ಬಿಹಾರದ ಹುಡುಗನಿಗಾಗಿ ರಷ್ಯಾದಿಂದ ಬಂದ ಯುವತಿ! ಪ್ರೀತಿಗೆ ಗಡಿ ಇಲ್ಲ ಮಾರಾಯ್ರೆ!

ಬಿಹಾರದ ಯುವಕನೊಬ್ಬ ಉದ್ಯೋಗಕ್ಕಾಗಿ ರಷ್ಯಾಕ್ಕೆ ಹೋಗಿದ್ದ. ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರಷ್ಯಾದ ಯುವತಿಯೊಬ್ಬಳ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರ ನಡುವಿನ ಪ್ರೀತಿ ಗಟ್ಟಿಯಾಗುತ್ತಿದ್ದಂತೆ ಕಥೆ ಈಗ ಬಿಹಾರದವರೆಗೂ ಬಂದಿದೆ.
ಆದ್ರೆ, ಕಥೆ ಇಲ್ಲಿಗೆ ಮುಗಿಯಲಿಲ್ಲ!
ಕೆಲವು ಸಮಯದ ಬಳಿಕ ಯುವಕ ರಾಹುಲ್ ಯಾದವ್ ಭಾರತಕ್ಕೆ ವಾಪಸ್ ಬಂದಿದ್ದಾರೆ. ಪ್ರೀತಿಸಿದವನನ್ನು ಬಿಟ್ಟು ಇರಲು ಸಾಧ್ಯವಾಗದ ರಷ್ಯಾ ಯುವತಿ, ಸುಮಾರು ಆರು ತಿಂಗಳ ಬಳಿಕ ತನ್ನ ಕುಟುಂಬದವರ ಜೊತೆ ಭಾರತಕ್ಕೆ ಬಂದಿದ್ದಾರೆ.
ಭಾರತಕ್ಕೆ ಬಂದ ಬಳಿಕ ರಾಹುಲ್ ಎಲ್ಲಿದ್ದಾರೆ ಎಂಬ ಹುಡುಕಾಟವೂ ನಡೆದಿದೆ. ರಾಹುಲ್ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದರೂ, ಯುವತಿ ಮಾತ್ರ ಹಿಂದೆ ಸರಿಯಲಿಲ್ಲ ಎನ್ನಲಾಗಿದೆ. “ಅವರ ಜೊತೆಗೇ ಇರುತ್ತೇನೆ” ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾರೆ.
ಇದನ್ನು ಕೇಳಿದ ಎರಡೂ ಕುಟುಂಬದ ಹಿರಿಯರು ಮಾತುಕತೆ ನಡೆಸಿದ್ದಾರೆ. ಕೊನೆಗೆ ಇಬ್ಬರ ಪ್ರೀತಿಗೆ ಒಪ್ಪಿಗೆ ಸಿಕ್ಕಿದ್ದು, ನವೆಂಬರ್‌ನಲ್ಲಿ ಇವರಿಬ್ಬರ ಮದುವೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಒಂದು ಕಡೆ ಉದ್ಯೋಗಕ್ಕಾಗಿ ರಷ್ಯಾಕ್ಕೆ ಹೋದ ಬಿಹಾರದ ಹುಡುಗ… ಇನ್ನೊಂದು ಕಡೆ ಪ್ರೀತಿಗಾಗಿ ಕುಟುಂಬ ಸಮೇತ ಭಾರತಕ್ಕೆ ಬಂದ ರಷ್ಯಾ ಯುವತಿ. ಪ್ರೀತಿಗೆ ಪಾಸ್‌ಪೋರ್ಟ್, ವೀಸಾ, ಗಡಿ ಯಾವುದೂ ಅಡ್ಡಿಯಾಗಲಿಲ್ಲ ಅನ್ನೋ ಹಾಗಾಗಿದೆ!
ಇನ್ನು ನವೆಂಬರ್‌ನಲ್ಲಿ ನಡೆಯಲಿರುವ ಈ ಮದುವೆಯತ್ತ ಎಲ್ಲರ ಕಣ್ಣು. ಪ್ರೀತಿಯ ಈ ಕಥೆ ಯಾವ ಲೆವೆಲ್‌ಗೆ ಹೋಗುತ್ತದೆ ಅನ್ನೋದು ನೋಡಬೇಕಷ್ಟೇ.







Comments