;
top of page

ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ 'ಸುಳ್ಯ ಕಬಡ್ಡಿ ಉತ್ಸವ 2026' ಸಂಭ್ರಮ: ಕಣಕ್ಕಿಳಿಯಲಿದರೆ ಖ್ಯಾತ ಪ್ರೊ ಕಬಡ್ಡಿ ತಾರೆಯರು!

Oct 1
1 min read


ಸುಳ್ಯ: ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಸುಳ್ಯ ಸಜ್ಜಾಗಿದ್ದು, ಸುಳ್ಯ ಪೇಟೆ ವಿಶೇಷ ಲೈಟಿಂಗ್‌ನಿಂದ ಜಾತ್ರೆಯಂತೆ ಕಂಗೊಳಿಸುತ್ತಿದೆ.


ಧ್ವನಿ, ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಹಾಗೂ ಡೆಕೋರೇಷನ್ ಮಾಲಕರ ಸಹಯೋಗದಲ್ಲಿ ‘ಸುಳ್ಯ ಕಬಡ್ಡಿ ಉತ್ಸವ 2026’ ಆಯೋಜಿಸಲಾಗಿದೆ. ಅಕ್ಟೋಬರ್ 3 ಮತ್ತು 4ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ A ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.


ದೇಶದ ವಿವಿಧ ಭಾಗಗಳ ಪ್ರೊ ಕಬಡ್ಡಿ ಆಟಗಾರರನ್ನು ಒಳಗೊಂಡ 12 ತಂಡಗಳು ಕಣಕ್ಕಿಳಿಯಲಿವೆ. ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ₹70 ಸಾವಿರ ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನಕ್ಕೆ ತಲಾ ₹35 ಸಾವಿರ ಬಹುಮಾನ ನೀಡಲಾಗುತ್ತದೆ.


ಪ್ರೇಕ್ಷಕರಿಗಾಗಿ ಸುಮಾರು 3,000 ಆಸನಗಳ ಗ್ಯಾಲರಿ, ವಿಐಪಿ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಮಳೆ ಸೇರಿದಂತೆ ಯಾವುದೇ ಅಡಚಣೆ ಉಂಟಾಗದಂತೆ ಇಂಡೋರ್ ಮಾದರಿಯ ಶಾಮಿಯಾನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.


ಅಕ್ಟೋಬರ್ 3ರಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಪಂದ್ಯಗಳು ಆರಂಭವಾಗಲಿವೆ. ಮೊದಲ ದಿನದ ಗ್ಯಾಲರಿ ಟಿಕೆಟ್ ದರ ₹200.


ಸುಳ್ಯ ತಾಲೂಕಿನ 130ಕ್ಕೂ ಹೆಚ್ಚು ಲೈಟ್, ಸೌಂಡ್ ಮತ್ತು ಶಾಮಿಯಾನ ಮಾಲಕರ ಒಗ್ಗಟ್ಟಿನಲ್ಲಿ ನಡೆಯುತ್ತಿರುವ ಈ ಕಬಡ್ಡಿ ಉತ್ಸವಕ್ಕೆ ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page