;
top of page

₹4,200ರ ಟಿಕೆಟ್ ₹12 ಸಾವಿರಕ್ಕೆ? ಕುಕ್ಕೆ ಕ್ಷೇತ್ರದಲ್ಲಿ ಅಧಿಕಾರಿ ವರ್ಗದವರ ವಿರುದ್ಧ ಆರೋಪ!

Oct 16
1 min read

ಸುಬ್ರಹ್ಮಣ್ಯ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆಯ ಟಿಕೆಟ್ ಹಾಗೂ ರಶೀದಿ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆದು ಸೇವೆ ಮಾಡಿಸಿಕೊಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸರ್ಪಸಂಸ್ಕಾರ ಸೇವೆಗೆ ದಿನಾಂಕ ಹಾಗೂ ಸ್ಪಾಟ್‌ಗಳು ಮೊದಲೇ ನಿಗದಿಯಾಗಿದ್ದು, ಟಿಕೆಟ್‌ಗಳು ಮುಗಿದಿವೆ ಎಂದು ತಿಳಿಸಿದ ಬಳಿಕವೂ ₹4,200ರ ಸೇವೆಯನ್ನು ಸುಮಾರು ₹12 ಸಾವಿರದವರೆಗೆ ಹೆಚ್ಚುವರಿ ಹಣ ಪಡೆದು ಮಾಡಿಸಿಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದರ ಹಿಂದೆ ಅಧಿಕಾರಿ ವರ್ಗದವರ ಪಾತ್ರವೂ ಇದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ವಿಚಾರ ಭಕ್ತರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಒಂದು ತಂಡ ₹12 ಸಾವಿರ ಪಾವತಿಸಿ ಸರ್ಪಸಂಸ್ಕಾರ ಸೇವೆ ಮಾಡಿಸಿಕೊಂಡಿದೆ ಎನ್ನಲಾಗುತ್ತಿದೆ. ಇದೇ ರೀತಿಯಲ್ಲಿ ಮತ್ತೊಂದು ತಂಡಕ್ಕೂ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ಹಣ ಸ್ವೀಕರಿಸಲಾಗಿತ್ತು ಎನ್ನಲಾಗಿದ್ದು, ಬಳಿಕ ಸೇವೆ ಮಾಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಸಮಾಧಾನ ಉಂಟಾಗಿ ದೇವಸ್ಥಾನದ ಆಡಳಿತ ಕಚೇರಿ ಬಳಿ ಗಲಾಟೆ ನಡೆದಿರುವುದಾಗಿ ಹೇಳಲಾಗುತ್ತಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬಂದಿದ್ದರು ಎಂಬ ಮಾತುಗಳು ಕ್ಷೇತ್ರದ ಸುತ್ತಮುತ್ತ ಕೇಳಿಬರುತ್ತಿವೆ.

ಸಾಮಾನ್ಯ ಭಕ್ತರಿಗೆ ಟಿಕೆಟ್ ಇಲ್ಲ ಅಂತ ಹೇಳಿ, ಹಣ ಕೊಟ್ಟವರಿಗೆ ಬೇರೆ ದಾರಿ ಇದೆಯಾ? ₹4,200ರ ಸೇವೆ ₹12 ಸಾವಿರಕ್ಕೆ ಹೋಗಿದ್ದು ಹೇಗೆ? ಈ ಹಣದ ವ್ಯವಹಾರದಲ್ಲಿ ಯಾರ್ಯಾರು ಇದ್ದಾರೆ? ಅಧಿಕಾರಿ ವರ್ಗದವರ ಪಾತ್ರ ಏನು? ಎಂಬ ಪ್ರಶ್ನೆಗಳಿಗೆ ಇದೀಗ ಸ್ಪಷ್ಟ ಉತ್ತರ ಬೇಕಾಗಿದೆ.

ಈ ಆರೋಪಗಳ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು



Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page