ಕೆಲವು ಸಮಯದ ಬಳಿಕ ಯುವಕ ರಾಹುಲ್ ಯಾದವ್ ಭಾರತಕ್ಕೆ ವಾಪಸ್ ಬಂದಿದ್ದಾರೆ. ಪ್ರೀತಿಸಿದವನನ್ನು ಬಿಟ್ಟು ಇರಲು ಸಾಧ್ಯವಾಗದ ರಷ್ಯಾ ಯುವತಿ, ಸುಮಾರು ಆರು ತಿಂಗಳ ಬಳಿಕ ತನ್ನ ಕುಟುಂಬದವರ ಜೊತೆ ಭಾರತಕ್ಕೆ ಬಂದಿದ್ದಾರೆ. ಭಾರತಕ್ಕೆ ಬಂದ ಬಳಿಕ ರಾಹುಲ್ ಎಲ್ಲಿದ್ದಾರೆ ಎಂಬ ಹುಡುಕಾಟವೂ ನಡೆದಿದೆ. ರಾಹುಲ್ ಅಡಗಿಕೊ
Oct 131 min read


Big Breaking | ಸುಳ್ಯದಲ್ಲಿ ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ವಿದ್ಯುತ್ ಶಾಕ್ಗೆ ಬಲಿಯಾಗಿರುವ ದಾರುಣ ಘಟನೆ ಅಕ್ಟೋಬರ್ 12ರ ರಾತ್ರಿ ನಡೆದಿದೆ. ತೋಡಿನ ಪಕ್ಕದ ಅಡಿಕೆ ತೋಟಕ್ಕೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತರನ್ನು ಕಲ್ಮಡ್ಕ ನಿವಾಸಿ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ರಮೇಶ್ ಅಲಿಯಾಸ್ ಗಣೇಶ್ (36) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅವರೊಂದಿಗೆ ತೆರಳಿದ್ದ ಅಪ್ರಾಪ್ತ ಬಾಲಕನಿಗೂ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡ
Oct 131 min read


ನವರಾತ್ರಿ ಮೂರನೇ ದಿನ: ತಾಯಿ ಚಂದ್ರಘಂಟಾ ದೇವಿಯ ಆರಾಧನೆ, ಪೂಜಾ ವಿಧಿ ಮತ್ತು ಪೌರಾಣಿಕ ಕಥೆ
ಶಾರದೀಯ ನವರಾತ್ರಿಯ ಮೂರನೇ ದಿನ ತಾಯಿ ಚಂದ್ರಘಂಟಾ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ ವಿವಿಧ ರೂಪಗಳನ್ನು ಪೂಜಿಸುವ ಸಂಪ್ರದಾಯವಿದ್ದು, ಮೂರನೇ ದಿನ ಚಂದ್ರಘಂಟಾ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ದೇವಿಯ ಆರಾಧನೆಯಿಂದ ಭಕ್ತರಿಗೆ ಧೈರ್ಯ, ಶಕ್ತಿ ಹಾಗೂ ಸಂಕಷ್ಟಗಳಿಂದ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ. ಚಂದ್ರಘಂಟಾ ದೇವಿಯ ಪೂಜಾ ವಿಧಿ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಿ, ಪೂಜಾ ಸ್ಥಳದಲ್ಲಿ ಚಂದ್ರಘಂಟಾ ದೇವಿಯ ಚಿತ್ರ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಬಳಿಕ ದೇವಿಗೆ ಗಂಗಾಜಲ, ಕೇಸರಿ ಹಾಗೂ ಹ
Oct 132 min read


ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ
ನವದೆಹಲಿ: ದೇಶದ ಹಲವು ರಾಜ್ಯಗಳ ರಾಜ್ಯಪಾಲರ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಂತೆ, ಸಿಕ್ಕಿಂನ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇನ್ನು ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರಾಗಿ
Oct 121 min read


ಮಾಟ-ಮಂತ್ರದ ಹೆಸರಲ್ಲಿ ಮಹಿಳೆಗೆ ಕಿರುಕುಳದ ಆರೋಪ; ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿ ಈಗ ಪೊಲೀಸರ ಕೈಗೆ!
ಚಿಕ್ಕಮಗಳೂರು: ಮಾಟ-ಮಂತ್ರ, ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ನಂಬಿಸಿ, ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಬೇಕಾಗಿದ್ದ ಸತೀಶ್ ಪಾತ್ರಿ ಎಂಬಾತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಹಾಸನ ಮೂಲದ ಮಹಿಳೆಯನ್ನು ಕೊಪ್ಪ ತಾಲೂಕಿನ ಮೇಕನಹಾಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದ ಪ್ರದೇಶಕ್ಕೆ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿ ಭಾಗಕ್ಕೆ ಕರೆದುಕೊಂಡು ಹೋಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಮಾಟ-ಮಂತ್ರ, ದೆವ್ವ
Oct 121 min read


