top of page
News Articles
Sathyapatha News Plus


ವಿದ್ಯುತ್ ಸ್ಪರ್ಶಿಸಿ ಲೈನ್ಮ್ಯಾನ್ ರವಿ ಗೌಡ ದಾರುಣ ಸಾವು
ಕೆದಿಲದಲ್ಲಿ ಶನಿವಾರ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ಮ್ಯಾನ್ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಕೆಮ್ಮಾಯಿ ನಿವಾಸಿ ರವಿ ಗೌಡ ಎಂದು ಗುರುತಿಸಲಾಗಿದೆ. ಅವರು ಕೆದಿಲ, ಪಾಟ್ರಕೋಡಿ, ಮಿತ್ತೂರು ಮತ್ತು ಗಡಿಯಾರ ಭಾಗಗಳಲ್ಲಿ ಸೇವೆಯಲ್ಲಿದ್ದರು. ಯಾವುದೇ ವಿದ್ಯುತ್ ದೂರು ಬಂದರೂ ತಕ್ಷಣ ಸ್ಪಂದಿಸುತ್ತಿದ್ದ ರವಿ, ತಮ್ಮ ಅತ್ಯುತ್ತಮ ಸೇವಾ ಮನೋಭಾವದಿಂದ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದರು. ಶನಿವಾರ ಕೆಲಸದ ವೇಳೆಯಲ್ಲೇ ಈ ದುರಂತ ಸಂಭವಿಸಿದ್ದು, ಸದಾ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತಿದ್ದ ದಕ್ಷ ಸಿಬ್ಬಂದಿಯ ಅಕಾಲಿಕ ಅಗಲಿಕೆ ಸ್ಥಳೀಯ ನಿವಾಸಿಗ
Oct 41 min read


ಫ್ಲೈದುಬೈ ವಿಮಾನ ಪತನದಂಚಿಗೆ: ಸಹ ಪೈಲಟ್ ಹಿನ್ನೆಲೆ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ
182 ಜನರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆ ಇದೀಗ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ. ವಿಮಾನವನ್ನು ಅಪಾಯಕ್ಕೆ ತಳ್ಳಿದ ಆರೋಪ ಎದುರಿಸುತ್ತಿರುವ ಸಹ ಪೈಲಟ್ಗೆ ಈ ಹಿಂದೆ ಒಮಾನ್ನಲ್ಲಿ ವಿಮಾನ ಹಾರಾಟ ನಡೆಸದಂತೆ ನಿಷೇಧಿಸಲಾಗಿತ್ತು ಎಂಬ ಮಾಹಿತಿ ಹೊರಬಂದಿದೆ. ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವ ವ್ಯಕ್ತಿಯೊಬ್ಬರ ಪ್ರಕಾರ, ಸಹ ಪೈಲಟ್ ಉಗ್ರವಾದಿ ವಿಚಾರಧಾರೆಗಳಿಗೆ ಒಲವು ಹೊಂದಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಒಮಾನ್ನಲ್ಲಿ ಆತನಿಗೆ ಹಾರಾಟ ನಿರ್ಬಂಧ ವಿಧಿಸಲಾಗಿತ್ತು. ಆದರೆ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ವಿಮಾನಯಾನ ಸ
Oct 32 min read


ಸಾಲ ತೀರಿಸಲು ಕಿಡ್ನ್ಯಾಪ್ ನಾಟಕ; ತಂದೆಯಿಂದ ₹90 ಲಕ್ಷಕ್ಕೆ ಡಿಮ್ಯಾಂಡ್
ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಕಥೆ ಕಟ್ಟಿದ 40 ವರ್ಷದ ವ್ಯಕ್ತಿ; ಇಬ್ಬರು ಸ್ನೇಹಿತರ ಜೊತೆ ಬಂಧನ ಬೆಂಗಳೂರು: ಸಾಲದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ಸಾಲ ತೀರಿಸಲು ತನ್ನದೇ ಕಿಡ್ನ್ಯಾಪ್ ನಾಟಕವಾಡಿ, ತಂದೆಯಿಂದಲೇ ₹90 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೀಷ್ (40) ಎಂಬಾತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಹೆದರಿಕೆ ಹುಟ್ಟಿಸುವಂತೆ ಕಿಡ್ನ್ಯಾಪ್ ಕಥೆ ಕಟ್ಟಿದ್ದಾನೆ. ಸ್ನೇಹಿತರ ಮೂಲಕ ಮನೀಷ್ನದೇ ಮೊಬೈಲ್ ಸಂಖ್ಯೆಯಿಂದ ತಂದೆಗೆ ವಾಟ್ಸಾಪ್ ಕರೆ ಮಾಡಿಸಿ, “ನಿಮ್ಮ ಮಗನನ್ನು ಕಿಡ್ನ್ಯ
Oct 21 min read