ದಸರಾ ಹಬ್ಬದ ರಜೆ ನೀಡದೆ ಪರೀಕ್ಷೆ: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮಂಗಳೂರು: ದಸರಾ ಹಬ್ಬದ ಸಂಭ್ರಮದ ನಡುವೆಯೂ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ, ನಗರದ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಕ್ಟೋಬರ್ 28ರವರೆಗೆ ಪರೀಕ್ಷೆಗಳನ್ನು ಆಯೋಜಿಸಲಾಗಿದ್ದು, ದಸರಾ ರಜೆ ನೀಡದೆ ಆಡಳಿತ ಮಂಡಳಿ ಉದ್ದಟತನ ಪ್ರದರ್ಶಿಸಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಬ್ಬದ ಆಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಬಲದೊಂದಿಗೆ ನೂರಾರು ವಿದ್ಯ
Oct 121 min read


ವಿಶೇಷ ಎಸ್ಐಆರ್ ಅಕ್ರಮ ಖಂಡಿಸಿ ವಿಪಕ್ಷಗಳಿಂದ 'ಸುಪ್ರೀಂ ಕೋರ್ಟ್ ಚಲೋ': ದೆಹಲಿಯಲ್ಲಿ ಮೆಟ್ರೋ ಬಂದ್, ಸಂಚಾರ ಅಸ್ತವ್ಯಸ್ತ
ನವದೆಹಲಿ: ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟವು ಇಂದು ದೆಹಲಿಯಲ್ಲಿ ಬೃಹತ್ 'ಸುಪ್ರೀಂ ಕೋರ್ಟ್ ಚಲೋ' ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತಾ ಮುನ್ನೆಚ್ಚರಿಕೆಯಾಗಿ ಕೇಂದ್ರ ದೆಹಲಿಯ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಪಟೇಲ್ ಚೌಕ್, ಜನಪಥ್, ಮಂಡಿ ಹೌಸ್ ಮತ್ತು ಬಾರಾಖಂಬಾ ರಸ್ತೆಯ ಪ್ರಮುಖ 6 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್
Oct 121 min read


ನವರಾತ್ರಿ ದ್ವಿತೀಯ ದಿನ: ಬ್ರಹ್ಮಚಾರಿಣಿ ದೇವಿಯ ಆರಾಧನೆ, ಕಥೆ ಮತ್ತು ಪೂಜಾ ವಿಧಾನ
ನವರಾತ್ರಿ ದ್ವಿತೀಯ ದಿನ: ಬ್ರಹ್ಮಚಾರಿಣಿ ದೇವಿಯ ಆರಾಧನೆ ಶಿವನನ್ನು ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡಿದ ಪಾರ್ವತಿ | ಭಕ್ತಿ, ತಪಸ್ಸು ಮತ್ತು ಶಾಂತಿಯ ಸಂಕೇತ ಬ್ರಹ್ಮಚಾರಿಣಿ ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ನವದುರ್ಗೆಯ ಎರಡನೇ ಸ್ವರೂಪವಾಗಿರುವ ಬ್ರಹ್ಮಚಾರಿಣಿ ದೇವಿಯು ತಪಸ್ಸು, ತ್ಯಾಗ, ಭಕ್ತಿ ಹಾಗೂ ಸಂಯಮದ ಪ್ರತೀಕವಾಗಿ ಪರಿಗಣಿಸಲ್ಪಡುತ್ತಾಳೆ. ಪುರಾಣಗಳ ಪ್ರಕಾರ, ದಕ್ಷಮಹಾರಾಜನ ಪುತ್ರಿ ಸತಿ ದೇವಿ ಯಜ್ಞಕುಂಡದಲ್ಲಿ ಪ್ರಾಣತ್ಯಾಗ ಮಾಡಿದ ಬಳಿಕ, ಹಿಮವಂತ ಪರ್ವತರಾಜನ ಪುತ್ರಿಯಾಗಿ ಪಾರ್ವತಿ ದೇವಿಯಾಗಿ ಪುನರ್ಜನ್ಮ ಪಡೆದಳು. ಹಿ
Oct 121 min read


ಕಾರು ಹಾಗೂ ಬೈಕ್ ಭೀಕರ ಅಪಘಾತ: ಸುಳ್ಯದ ಇಯಾಸ್ ಸೇರಿ ಮೂವರು ಸಾವು
ಕೇರಳದ ನೆಡುಂಬಸ್ಸೇರಿ ಸಮೀಪದ ಮೂಝಿಯಲ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಕೊಡಗಿನ ಇಯಾಸ್ (22), ವಯನಾಡಿನ ದೇವಿಕಾ ಹಾಗೂ ಪಾಲಕ್ಕಾಡ್ನ ಗೋಪಿಕಾ ಸೇರಿದಂತೆ ಮೂವರು ದುರ್ಮರಣ ಹೊಂದಿದ್ದಾರೆ. ಭಾನುವಾರ ಮುಂಜಾನೆ 1.45ರ ಸುಮಾರಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರೊಂದು ಹಿಂದಿನಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಮೂವರಿಗೂ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಇವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದುರ್ಘಟನೆ ಕುರಿತು ನೆಡು
Oct 111 min read


ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಅಸಮಾಧಾನ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲೇ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಆಯೋಜಿಸಲು ಹೊರಟಿರುವ ಸರ್ಕಾರದ ನಿರ್ಧಾರಕ್ಕೆ ಯದುವಂಶದ ಮಹಾರಾಜ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ, ದಸರಾ ಮಹೋತ್ಸವ ನಡೆಯುವ ಪವಿತ್ರ ಸಂದರ್ಭದಲ್ಲೇ ಕಂಬಳವನ್ನು ಯಾಕೆ ಆಯೋಜಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದು ಮೈಸೂರಿನ ಸ್ಥಳೀಯರ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಟೀಕಿ
Oct 111 min read


ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ
ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಪ್ರಮುಖ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಭೀಕರ ಕ್ಷಿಪಣಿ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ. ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ತೀವ್ರ ಆತಂಕ ಹಾಗೂ ಯುದ್ಧದ ಕಾರ್ಮೋಡವನ್ನು ಮತ್ತಷ್ಟು ದಟ್ಟವಾಗಿಸಿದೆ. ದಾಳಿಯ ವಿವರಗಳು ಮತ್ತು ಸಾವು-ನೋವುಗಳು ದೇಶೀಯ ವಿಮಾನಗಳ ಟರ್ಮಿನಲ್ಗಳಾದ 3 ಮತ್ತು 4 ಅನ್ನು ಒಳಗೊಂಡಿರುವ ವಿಮಾನ ನಿಲ್ದಾಣದ ಸಂಕೀರ್ಣಕ್ಕೆ ಈ ಕ್ಷಿಪಣಿ ಅಪ್ಪಳಿಸಿದೆ. ಮೃತಪಟ್ಟ 12 ವ್ಯಕ್ತಿಗಳಲ್ಲಿ ನಾಲ್ವರು ಸೌದಿ ಪ್ರಜೆಗಳು, ಇಬ್ಬರು ಬಾಂಗ್ಲಾದ
Oct 111 min read


ಇಂದು ನವರಾತ್ರಿ ಆರಂಭ; ನವದುರ್ಗೆಯ ಮೊದಲ ಅವತಾರ ಶೈಲಪುತ್ರಿ ಪೂಜೆ
ನವರಾತ್ರಿ ಮೊದಲ ದಿನ: ಶೈಲಪುತ್ರಿ ಪೂಜೆ ನವರಾತ್ರಿಯ ಮೊದಲ ದಿನವನ್ನು ಶೈಲಪುತ್ರಿ ದೇವಿಯ ಆರಾಧನೆಗೆ ಮೀಸಲಿಡಲಾಗಿದೆ. ಶೈಲಪುತ್ರಿಯನ್ನು ಪೂಜಿಸುವ ಮೂಲಕ ಭಕ್ತರು ನವರಾತ್ರಿಯ ಉಪವಾಸವನ್ನು ಪ್ರಾರಂಭಿಸುತ್ತಾರೆ. ಶೈಲಪುತ್ರಿ ಯಾರು? ಶೈಲಪುತ್ರಿಯು ಪರ್ವತ ರಾಜ ಹಿಮವಂತನ ಮಗಳು. ಈಕೆಯು ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಯ ಮಗಳಾದ ದಾಕ್ಷಾಯಿಣಿ ಆಗಿದ್ದಳು. ದಕ್ಷನು ತನ್ನ ಯಜ್ಞಕ್ಕೆ ಶಿವ ಮತ್ತು ದಾಕ್ಷಾಯಿಣಿಯನ್ನು ಆಹ್ವಾನಿಸಿದೆ, ಶಿವನನ್ನು ಅವಮಾನಿಸಿದನು. ಇದರಿಂದ ಮನನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ನಂತರದ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ಪಾರ
Oct 111 min read
Archive
bottom of page