ಬ್ಯಾಂಕ್ಗಳಿಗೆ ಪ್ರತಿ ಶನಿವಾರ ರಜೆ? ಸಾಮಾಜಿಕ ಜಾಲತಾಣದ ಪೋಸ್ಟ್ನ ಅಸಲಿಯತ್ತು ಏನು?
ನವದೆಹಲಿ: ಬ್ಯಾಂಕ್ಗಳಿಗೆ ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ರಜೆ ಇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೇಂದ್ರ ಹಣಕಾಸು ಇಲಾಖೆ ಹೊರಡಿಸಿರುವ ಗೆಜೆಟ್ ಆದೇಶ ಎಂದು ಹೇಳಲಾಗುತ್ತಿರುವ ದಾಖಲೆಯೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದರಿಂದ ಬ್ಯಾಂಕ್ ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ಆದರೆ, ಈ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (PIB) ಫ್ಯಾಕ್ಟ್ಚೆಕ್ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದೇಶದ ಪ್ರತಿ ನಕಲಿ ಎಂದು ತಿಳಿಸಿದೆ. ಪ್ರತಿ ಶನಿವಾರ ಬ್ಯಾಂಕ್ ರಜೆ ಘೋಷಣೆಯಾಗಿದೆಯೇ? PIB
Oct 11 min read


ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ 'ಸುಳ್ಯ ಕಬಡ್ಡಿ ಉತ್ಸವ 2026' ಸಂಭ್ರಮ: ಕಣಕ್ಕಿಳಿಯಲಿದರೆ ಖ್ಯಾತ ಪ್ರೊ ಕಬಡ್ಡಿ ತಾರೆಯರು!
ಸುಳ್ಯ: ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಸುಳ್ಯ ಸಜ್ಜಾಗಿದ್ದು, ಸುಳ್ಯ ಪೇಟೆ ವಿಶೇಷ ಲೈಟಿಂಗ್ನಿಂದ ಜಾತ್ರೆಯಂತೆ ಕಂಗೊಳಿಸುತ್ತಿದೆ. ಧ್ವನಿ, ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಹಾಗೂ ಡೆಕೋರೇಷನ್ ಮಾಲಕರ ಸಹಯೋಗದಲ್ಲಿ ‘ಸುಳ್ಯ ಕಬಡ್ಡಿ ಉತ್ಸವ 2026’ ಆಯೋಜಿಸಲಾಗಿದೆ. ಅಕ್ಟೋಬರ್ 3 ಮತ್ತು 4ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ A ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ದೇಶದ ವಿವಿಧ ಭಾಗಗಳ ಪ್ರೊ ಕಬಡ್ಡಿ ಆಟಗಾರರನ್ನು ಒಳಗೊಂಡ 12 ತಂಡಗಳು ಕಣಕ್ಕಿಳಿಯಲಿವೆ. ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ₹70 ಸ
Oct 11 min read


ಸೌಜನ್ಯ ಅತ್ಯಾಚಾರ–ಹತ್ಯೆ ಪ್ರಕರಣ: 14 ವರ್ಷಗಳ ಬಳಿಕ ಇಂದಿನಿಂದ SIT ಮರುತನಿಖೆ
ಮಂಗಳೂರು: ಧರ್ಮಸ್ಥಳದ ಬಳಿ 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಬಳಿಕ ಮತ್ತೆ ತನಿಖೆ ಆರಂಭವಾಗಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ಇಂದಿನಿಂದ ಪ್ರಕರಣದ ಮರುತನಿಖೆ ಕೈಗೆತ್ತಿಕೊಳ್ಳಲಿದೆ. SIT ತನಿಖಾ ದಳದ ಮುಖ್ಯಸ್ಥರಾಗಿರುವ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ನೇತೃತ್ವದ ತಂಡ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ಚರ್ಚೆ ನಡೆಸಿದೆ. 2012ರಲ್ಲಿ 17 ವರ್ಷದ ಸೌಜನ್ಯ ಮೇಲ
Oct 11 min read
Archive
bottom of page



